• ಪ್ರಸ್ತುತ ಕರ್ನಾಟಕದ ೪೦೦೦ ಹಳ್ಳಿಗಳಲ್ಲಿ ಉಪಸ್ತುತ
• ಮುಂಬರುವ ೧೨ ತಿಂಗಳುಗಳಲ್ಲಿ ರಾಜ್ಯದ ಇನ್ನೂ ೧೨,೦೦೦ ಜಿಲ್ಲೆಗಳನ್ನು ಒಳಗೊಳಿಸುವ ಲಕ್ಷö್ಯ
ಬೆಂಗಳೂರು: ಕರ್ನಾಟಕದಲ್ಲಿ ೧ ಲಕ್ಷ ಟ್ರಕ್ ಚಾಲಕರನ್ನು ಡಿಜಿಟೀಕರಿಸಿರುವುದಾಗಿ ಭಾರತದ ಅತಿದೊಡ್ಡ ಟ್ರಕ್‌ಗಳ ವೇದಿಕೆ, ಬ್ಲಾಕ್‌ಬಕ್ ಘೋಷಿಸಿದೆ. ಈ ಪ್ರಾಂತ್ಯದ ಟ್ರಕ್ ಮಾಲೀಕರು ತಮ್ಮ ಸಂಪೂರ್ಣ ವ್ಯವಹಾರವನ್ನು ಸ್ಮಾರ್ಟ್ಫೋನ್‌ಗಳನ್ನು ಬಳಸಿ ನಿರ್ವಹಿಸುವ ಮೂಲಕ ನಗದು ವ್ಯವಹಾರ ನಿರ್ಮಲಗೊಳಿಸಬಹುದು, ಅವರ ಟ್ರಕ್‌ಗಳ ಮೇಲೆ ಉತ್ತಮ ಹಿಡಿತ ಹೊಂದಬಹುದು ಹಾಗೂ ತಮ್ಮ ಒಟ್ಟಾರೆ ಗಳಿಕೆಯನ್ನು ವೃದ್ಧಿಸಿಕೊಳ್ಳಬಹುದಾಗಿದ.
೨೦೧೫ರಲ್ಲಿ ರಾಜೇಶ್ ಯಬಾಜಿ, ಚಾಣಕ್ಯ ಹೃದಯ ಹಾಗೂ ರಾಮಸುಬ್ರಮಣಿಯನ್.ಬಿ ಅವರಿಂದ ಸ್ಥಾಪಿತವಾದ ಬ್ಲಾಕ್‌ಬಕ್, ಟ್ರಕ್‌ಗಳ ವ್ಯವಸ್ಥೆಯಲ್ಲಿ ಡಿಜಿಟಲ್ ಕ್ರಾಂತಿ ತರುತ್ತಿದೆ. ಬ್ಲಾಕ್‌ಬಕ್‌ನಲ್ಲಿ ಟ್ರಕ್ಕರ್‌ಗಳು ಲೋಡ್‌ಗಳನ್ನು ಕಾನಬಹುದು, ಹೊಸ ಸಾಗಣೆದಾರರನ್ನು ಸಂಪರ್ಕಿಸಬಹುದು, ಅವರ ಫಾಸ್ಟ್ಟ್ಯಾಗ್ ರೀಚಾರ್ಜ್ ಮಾಡಬಹುದು, ಇಂಧನ ಕಾರ್ಡ್ಗಳನ್ನು ಬಳಸಬಹುದು, ಜಿಪಿಎಸ್ ಮೂಲಕ ಅವರ ಟ್ರಕ್‌ಗಳ ಜಾಡು ಪತ್ತೆ ಮಾಡಬಹುದು ಹಾಗೂ ಕಡಿಮೆ ಬಡ್ಡಿ ದರದ ಟ್ರಕ್ ಸಾಲ ಪಡೆಯಬಹುದಾಗಿದೆ. ಬ್ಲಾಕ್‌ಬಕ್ ಆ್ಯಪ್ ಸರಳವಾಗಿದ್ದು ವಿಶೇಷತೆಗಳ ಆಗರ ಹೊಂದಿಲ್ಲ. ಇದನ್ನು ಸ್ಥಳೀಯ ಭಾಷಗಳ ತಂತ್ರಜ್ಞಾನದೊAದಿಗೆ ನಿರ್ಮಿಸಲಾಗಿದೆ ಹಾಗೂ ಸುಮಾರು ೭ ಭಾಷೆಗಳಲ್ಲಿ ಧ್ವನಿ ಆಧರಿತವಾಗಿ ದೊರೆಯುತ್ತದೆ.
