– ಸಮಗ್ರ ಅಭಿವೃದ್ಧಿಯ ಮೂಲಕ ಗ್ರಾಮೀಣ ಕರ್ನಾಟಕದ ಮಹಿಳಾ ಅಭ್ಯರ್ಥಿಗಳು ಸೇರಿದಂತೆ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ಗುರಿ
ಬೆಂಗಳೂರು: ಸ್ಕಿಲ್ ಇಂಡಿಯಾ ಅಭಿಯಾನಕ್ಕೆ ನಿರಂತರ ಬೆಂಬಲ ನೀಡುತ್ತಿರುವ ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ) ತನ್ನ ‘ಟೊಯೊಟಾ ಕೌಶಲ್ಯ” ಕಾರ್ಯಕ್ರಮದ ಮೂಲಕ ಗ್ರಾಮೀಣ ಕರ್ನಾಟಕದ ವಿದ್ಯಾರ್ಥಿಗಳನ್ನು ಉದ್ಯಮಕ್ಕೆ ಸಿದ್ದ ತಂತ್ರಜ್ಞರ ಗುಂಪನ್ನಾಗಿ ಬೆಳೆಸಲು ಮುಂದಾಗಿದೆ. ಈ ಕಾರ್ಯಕ್ರಮವು ಕರ್ನಾಟಕದ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಶೈಕ್ಷಣಿಕ ಆಧಾರಿತ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುತ್ತದೆ, ಆಟೋಮೊಬೈಲ್ ಕ್ಷೇತ್ರದಲ್ಲಿ ನುರಿತ ತಂತ್ರಜ್ಞರಾಗಲು ಅವರನ್ನು ಸಶಕ್ತಗೊಳಿಸುತ್ತದೆ.
ತಾಂತ್ರಿಕ ಪ್ರಗತಿಯ ಪ್ರಸ್ತುತ ಯುಗ ಮತ್ತು ನುರಿತ ವೃತ್ತಿಪರರ ತುರ್ತು ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಸುಧಾರಿತ ತಂತ್ರಜ್ಞಾನಗಳ ಜ್ಞಾನ ಮತ್ತು ನುರಿತ ತರಬೇತಿಯು ಭವಿಷ್ಯಕ್ಕೆ ಸಿದ್ಧವಾಗಲು ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಟಿಟಿಟಿಐ ಗ್ರಾಮೀಣ ಕರ್ನಾಟಕದ ಮಹತ್ವಾಕಾಂಕ್ಷಿ ವ್ಯಕ್ತಿಗಳಿಗೆ ವಿಶ್ವದರ್ಜೆಯ ಕೌಶಲ್ಯ ತರಬೇತಿಯನ್ನು ನೀಡುವ ಮೂಲಕ ಉದ್ಯಮದ ನುರಿತ ಮಾನವ ಸಂಪನ್ಮೂಲ ಅಗತ್ಯವನ್ನು ಪೂರೈಸುತ್ತದೆ. ಇದರಲ್ಲಿ ಗ್ರಾಮೀಣ ಯುವಕರನ್ನು ವಿಶ್ವದರ್ಜೆಯ ತಂತ್ರಜ್ಞರನ್ನಾಗಿ ಬೆಳೆಸಲಾಗುತ್ತದೆ.
