Wednesday, 18th September 2024

ಪದ್ಮಶ್ರೀ ಗುರು ಅರುಣಾ ಮೊಹಾಂತಿ ಅವರ ‘ಸಂಸಾರ’ – ಜೀವನದ ಪರಿಕಲ್ಪನೆಯ ಪ್ರದರ್ಶನ

ಸಂಜಲಿ ಸೆಂಟರ್ ಫಾರ್ ಒಡಿಸ್ಸಿ ಡ್ಯಾನ್ಸ್​​ನಿಂದ ಒಡಿಸ್ಸಿ ದಂತಕಥೆ ಗುರು ಕೇಲುಚರಣ್ ಮೊಹಾಪಾತ್ರ ಸ್ಮರಣಾರ್ಥ ‘ಪ್ರವಾಹ್​ ನೃತ್ಯ ಉತ್ಸವ’ ಆಯೋಜನೆ

• ಖ್ಯಾತ ಒಡಿಸ್ಸಿ ನೃತ್ಯಗಾರ್ತಿ ಶರ್ಮಿಳಾ ಮುಖರ್ಜಿ ಅವರಿಂದ ಸೀತೆಯ ಅಪಹರಣದ ಕುರಿತ ಏಕವ್ಯಕ್ತಿ ಪ್ರದರ್ಶನವಾದ ‘ಸೀತಾಹರಣ್​’ ಪ್ರಸ್ತುತಿ

ಖ್ಯಾತ ಭರತನಾಟ್ಯ ಪಟು ಅನುರಾಧಾ ವಿಕ್ರಾಂತ್ ಮತ್ತು ಅವರ ತಂಡದಿಂದ ಸತ್ಯಂ, ಶಿವಂ ಮತ್ತು ಸುಂದರಂ ಎಂಬ ಮೂರು ತತ್ವಗಳ ಸಂಯೋಜನೆಯಾಗಿರುವ ‘ಐಕ್ಯಂ’ ಪ್ರದರ್ಶನ

ಬೆಂಗಳೂರು: ಒಡಿಸ್ಸಿ ನೃತ್ಯ ಪ್ರಕಾರದ ದಂತಕತೆಯಾಗಿರುವ ಗುರು ಕೇಲುಚರಣ್ ಮೊಹ ಪಾತ್ರ ಅವರ ಪರಂಪರೆಯನ್ನು ಸ್ಮರಿಸುವ ಉದ್ದೇಶದಿಂದ ನಗರದ ಸಂಜಲಿ ಸೆಂಟರ್ ಫಾರ್ ಒಡಿಸ್ಸಿ ಡ್ಯಾನ್ಸ್ ಏಪ್ರಿಲ್ 7 ರಂದು ಸಂಜೆ 6 ಗಂಟೆಗೆ ಮಲ್ಲೇಶ್ವರಂನ ಸೇವಾ ಸದನದಲ್ಲಿ ‘ಪ್ರವಾಹ್ ನೃತ್ಯ ಉತ್ಸವ’ (ಪ್ರವಾಹ್​ ಡಾನ್ಸ್ ಫೆಸ್ಟಿವಲ್​) ಆಯೋಜಿಸಿದೆ.

ಸಂಜಲಿ ಸೆಂಟರ್ ಫಾರ್ ಒಡಿಸ್ಸಿ ಡ್ಯಾನ್ಸ್ ಆಯೋಜಿಸಿರುವ ‘ಪ್ರವಾಹ್​ ನೃತ್ಯ ಉತ್ಸವವು’ ಗುರು ಕೇಲುಚರಣ್ ಮೊಹಪಾತ್ರ ಅವರ ದೃಷ್ಟಿಕೋನ, ಸೃಜನಶೀಲತೆ ಮತ್ತು ಕಲಾತ್ಮಕ ಪ್ರದರ್ಶನ ಗಳ ಆಚರಣೆಯಾಗಿದೆ. ಐದು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ, ಗುರು ಕೇಲುಚರಣ್ ತಮ್ಮ ಹೊಸ ಸಂಯೋಜನೆಗಳಿಂದ ಒಡಿಸ್ಸಿ ನೃತ್ಯ ಪ್ರಕಾರವನ್ನು ಶ್ರೀಮಂತಗೊಳಿಸಿದ್ದರು. ಅವರ ವಿಶಾಲ ದೃಷ್ಟಿಕೋನ ಮತ್ತು ಕಲೆಯ ಮೇಲಿನ ಪ್ರೀತಿಯು ಅವರ ಶಿಷ್ಯವರ್ಗದ ಮೇಲೆ ಪ್ರಭಾವ ಬೀರಿತ್ತು.

