Sunday, 15th December 2024

ಸೋನಿ ಬಿಬಿಸಿ ಅರ್ತ್ ಅವರ “ಫೀಲ್ ಅಲೈವ್ ಅವರ್ಸ್” ರಸಪ್ರಶ್ನೆ ಸ್ಪರ್ಧೆಯಲ್ಲಿ ಮೆರೆದ ಬೆಂಗಳೂರಿನ ಯುವ ಮನಸ್ಸುಗಳು

ಬೆಂಗಳೂರು: ಭಾರತದ ಮುಂಚೂಣಿ ವಾಸ್ತವ ಮನರಂಜನಾ ವಾಹಿನಿಗಳ ಪೈಕಿ ಒಂದಾದ ಸೋನಿ ಬಿಬಿಸಿ ಅರ್ತ್, ಇತ್ತೀಚೆಗೆ ತನ್ನ ವಿಜೃಂಭಣೆಯ “ಫೀಲ್, ಅಲೈವ್ ಅವರ್ಸ್”ನ ಆರನೇ ಆವೃತ್ತಿಯನ್ನು ಪೂರ್ಣಗೊಳಿಸಿತು.

ಆನ್‌ಲೈನ್ ಅಂತರಶಾಲಾ ರಸಪ್ರಶ್ನೆ ಸ್ಪರ್ಧೆಯ ಪರಿಚಯದ ಮೂಲಕ ತನ್ನ ಹಿಂದಿನ ಯಶಸ್ಸುಗಳನ್ನೂ ದಾಟಿ, ಈ ವರ್ಷದ ಕಾರ್ಯಕ್ರಮವು ಹೊಸ ಎತ್ತರಗಳನ್ನು ತಲುಪಿತು. ತಮ್ಮ ಜ್ಞಾನವನ್ನು ಪರೀಕ್ಷಿಸಿಕೊಳ್ಳಲು ಹಾಗೂ ತಮ್ಮ “ರಸಪ್ರಶ್ನಾ ಚಾತುರ್ಯ”ವನ್ನು ಸಾಬೀತುಪಡಿಸಲು ಈ ಸ್ಪರ್ಧೆಯು ಎಳೆಯ ಮನಸ್ಸುಗಳಿಗೆ ಒಂದು ವೇದಿಕೆ ಒದಗಿಸಿತು.

ರಸಪ್ರಶ್ನೆಗಾಗಿ ರಾಷ್ಟ್ರಾದ್ಯಂತ 2000+ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ಅಮೋಘ ಪ್ರತಿಕ್ರಿಯೆ ದೊರಕಿತು. ಫೀಲ್ ಅಲೈವ್ ಅವರ್ಸ್”ನ ಪ್ರಸ್ತುತದ ಆವೃತ್ತಿಯ ಹೆಮ್ಮೆಯ ವಿಜೇತರುಗಳಾದ ಕರ್ನಾಟಕದ ಬೆಂಗಳೂರಿನ ಸಿಂಧಿಪ ರೌಢ ಶಾಲೆಯ ದಕ್ಷಿತ್ ಎಮ್‌ವಿ ಮತ್ತು ದಕ್ಷ್ ಹೇಮಂತ್ ಕಿರಿಯರ (ಜೂನಿಯರ್)ವರ್ಗದಲ್ಲಿ ಪದಕ ಪಡೆದುಕೊಂಡರು.