ಟೊಯೊಟಾ ಕೌಶಲ್ಯ ಕಾರ್ಯಕ್ರಮವು ಎರಡು ವರ್ಷಗಳ ಉಚಿತ ವಸತಿ ಕೋರ್ಸ್ ಅನ್ನು ನೀಡುತ್ತದೆ, ಇದು ಯುವಕರಿಗೆ ಉತ್ಪಾದನಾ ಉದ್ಯಮಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ಪಡೆಯಲು ಮತ್ತು ಅವರ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸಲು ಅನನ್ಯ ಅವಕಾಶವನ್ನು ಒದಗಿಸುತ್ತದೆ. ಕಾರ್ಯಕ್ರಮವು ‘ಕಲಿಯಿರಿ ಮತ್ತು ಸಂಪಾದಿಸಿ’ ವಿಧಾನವನ್ನು ಅನುಸರಿಸುತ್ತದೆ, ಇದು ಒರೆಟಿಕಲ್ ಕಲಿಕೆಯನ್ನು ಆನ್-ದಿ-ಜಾಬ್ ಟ್ರೈನಿಂಗ್ (ಒಜೆಟಿ) ಯೊಂದಿಗೆ ಸಂಯೋಜಿಸುತ್ತದೆ. ಅವರ ತರಬೇತಿಯ ಸಮಯ ದಲ್ಲಿ, ಈ ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳು ಆಯಾ ಕ್ಷೇತ್ರದಲ್ಲಿ ಮಾಸ್ಟರ್ ತರಬೇತುದಾರರಾಗಿರುವ ಅನುಭವಿ ಮೇಲ್ವಿಚಾರಕ ರಿಂದ ಮಾರ್ಗದರ್ಶನ ಪಡೆಯಲಿದ್ದಾರೆ. ಇದರಿಂದ ಅಭ್ಯಥಿಗಳು ಉತ್ತಮ-ಗುಣಮಟ್ಟದ ತರಬೇತಿಯನ್ನು ಪಡೆಯುತ್ತಾರೆ ಮತ್ತು ಕೈಗಾರಿಕಾ ಸಂಸ್ಕೃತಿ ಹಾಗೂ ಮಾನದಂಡಗಳಿಗೆ ಅನುಗುಣವಾಗಿ ಪರಿಣತಿಯನ್ನು ಪಡೆಯಲಿದ್ದಾರೆ. ಪ್ರಶಿಕ್ಷಣಾರ್ಥಿಗಳಿಗೆ ಉನ್ನತ ಕೌಶಲ್ಯ, ಆಳವಾದ ಜ್ಞಾನ ಮತ್ತು ಆರೋಗ್ಯಕರ ದೇಹ ಮತ್ತು ಮನಸ್ಸಿನ ತರಬೇತಿಯನ್ನು ಸಹ ನೀಡಲಾಗುವುದು.
ಟಿಕೆಎಂ ಮತ್ತು ಟಿಕೆಎಪಿಯ ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಜಿ.ಶಂಕರ ಅವರು ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಿ, “ಟೊಯೊಟಾದ ಅಚಲ ಸಮರ್ಪಣೆಯು ಪರಿಣತಿಯನ್ನು ನೀಡುವುದರಲ್ಲಿ ಮತ್ತು ಯುವ ಪ್ರತಿಭೆಗಳನ್ನು ವಿಶ್ವದರ್ಜೆಯ ಸಂಪನ್ಮೂಲವಾಗಿ ಪೋಷಿಸಲಿದೆ. ಟೊಯೊಟಾ ಕೌಶಲ ಕಾರ್ಯಕ್ರಮವು ಉದ್ಯಮಕ್ಕೆ ಸಿದ್ಧವಾದ ತಂತ್ರಜ್ಞರ ಪ್ರತಿಭೆಯನ್ನು ಪರಿಣಾಮಕಾರಿಯಾಗಿ ಬೆಳೆಸಿದೆ. ಸ್ಕಿಲ್ ಇಂಡಿಯಾ ಮಿಷನ್ ಗೆ ಆಳವಾದ ಕೊಡುಗೆಗಳನ್ನು ಇದು ನೀಡಿದೆ ನೀಡಲಿದೆ. ಸಾಮೂಹಿಕ ಸಂತೋಷವನ್ನು ನೀಡುವ ನಮ್ಮ ಮೌಲ್ಯಗಳನ್ನು ಎತ್ತಿಹಿಡಿಯಿದೆ. ಈ ಕಾರ್ಯಕ್ರಮದ ಮೂಲಕ, ಆಟೋ ಉದ್ಯಮದ ನಿರಂತರವಾಗಿ ಬೆಳೆಯುತ್ತಿರುವ ಅವಶ್ಯಕತೆಗಳನ್ನು ಪೂರೈಸಲು ಸುಧಾರಿತ ತಂತ್ರಜ್ಞಾನಗಳ ಕೌಶಲ್ಯ ಮತ್ತು ಜ್ಞಾನದೊಂದಿಗೆ ನಾವು ಯುವಕರನ್ನು ಸಬಲೀಕರಣಗೊಳಿಸುತ್ತೇವೆ ಎಂದರು.