ಈ ಶಿಷ್ಯ ವರ್ಗವು ಅನ್ವೇಷಿಸಿ ರುವ ಅಸಾಂಪ್ರದಾಯಿಕ ನೃತ್ಯ ವಿಷಯಗಳು ಆಧನಿಕ ಯುಗದಲ್ಲಿಯೂ ಒಡಿಸ್ಸಿ ನೃತ್ಯವು ಪ್ರಸ್ತುತತೆ ಯನ್ನು ಪಡೆಯುಂತೆ ಮಾಡಿದೆ. ಅಂತೆಯೇ ಗುರು ಕೇಲುಚರಣ್​ ಅವರು ಪ್ರಪಂಚದಾದ್ಯಂತ ತನ್ನ ಶಿಷ್ಯರ ಮೂಲಕ ನೃತ್ಯ ಲೋಕದಲ್ಲಿ ಇಂದಿಗೂ ಜೀವಂತವಾಗಿದ್ದಾರೆ ಅವರ ಶಿಷ್ಯೆಯಾಗಿರುವ ಶರ್ಮಿಳಾ ಮುಖರ್ಜಿ ಅವರು ಕಳೆದ ಹಲವಾರು ವರ್ಷ ಗಳಿಂದ, ‘ಪ್ರವಾಹ್’ ನಂತಹ​ ವಿವಿಧ ಪ್ರದರ್ಶನಗಳು ಮತ್ತು ನೃತ್ಯ ಉತ್ಸವಗಳ ಮೂಲಕ ಬೆಂಗಳೂರಿನಲ್ಲಿ ಒಡಿಸ್ಸಿಯನ್ನು ಮುಂಚೂಣಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಶರ್ಮಿಳಾ ಮುಖರ್ಜಿ ಅವರ ‘ಸೀತಾಹರಣ್​’
ಪ್ರಖ್ಯಾತ ಒಡಿಸ್ಸಿ ಗಾಯಕಿ ಶರ್ಮಿಳಾ ಮುಖರ್ಜಿ ಅವರು ಗುರು ಕೇಲುಚರಣ್ ಮೊಹಪಾತ್ರ ನೃತ್ಯ ಸಂಯೋಜನೆ ಮಾಡಿದ ಅಪರೂಪದ ಏಕವ್ಯಕ್ತಿ ತುಣುಕು “ಸೀತಾಹರಣ್​ ” ಇಲ್ಲಿ ಅನ್ನು ಪ್ರಸ್ತುತಪಡಿಸಲಿದ್ದಾರೆ. ಪಂಚವಟಿಯಲ್ಲಿ ರಾಮ ಮತ್ತು ಸೀತೆಯ ವಾಸ್ತವ್ಯದೊಂದಿಗೆ ಪ್ರದರ್ಶನ ಪ್ರಾರಂಭವಾಗುತ್ತದೆ. ಚಿನ್ನದ ಜಿಂಕೆಯ ವೇಷ ಧರಿಸಿದ ಮಾರೀಚ ಎಂಬ ರಾಕ್ಷಸನು ರಾಮನನ್ನು ಆಕರ್ಷಿಸುವಂತೆ ಮಾಡುತ್ತಾನೆ. ರಾಮನು ಚಿನ್ನದ ಜಿಂಕೆಯನ್ನು ಹಿಡಿಯಲು ಹೊರಡುತ್ತಾನೆ ಹಾಗೂ ಇದರಲ್ಲೊಂದು ಸಂಚು ಇರುವುದನ್ನು ಭಾವಿಸಿ ಪತ್ನಿ ಸೀತೆಯನ್ನು ಕಾಯುವಂತೆ ತಮ್ಮ ಲಕ್ಷ್ಮಣನಿಗೆ ಹೇಳುತ್ತಾನೆ.