ಬ್ಲಾಕ್‌ಬಕ್‌ನ ಸಹ-ಸಂಸ್ಥಾಪಕ ಹಾಗೂ ಮುಖ್ಯ ಮಾರಾಟ ಆಧಿಕಾರಿ, ಚಾಣಕ್ಯ ಹೃದಯ ಮಾತನಾಡಿ “ಬ್ಲಾಕ್‌ಬಕ್‌ನಲ್ಲಿ ನಮ್ಮ ಪ್ರಾಥಮಿಕ ಲಕ್ಷö್ಯ ಟ್ರಕ್ ನಿರ್ವಾಹಕರನ್ನು ಸಬಲೀಕರಿಸಿ ತಮ್ಮ ಉದ್ಯಮವನ್ನು ಸಮರ್ಥವಾಗಿ ವೃದ್ಧಿಸಲು ನೆರವಾಗುವುದಾಗಿದೆ. ನಮಗೆ ಕರ್ನಾಟಕ ಸಬಲ ಮಾರುಕಟ್ಟೆಯಾಗಿ ಹೊರಹೊಮ್ಮುತ್ತಿದೆ. ಇಲ್ಲಿನ ಟ್ರöಕ್ಕರ್‌ಗಳು ತಂತ್ರಜ್ಞಾನವನ್ನು ವೇಗವಾಗಿ ಅಪ್ಪಿಕೊಳ್ಳುತ್ತಿದ್ದಾರೆ. ಕಳೆದ ೫ ವರ್ಷಗಳಲ್ಲಿ, ಕರ್ನಾಟಕದಲ್ಲಿ ನಮ್ಮ ಟ್ರಕ್ಕರ್‌ಗಳ ನೆಲೆ ೧೫ ಪಟ್ಟು (೧೫ಘಿ) ಹೆಚ್ಚಾಗಿದೆ, ಇದು ನಾವು ಕಾಣುತ್ತಿರುವ ಬೆಳವಣಿಗೆ. ಮುಂಬರುವ ವರ್ಷಗಳಲ್ಲೂ ನಿರಂತರವಾಗಿ ಟ್ಟಕ್ಕಿಂಗ್ ಸಮುದಾಯದ ಡಿಜಿಟಲ್ ಸಾಕ್ಷರತೆಯನ್ನು ಉತ್ತಮಗೊಳಿಸುವುದು ನಮ್ಮ ಗುರಿ” ಎಂದರು.
ರಸ್ತೆ ಸರಕು ಸಾಕಾಣಿಕೆ, ಸರಕು ಸಾಕಾಣೆಯ ಆರ್ಥಿಕತೆಯಲ್ಲಿ ಸಿಂಹಪಾಲು ಹೊಂದಿದೆ. ೫ ಕ್ಕಿಂತ ಕಡಿಮೆ ಟ್ಟಕ್‌ಗಳನ್ನು ಹೊಂದಿರುವ ಸಣ್ಣ ಲಾರಿ ನಿರ್ವಾಹಕರು ಭಾರತದ ೮೫% ಸರಕು ಸಾಕಾಣೆ ಅಗತ್ಯವನ್ನು ಪೂರೈಸುತ್ತಿದ್ದಾರೆ. ಅವರು ಬೆನ್ನೆಲುಬು, ಸರಕು ಸಾಕಾಣೆ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದರೆ ಟ್ರಕ್ಕಿಂಗ್ ಉದ್ಯಮ ಅಸಮರ್ಥತೆಯ ಸಮಸ್ಯೆ ಎದುರಿಸುತ್ತಿದೆ ಹಾಗೂ ತಮ್ಮ ಸರಕು ಸಾಕಾಣೆ ಪಡೆಯಲು ಮಧ್ಯವರ್ತಿಗಳ ಮೇಲೆ ನಿರ್ಭರರಾಗಿದ್ದಾರೆ. ಈ ಉದ್ಯಮಕ್ಕೆ ತಂತ್ರಜ್ಞಾನದ ಶಕ್ತಿಯೊಂದಿಗೆ ಟ್ರಕ್ಕಿಂಗನ್ನು ಬದಲಾಯಿಸುವ ಸಂಘಟಿತ ನಿರ್ವಾಹಕರ ಅಗತ್ಯವಿದೆ. ಕಳೆದ ೭ ವರ್ಷಗಳಲ್ಲಿ ಸಣ್ಣ ಲಾರಿ ಮಾಲೀಕರು ತಮ್ಮ ಸಾಕಾಣೆಯನ್ನು ಉತ್ತಮವಾಗಿ ನಿರ್ವಹಿಸಲು, ಸೂಕ್ತ ಡೀಸೆಲ್ ಉಪಯೂಗ ಸಾಧಿಸಲು, ತಮ್ಮ ಪಾವತಿಯನ್ನು ಉತ್ತಮವಾಗಿ ನಿರ್ವಹಿಸಲು ಹಾಗೂ ತಮ್ಮ ಆದಾಯ ವೃದ್ಧಿಸಿಕೊಳ್ಳಲು ನೆರವಾಗುವ ಮೂಲಕ ಈ ಕ್ಷೇತ್ರದ ಸಾಮರ್ಥ್ಯ ವೃದ್ಧಿಸುವತ್ತ ಬ್ಲಾಕ್‌ಬಕ್‌ನ ಸಂಪೂರ್ಣ ಶ್ರಮ ತೊಡಗಿದೆ.