ಏನಾದರೂ ಹೊಸತನ್ನು ಶೋಧಿಸಿ, ಕಲಿತು ಆನಂದಿಸಲು ವಿದ್ಯಾರ್ಥಿಗಳಿಗೆ ಒಂದು ಅವಕಾಶ ಕಲ್ಪಿಸಿಕೊಡುವ ಮೂಲಕ ಸೋನಿ ಬಿಬಿಸಿ ಅರ್ತ್‌ನ ಫೀಲ್ ಅಲೈವ್ ಅವರ್ಸ್, ಆಸಕ್ತಿಪೂರ್ಣವಾದ ವಿಜ್ಞಾನ ಪ್ರಯೋಗಗಳು, ಪರಸ್ಪರ ಸಂವಾದದ ಚಟುವಟಿಕೆಗಳು ಹಾಗೂ ಪ್ರಕೃತಿ, ವನ್ಯಜೀವನ, ಸಾಹಸ, ವಿಜ್ಞಾನ ಹಾಗೂ ಇನ್ನೂ ಅನೇಕ ವಿಷಯಗಳಿಗೆ ಸಂಬಂಧಿಸಿದ ಕಂಟೆಂಟ್‌ನ ಸಂಯೋಜನೆಯಾಗಿದೆ, ಈ ವರ್ಷ, ಅಂತರ-ಶಾಲಾ ರಸಪ್ರಶ್ನೆ ಸ್ಪರ್ಧೆಯ ಸೇರ್ಪಡೆಯು, ಎಳೆಯ ವಿದ್ಯಾರ್ಥಿ ಗಳು ತಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸಿ, ದೇಶಾದ್ಯಂತದಿಂದ ಬಂದಿದ್ದ ಸಮಾನ-ಮನಸ್ಕ ವಿದ್ಯಾರ್ಥಿಗಳೊಡನೆ ಪರಸ್ಪರ ಸಂವಾದ ನಡೆಸುವ ಮೂಲಕ ತಮ್ಮ ಮಿತಿಗಳನ್ನು ದಾಟಲು ಮಾರ್ಗ ಪಥ ಹಾಕಿ ಕೊಟ್ಟಿತು.

ಕಿರಿಯರ ವರ್ಗದಲ್ಲಿ(5-6ನೆ ತರಗತಿಗಳು), ಹಿರಿಯರ ವರ್ಗದಲ್ಲಿ(7-9ನೆ ತರಗತಿಗಳು) 2000ಕ್ಕಿಂತ ಹೆಚ್ಚಿನ ಪ್ರವೇಶಗಳು ಸ್ಪರ್ಧೆಯಲ್ಲಿದ್ದು, ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಅನಾವರಣಗೊಳಿಸಲ್ಲು ಸವಾಲೊಡ್ಡುವ ಪ್ರಶ್ನೆಗಳಿಗೆ ಉತ್ತರಿಸಿ ಸ್ಪರ್ಧಿಸಿದ್ದರು. ಕಿರಿಯರ ವರ್ಗದಲ್ಲಿ ಬೆಂಗಳೂರಿನ ಸಿಂಧಿ ಹೈಸ್ಕೂಲ್‌ನ ದಕ್ಷಿತ್ ಎಮ್‌ವಿ ಮತ್ತು ದಕ್ಷ್ ಹೇಮಂತ ಅಗ್ರಸ್ಥಾನ ಪಡೆದುಕೊಂಡು ವಿಜೇತರಾದರು.

“ಫೀಲ್ ಅಲೈವ್ ಅವರ್ಸ್”ರಸಪ್ರಶ್ನೆ ಸ್ಪರ್ಧೆಯ ಜೊತೆಗೆ, ಸೋನಿ ಬಿಬಿಸಿ ಅರ್ತ್, ಮಾಹಿತಿಯುಕ್ತವಾದ ಹಾಗೂ ತೊಡಗಿ ಕೊಳ್ಳುವಂತಹ ವೆಬ್‌ಸೈಟ್ ಸೃಷ್ಟಿಸುವ ಮೂಲಕ ವಿದ್ಯಾರ್ಥಿಗಳು ಮಾಸಿಕ ರಸಪ್ರಶ್ನೆಗಳಲ್ಲಿ ಭಾಗವಹಿಸಿ, ಕೌತುಕಮಯ ವಾದ ಬಹುಮಾನಗಳು ಹಾಗೂ ಅಸಾಮಾನ್ಯ ಕಥೆಗಳಿಗೆ ಪ್ರವೇಶಾವಕಾಶ ಪಡೆದುಕೊಳ್ಳುವ ಅವಕಾಶವನ್ನು ಪಡೆದು ಕೊಳ್ಳುವಂತೆ ಮಾಡಿತ್ತು.