ರಾಮನ ಬಾಣದೇಟು ತಿಂದ ಮಾರೀಚ ಸಾಯುವ ವೇಳೆ ರಾಮನೇ ನರಳಿದಂತೆ ಸ್ವರವೆಬ್ಬಿಸುತ್ತಾನೆ. ಭಯಭೀತಳಾದ ಸೀತೆ ಪತಿಯನ್ನು ರಕ್ಷಿಸುವಂತೆ ತನ್ನನ್ನು ಕಾಯುತ್ತಿದ್ದ ಲಕ್ಷ್ಮಣನನ್ನು ಕೋರುತ್ತಾಳೆ. ಆದರೆ, ಅಣ್ಣನ ಆದೇಶ ಮುರಿಯಲು ಲಕ್ಷ್ಮಣ ಮುಂದಾಗುವುದಿಲ್ಲ. ಆದರೂ ಅಣ್ಣನ ರಕ್ಷಣೆ ಅನಿವಾರ್ಯ ಎಂದು ತೋಚಿ, ಮೂರು ರೇಖೆಗಳನ್ನು ಎಳೆದು ಅದನ್ನು ದಾಟ ದಂತೆ ಸೀತೆಗೆ ಹೇಳಿ ಹೋಗುತ್ತಾನೆ. ಆದರೆ, ಕಪಟಿ ರಾವಣ ಭಿಕ್ಷುಕನ ವೇಷದಲ್ಲಿ ಸೀತೆಯ ಬಳಿಗೆ ಬರುತ್ತಾರೆ. ವಂಚನೆ ಅರಿಯದೇ ಸೀತೆ ಲಕ್ಷ್ಮಣ ರೇಖೆಯನ್ನು ದಾಟಿ ಹೊರಬರುತ್ತಾಳೆ. ರಾವಣ ಆಕೆಯನ್ನು ಅಪಹರಿಸಿ ರಥದಲ್ಲಿ ಕೂರಿಸುತ್ತಾನೆ. ಜಟಾಯು ರಾವಣನನ್ನು ಗಾಯಗೊಳಿಸುವ ಮೂಲಕ ಸೀತೆಯನ್ನು ಉಳಿಸಲು ಪ್ರಯತ್ನಿಸುತ್ತಾನೆ. ಆದರೆ ಜಟಾಯುವಿನ ರೆಕ್ಕೆಗಳನ್ನು ರಾವಣನು ಕತ್ತರಿಸುತ್ತಾನೆ ಮತ್ತು ಸೀತೆಯನ್ನು ಲಂಕೆಗೆ ಕರೆದೊಯ್ಯತ್ತಾಣೆ. ಈ ತುಣುಕು ಪ್ರೀತಿ, ದ್ರೋಹ ಮತ್ತು ವಿಧಿಯ ತಿರುವಿನ ಸಾರವನ್ನು ಹೇಳುತ್ತದೆ.

ಪದ್ಮಶ್ರೀ ಅರುಣಾ ಮೊಹಾಂತಿ ಅವರಿಂದ “ಸಂಸಾರ “
‘ಸಂಸಾರ’ ಪ್ರದರ್ಶನವು ಜನನ ಮತ್ತು ಮರಣದ ಚಕ್ರದ ಮೂಲಕ ಆತ್ಮದ ಪ್ರಯಾಣವಾಗಿದೆ. ಇದು ಜೀವನ ಕ್ಷಣಿಕ ಹಾಗೂ ನೀರ ಮೇಲಿನ ಗುಳ್ಳೆ ಎಂಬುದನ್ನು ಸಾರುತ್ತದೆ. ಇಲ್ಲಿ ಒಂದು ಕ್ಷಣ ಮತ್ತು ಮುಂದಿನ ಕ್ಷಣದ ಅನಿಶ್ಚಿತತೆಯನ್ನು ಭಿನ್ನವಿಸಲಾಗುತ್ತದೆ . ನಮ್ಮ ಜೀವನದಲ್ಲಿ ನಮ್ಮನ್ನು ನಿರಂತರವಾಗಿ ಬಂಧಿಸುವ ಅನೇಕ ಮಮಕಾರಗಳಿವೆ. ಆತ್ಮವು ಬಾಲ್ಯದಿಂದ ಯೌವನದಿಂದ ವೃದ್ಧಾಪ್ಯದವರೆಗಿನ ಪ್ರಯಾಣವನ್ನು ಅನುಭವಿಸುತ್ತದೆ. ಜೀವನದ ಚಕ್ರದ ಈ ಹಂತಗಳನ್ನು ನೀವು ಸೌಜನ್ಯದಿಂದ ಒಪ್ಪಿ ಕೊಂಡರೆ, ಮುಂದಿನ ಹಂತವಾದ ಸಾವಿನ ಬಗ್ಗೆ ನಾವು ಏಕೆ ಹೆದರುತ್ತೇವೆ? ಆತ್ಮವನ್ನು ‘ಸಂಸಾರ’ದಿಂದ ಮುಕ್ತಗೊಳಿಸುವ ಏಕೈಕ ಮಾರ್ಗವೆಂದರೆ “ಭಜ ಗೋವಿಂದಂ ಭಜ ಗೋವಿಂದಂ ಭಜ ಮುದ್ದಮತೆ” ಎಂದು ಜ್ಞಾನೋದಯ . ಗುರು ಅರುಣಾ ಮೊಹಾಂತಿ ನೃತ್ಯ ಸಂಯೋಜನೆಯ ಈ ಪ್ರದರ್ಶನಕ್ಕೆ ಸಾಹಿತ್ಯವನ್ನು ಕೇದಾರ್ ಮಿಶ್ರಾ ನೀಡಿದ್ದಾರೆ. ಪಂಡಿತ್ ನಿತ್ಯಾನಂದ ಮಿಶ್ರಾ ಸಂಸ್ಕೃತ ಪಠ್ಯಗಳ ವ್ಯಾಖ್ಯಾನವನ್ನು ಬರೆದಿದ್ದಾರೆ, ಗುರು ಬಿಜಯ ಕುಮಾರ್ ಜೆನಾ ಅವರ ಸಂಗೀತ ಮತ್ತು ಗುರು ಬಿಜಯ ಕುಮಾರ್ ಬಾರಿಕ್ ರಿಧಮ್ ಕೊಟ್ಟಿದ್ದಾರೆ.