ಟಿಟಿಟಿಐನ ಪದವೀಧರರು ನಿರಂತರವಾಗಿ ಹೆಚ್ಚಿನ ಉದ್ಯೋಗ ದರವನ್ನು ಹೊಂದಿದ್ದಾರೆ ಮತ್ತು ಕರ್ನಾಟಕ, ಭಾರತ ಮತ್ತು ವಿದೇಶಗಳಲ್ಲಿ ಅತ್ಯುತ್ತಮ ಉದ್ಯೋಗಾವಕಾಶಗಳನ್ನು ಹೊಂದಿದ್ದಾರೆ. ಇದಲ್ಲದೆ, ಮೇಕ್ ಇನ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾ ಮಿಷನ್ ಕಾರ್ಯಕ್ರಮಗಳಿಗೆ ನೀಡಿದ ಕೊಡುಗೆಗಾಗಿ ಟಿಟಿಟಿಐ ಪ್ರಯತ್ನಗಳನ್ನು ಜಪಾನ್ ಇಂಡಿಯಾ ಇನ್ಸ್ಟಿಟ್ಯೂಟ್ ಫಾರ್ ಮ್ಯಾನುಫ್ಯಾಕ್ಚರಿಂಗ್ (ಜಿಮ್) ಗುರುತಿಸಿದೆ. ಇತ್ತೀಚಿನ ವರ್ಷಗಳಲ್ಲಿ ಟಿಟಿಟಿಐ 900 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯಶಸ್ವಿಯಾಗಿ ಪದವಿ ಪಡೆದಿದ್ದಾರೆ. ಅವರಲ್ಲಿ ಅನೇಕರು ರಾಷ್ಟ್ರೀಯ ಕೌಶಲ್ಯ ಸ್ಪರ್ಧೆ ಮತ್ತು ವಿಶ್ವ ಕೌಶಲ್ಯ ಸ್ಪರ್ಧೆಯಂತಹ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಶ್ಲಾಘನೀಯ ಸಾಧನೆಗಳನ್ನು ಮಾಡಿದ್ದಾರೆ, ಆ ಮೂಲಕ ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದಾರೆ.
ಆಟೋ ವಲಯದಲ್ಲಿ ನುರಿತ ತಂತ್ರಜ್ಞರಾಗಲು ಕರ್ನಾಟಕದಾದ್ಯಂತದ ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನಿಯಮಿತವಾಗಿ 3 ವರ್ಷಗಳ ಉಚಿತ ತರಬೇತಿ ಕೋರ್ಸ್ ಅನ್ನು ಟಿಟಿಟಿಐ ನೀಡುತ್ತದೆ. ಪಠ್ಯಕ್ರಮವು ಜ್ಞಾನ, ಕೌಶಲ್ಯ, ದೇಹ ಮತ್ತು ವರ್ತನೆಯ ಅಭಿವೃದ್ಧಿಯ ಮೂಲಕ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತದೆ. ಟೊಯೊಟಾ ಕೌಶಲ್ಯ ಕಾರ್ಯಕ್ರಮವನ್ನು 2021 ರಲ್ಲಿ ಪ್ರಾರಂಭಿಸಲಾಯಿತು ಮತ್ತು 2023 ಕಾರ್ಯಕ್ರಮದ ಪ್ರವೇಶವು ಪ್ರಸ್ತುತ ಕೆಳಗಿನ ವಿವರಗಳ ನಡೆಯಲಿದೆ. ಟೊಯೊಟಾ ಕೌಶಲ್ಯ ಪ್ರವೇಶಕ್ಕಾಗಿ ಕರ್ನಾಟಕದಾದ್ಯಂತ ಮಹಿಳಾ ಅಭ್ಯರ್ಥಿಗಳು ಸೇರಿದಂತೆ ವಿದ್ಯಾರ್ಥಿಗಳಿಂದ ಟಿಟಿಟಿಐ ಅರ್ಜಿಗಳನ್ನು ಆಹ್ವಾನಿಸಿದೆ.