ಈ ವೇದಿಕೆಯು, ವಿವಿಧ ನಗರಗಳಾದ್ಯಂತ ಏರ್ಪಡುತ್ತಿರುವ ವಿಶೇಷವಾದ ಸೋನಿ ಬಿಬಿಸಿ ಅರ್ತ್ ಕಾರ್ಯಕ್ರಮಗಳ ಹೊಸಸುದ್ದಿಗಳನ್ನೂ ವಿದ್ಯಾರ್ಥಿಗಳಿಗೆ ಒದಗಿಸುತ್ತಿರುತ್ತದೆ. ಸ್ಪರ್ಧೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳಲು, ವಿಜೇತ ಎಂಟ್ರಿಗಳನ್ನು ಶೋಧಿಸಲು ಮತ್ತು ಸಮೃದ್ಧವಾದ ಕಂಟೆಂಟ್ ಇರುವ ವಾಹಿನಿಗಳೊಂದಿಗೆ ತೊಡಗಿಕೊಳ್ಳಲು https://www.sonybbcearth.com/FAHInterSchoolQuiz/ ಗೆ ಭೇಟಿ ನೀಡಿ.

*

ರೋಹನ್ ಜೈನ್, ಸೋನಿ ‌ಎಎಟಿಎಚ್‌ನ ಬಿಜಿನೆಸ್ ಹೆಡ್ ಹಾಗೂ ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್‌ನ ಮಾರ್ಕೆಂಟಿಂಗ್ ಮತ್ತು ಇನ್ಸೈಟ್ಸ್, ಇಂಗ್ಲಿಷ್ ಕ್ಲಸ್ಟರ್ ವಿಭಾಗದ ಮುಖ್ಯಸ್ಥರು

“ಸೋನಿ ಬಿಬಿಸಿ ಅರ್ತ್ ಅವರ ಫೀಲ್ ಅಲೈವ್ ಅವರ್ಸ್, ಶಿಕ್ಷಣ ಮತ್ತು ಮನರಂಜನೆಯ ಮಿಶ್ರವಾಗಿದ್ದು, ನೈಸರ್ಗಿಕ ಜಗತ್ತನ್ನು ಮೆಚ್ಚಿಕೊಂಡು ಗೌರವಿಸುವ ಶೋಧನಾತ್ಮಕ ಹಾಗೂ ಪ್ರಜ್ಞಾವಂತ ವ್ಯಕ್ತಿಗಳ ಪೀಳಿಗೆಯನ್ನು ಬೆಳೆಸುತ್ತಿದೆ. ಈ ವರ್ಷ ನಮ್ಮ ತಲುಪುವಿಕೆಗೆ ನಾವು ಒಂದು ರಸಪ್ರಶ್ನೆ ಸ್ಪರ್ಧೆಯನ್ನು ಸೇರಿಸಿದ್ದು, ದೇಶದೆಲ್ಲೆಡೆಯ ವಿದ್ಯಾರ್ಥಿಗಳಿಂದ ಅಮೋಘ ಪ್ರತಿಕ್ರಿಯೆ ಪಡೆದುಕೊಂಡೆವು. ಈ ಸ್ಪರ್ಧೆಯ ಸಮಯದಲ್ಲಿ ಪ್ರದರ್ಶಿಸಲ್ಪಟ್ಟ ಸ್ಪರ್ಧಾತ್ಮಕತೆಯು, ಯುವ ಭಾರತದ ಅದ್ವಿತೀಯ ಪ್ರತಿಭೆಯಲ್ಲಿ ನಾವು ಇರಿಸಿದ ವಿಶ್ವಾಸವನ್ನು ಗಟ್ಟಿಗೊಳಿಸಿದೆ. ವಿಜೇತರಿಗೆ ನಾವು ಅಭಿನಂದನೆಗಳನ್ನು ತಿಳಿಸುತ್ತೇವೆ ಮತ್ತು ಒಂದು ಅರ್ಥಪೂರ್ಣ ವಿಧದಲ್ಲಿ ವಿದ್ಯಾರ್ಥಿಗಳೊಂದಿಗೆ ತೊಡಗಿಕೊಳ್ಳುವುದನ್ನು ಮುಂದುವರಿಸು ತ್ತಲಿರುತೇವೆ.”