ಅನುರಾಧಾ ವಿಕ್ರಾಂತ್ ಮತ್ತು ದೃಷ್ಟಿ ನೃತ್ಯ ಸಮೂಹದಿಂದ ಐಕ್ಯಂ

“ಐಕ್ಯಂ” – ಸತ್ಯಂ, ಶಿವಂ ಮತ್ತು ಸುಂದರಂ ಎಂಬ ಮೂರು ತತ್ವಗಳ ಸಂಯೋಜನೆಯಾಗಿದೆ. ಇದು ಈ ಬ್ರಹ್ಮಾಂಡದಲ್ಲಿ ಆಧ್ಯಾ ತ್ಮಿಕ ಸಾಧನೆಯ ಪ್ರಯಾಣಕ್ಕೆ ಮಾರ್ಗದರ್ಶನ ನೀಡುತ್ತದೆ.

ಪ್ರಕೃತಿ ಮತ್ತು ಪರಮೇಶ್ವರ ಅಸಾಧಾರಣ ಎಂಬ ಶಾಶ್ವತ ಸತ್ಯವನ್ನು ಸತ್ಯಂ ಪ್ರತಿನಿಧಿಸುತ್ತದೆ. ಶಿವಂ ಎಂಬುದು ಶಿವ ಮತ್ತು ಶಕ್ತಿಯ ಶಕ್ತಿಯುತ ಮತ್ತು ಮಂಗಳಕರ ಸಂಯೋಜನೆಯಾಗಿದ್ದು, ಇದು ಮಾನವಕುಲದ ಪ್ರಗತಿಯನ್ನು ರಕ್ಷಿಸುತ್ತದೆ ಮತ್ತು ಮುನ್ನಡೆಸುತ್ತದೆ. ಈ ಬ್ರಹ್ಮಾಂಡದ ಎಲ್ಲಾ ಸೃಷ್ಟಿಗಳು ಸುಂದರವಾಗಿವೆ ಮತ್ತು ಒಂದೇ ಕುಟುಂಬಕ್ಕೆ ಸೇರಿವೆ ಎಂದು ಸುಂದರಂ ನೋಡುತ್ತಾರೆ.

ಶತವಧಾನಿ ಡಾ.ಆರ್.ಗಣೇಶ್ ಅವರ ಮಾರ್ಗದರ್ಶನ, ಶ್ರೀ ಪ್ರವೀಣ್ ಡಿ.ರಾವ್ ಅವರ ಸಂಗೀತ ಮತ್ತು ಶ್ರೀಮತಿ ಅನುರಾಧಾ ವಿಕ್ರಾಂತ್ ಅವರ ನೃತ್ಯ ಸಂಯೋಜನೆಯೊಂದಿಗೆ, “ಐಕ್ಯಂ” ಈ ಅವ್ಯಕ್ತ ಪರಿಕಲ್ಪನೆಗಳ ಪ್ರಯಾಣವನ್ನು ನೀಡುತ್ತದೆ.

Leave a Reply

Your email address will not be published. Required fields are marked *