Sunday, 15th December 2024

ವೈವಾಹಿಕ ಜೀವನಕ್ಕೆ ಕಾಲಿಟ್ಟ ಸತ್ಯ ಧಾರಾವಾಹಿಯ ”ಭಾಮೈದ”

ಬೆಂಗಳೂರು: `ಸತ್ಯ’ ಧಾರಾವಾಹಿ ಖ್ಯಾತಿಯ ಸೀರುಂಡೆ ರಘು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರಿನ ರಂಜಿತಾ ಎಂಬವರ ಜೊತೆ ಸರಳವಾಗಿ ಹೊಸ ಬಾಳಿಗೆ ನಟ ರಘು ಕಾಲಿಟ್ಟಿದ್ದಾರೆ. ’ಕಾಮಿಡಿ ಕಿಲಾಡಿಗಳು ಸೀಸನ್ 2′ ಮತ್ತು `ಸತ್ಯ’ ಧಾರವಾಹಿ ಹೀರೋ ಕಾರ್ತಿಕ್ ಮೈದುನನ ಪಾತ್ರದಲ್ಲಿ ರಘು ಪರಿಚಿತ ರಾಗಿದ್ದಾರೆ. ಕಿರುತೆರೆಯಲ್ಲಿ ಪ್ರೇಕ್ಷಕರಿಗೆ ನಕ್ಕು ನಗಿಸುವ ಮೂಲಕ ಸೀರುಂಡೆ ರಘು ಗಮನ ಸೆಳೆದಿದ್ದಾರೆ.

ಬೆಂಗಳೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ರಂಜಿತಾ ಅವರನ್ನು ರಘು ವರಿಸಿದ್ದಾರೆ.

ಕಾಮಿಡಿ ಕಿಲಾಡಿಗಳು ಶೋ ಸ್ಪರ್ಧಿಗಳು, ಕಿರುತೆರೆ ನಟ-ನಟಿಯರು ಸೇರಿದಂತೆ ಹಲವರು ಮದುವೆ ಸಂಭ್ರಮ ದಲ್ಲಿ ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದ್ದಾರೆ.