ಬೆಂಗಳೂರಿನ ಸಿಂಧಿ ಹೈಸ್ಕೂಲ್‍ನ ವಿದ್ಯಾರ್ಥಿಗಳು,
ದಕ್ಷಿತ್ ಎಮ್‌ವಿ

“ಒಬ್ಬ ಐದನೇ ತರಗತಿಯ ವಿದ್ಯಾರ್ಥಿಯಾಗಿ, ಸೋನಿ ಬಿಬಿಸಿ ಅರ್ತ್ ಅವರ “ಫೀಲ್ ಅಲೈವ್ ಅವರ್ಸ್”ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವುದು ನಿಜಕ್ಕೂ ಒಂದು ಅದ್ಭುತ ಅನುಭವವಾಗಿದ್ದು, ನನ್ನ ಕುತೂಹಲ ಮತ್ತು ಜ್ಞಾನದಾಹವನ್ನು ಇನ್ನಷ್ಟು ಹೆಚ್ಚಿಸಿದೆ. ಈ ಸ್ಪರ್ಧೆಯು ನನ್ನ ಸಾಮರ್ಥ್ಯಗಳನ್ನು ಪರೀಕ್ಷೆಗೊಳಪಡಿಸುವುದಕ್ಕೆ ಅವಕಾಶ ನೀಡಿದುದು ಮಾತ್ರ ವಲ್ಲದೆ, ನಾವು ಜೀವಿಸುತಿರುವ ಜಗತ್ತಿನ ಅದ್ಭುತ ವಿಷಯಗಳನ್ನು ಶೋಧಿಸಲು ಮತ್ತು ಹೊಸಹೊಸ ಪರಿಕಲ್ಪನೆಗಳನ್ನು ಕಲಿತುಕೊಳ್ಳಲು ನನಗೆ ಪ್ರೇರಣೆ ಒದಗಿಸಿತು.”

ದಕ್ಷ್ ಹೇಮಂತ್
“ಈ ರೀತಿಯ ವೇದಿಕೆಯೊಂದು ನನ್ನೊಳಗಿನ ಅತ್ಯುತ್ತಮವಾದುದನ್ನು ಹೊರತಂದ ಹಾಗೂ ನಾನು ನನ್ನ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪರೀಕ್ಷೆಗೊಳಪಡಿಸಲು ಅವಕಾಶ ನೀಡಿದ ರೀತಿ ಅದ್ಭುತವಾದದ್ದು. ಎಂದಿಗೂ ಕಲಿಯುವುದನ್ನು ನಿಲ್ಲಿಸದಂತೆ ಮಾಡಿದ ಈ ಅವಕಾಶಕ್ಕಾಗಿ ನಾನು ಅತ್ಯಂತ ಋಣಿಯಾಗಿದ್ದೇನೆ,. ಸೋನಿ ಬಿಬಿಸಿ ಅರ್ತ್‌ನ “ಫೀಲ್ ಅಲೈವ್ ಅವರ್ಸ್” ನಮ್ಮ ನಿರಂತರವಾದ ಕಲಿಕಾ ಪಯಣದಲ್ಲಿ ಕಾದುಕೊಂಡಿರಬಹುದಾದ ಸಂಭಾವ್ಯತೆಗಳ ಜಗತ್ತಿಗೆ ನಮ್ಮ ಮನಸ್ಸುಗಳನ್ನು ತೆರೆದಿಟ್ಟಿದೆ.