Thursday, 12th December 2024

ಸಾನ್ಯಾ ಅಯ್ಯರ್​ ಬಾಯ್​ ಫ್ರೆಂಡ್​ ಒಂದು ರೂಮ್​ನಲ್ಲಿ ಇದ್ದಾಗ ಮಲತಂದೆ ವಿಡಿಯೋ ರೆಕಾರ್ಡ್​​ ಮಾಡಿದ್ದ: ದೀಪಾ ಅಯ್ಯರ್​

ಬೆಂಗಳೂರು: ಸಾನ್ಯಾ ಅಯ್ಯರ್​ ಮತ್ತು ಅವರ ಬಾಯ್​ ಫ್ರೆಂಡ್​ ಒಂದು ರೂಮ್​ನಲ್ಲಿ ಇದ್ದಾಗ ಪಕ್ಕದ ಮನೆಯ ಕಿಟಕಿಯಿಂದ ಮಲತಂದೆ ವಿಡಿಯೋ ರೆಕಾರ್ಡ್​​ ಮಾಡಿದ್ದ ಎಂದು ಸಾನ್ಯಾ ತಾಯಿ ದೀಪಾ ಅಯ್ಯರ್​ ಮಾತನಾಡಿದ್ದಾರೆ.

ಕಿರುತೆರೆ ನಟಿ ಸಾನ್ಯಾ ಅಯ್ಯರ್​, ಕುಟುಂಬದ ಖಾಸಗಿ ವಿಷಯಗಳನ್ನು ಕೂಡ ಬಯಲು ಮಾಡಿ ಅವರು ಕಣ್ಣೀರು ಹಾಕಿದ್ದಾರೆ. ಘಟನೆಗಳ ಬಗ್ಗೆ ಸಾನ್ಯಾ ತಾಯಿ ದೀಪಾ ಅಯ್ಯರ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಸಾನ್ಯಾ ಅಯ್ಯರ್​ ಅವರ ಮಲ ತಂದೆ ಮಾಡಿದ ಕೆಲವು ಕೃತ್ಯಗಳ ಬಗ್ಗೆ ಈಗ ಮಾಹಿತಿ ಹಂಚಿಕೊಂಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಸಾನ್ಯಾ ಅವರ ಒಂದು ವಿಡಿಯೋವನ್ನು ಆತ ರೆಕಾರ್ಡ್​ ಮಾಡಿದ್ದ. ಪರಿಚಿತರ ವಲಯದವರಿಗೆಲ್ಲ ಅದನ್ನು ತೋರಿಸಿದ್ದ. ಆ ಶಾಕಿಂಗ್​ ಸಂಗತಿ ಯ ಬಗ್ಗೆ ದೀಪಾ ಅಯ್ಯರ್​ ಮಾತನಾಡಿದ್ದಾರೆ.

ಅವಳು ಎರಡು ವರ್ಷದವಳಾಗಿದ್ದಾಗ ನನಗೆ ಡಿವೋರ್ಸ್​ ಆಯ್ತು. ಹಾಗಾಗಿ, ಅಪ್ಪನ ಪ್ರೀತಿ ಆಕೆಗೆ ಸಿಕ್ಕಿರಲಿಲ್ಲ. ನಂತರ ನನ್ನ ಓರ್ವ ಸ್ನೇಹಿತನನ್ನು ನಾನು ಮದುವೆ ಆದೆ. ಅದು ನನ್ನ ತಪ್ಪು ನಿರ್ಧಾರ ಆಗಿತ್ತು. ಸ್ನೇಹಿತರಾಗಿದ್ದಾಗ ಇದ್ದಂತಹ ಸಂಬಂಧ ಮದುವೆ ಆದ ಬಳಿಕ ಹಾಳಾಯಿತು. ಅಪ್ಪ ಬೇಕು ಅಂತ ಬಯಸಿದ್ದ ಸಾನ್ಯಾಗೆ ಸಾಕಾಗಿ ಹೋಯ್ತು’ ಎಂದು ದೀಪಾ ಅಯ್ಯರ್​ ಹೇಳಿದ್ದಾರೆ.

‘ಎರಡನೇ ಗಂಡನಿಗೆ ಡಿವೋರ್ಸ್​ ಮಾಡಬೇಕು ಎಂದು ನಾನು ನಿರ್ಧರಿಸಿದಾಗ ಬಿಟ್ಟುಕೊಡಲು ಆತ ರೆಡಿ ಇರಲಿಲ್ಲ. ಅವನ ಜೊತೆ ಸಾನ್ಯಾಗೆ ಕೆಲವೊಮ್ಮೆ ಅನ್​ಕಂಫರ್ಟ್​ ಆಗುತ್ತಿತ್ತು. ಆತ ನಮ್ಮ ಜೊತೆಯೇ ಇರುತ್ತಿದ್ದ. ಒಮ್ಮೆ ಸಾನ್ಯಾ ಮತ್ತು ಆಕೆಯ ಬಾಯ್​ ಫ್ರೆಂಡ್​ ಒಂದು ರೂಮ್​ನಲ್ಲಿ ಇದ್ದಾಗ ಪಕ್ಕದ ಮನೆಯ ಕಿಟಕಿಯಿಂದ ಬಂದು ಮೊಬೈಲ್​ನಲ್ಲಿ ರೆಕಾರ್ಡ್​​ ಮಾಡಿದ. ಅದನ್ನು ಎಲ್ಲರಿಗೂ ತೋರಿಸಿಕೊಂಡು ಬಂದಿದ್ದಾನೆ’ ಎಂದು ದೀಪಾ ಹೇಳಿದ್ದಾರೆ.