ಯಶವಂತಪುರ ಟ್ರಕ್ ಟರ್ಮಿನಲ್‌ನ ಎಸ್‌ಜಿಎಸ್ ಟ್ರಾನ್ಸ್ಪೋರ್ಟ್ನ ಚೇತನ್‌ರ ಉದಾಹರಣೆಯನ್ನೇ ತೆಗೆದುಕೊಳ್ಳಿ, ತಮ್ಮ ಸ್ನಾತಕೋತ್ತರ ಪದವಿ ಮುಗಿಸಿದ ನಂತರ ತಮ್ಮ ತಂದೆಯ ಉದ್ಯದಲ್ಲಿ ಕೈ ಜೋಡಿಸಿ ಕಳೆದ ೨ ವರ್ಷಗಳಲ್ಲಿ ಉದ್ಯಮವನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲೀಕರಿಸಿದ್ದಾರೆ. ಇಂದು ಕಾರ್ಯ ನಿರ್ವಹಣೆಯಲ್ಲಿ ನಗದಿನ ಬಳಕೆ ಬಹುತೇಕ ಇಲ್ಲದಂತಾಗಿದೆ, ಅವರ ತಂದೆಗೆ ಉತ್ತಮ ನಂಬಿಕಸ್ತ ಸರಕು ಸಾಕಾಣೆದಾರರ ಜಾಲ ಇದಯಾದರೂ, ಸಾಕಾಣೆದಾರರನ್ನು ಆನ್‌ಲೈನ್‌ನಲ್ಲಿ ಹುಡುಕುವುದು ಹಾಗೂ ಲೂಡ್‌ಗಳಿಗಾಗಿ ಹೊಸ ಲೇನ್‌ಗಳನ್ನು ಪ್ರಯತ್ನಿಸುವ ಮೂಲಕ ಚೇತನ್ ತಮ್ಮದೇ ಸ್ವಂತ ಜಾಲ ಕಟ್ಟುತ್ತಿದ್ದಾರೆ.
ಚೇತನ್‌ರ ತಂದೆಯನ್ನು ಈ ಬದಲಾವಣೆಯ ಬಗ್ಗೆ ಅವರಿಗೆ ಏನೆನ್ನಿಸುತ್ತಿದೆ ಎಂದು ಕೇಳಿದರೆ ಅವರು ಹೇಳುತ್ತಾರೆ, “ಎಲ್ಲವೂ ಫೋನ್‌ನ ಮೂಲಕ ನಡೆಯುತ್ತಿದೆ, ನನ್ನ ಮಗ ಬ್ಲಾಕ್‌ಬಕ್ ಆ್ಯಪ್‌ನಲ್ಲಿ ವ್ಯಾಲೆಟನ್ನು ಟಾಪ್‌ಅಪ್ ಮಾಡುತ್ತಾನೆ, ಫಾಸ್ಟ್ಟ್ಯಾಗ್ ರೀಚಾರ್ಜ್ ಮಾಡುತ್ತಾನೆ, ಡೀಸೆಲ್ ತುಂಬಿಸಲು ಇಂಧನ ಕಾರ್ಡ್ ಬಳಸುತ್ತಾನೆ ಹಾಗೂ ಆನ್‌ಲೈನ್‌ನಲ್ಲಿ ನಮ್ಮ ಟ್ರಕ್‌ಗಳ ಜಾಡನ್ನು ಜಿಪಿಎಸ್ ಮೂಲಕ ಪತ್ತೆ ಮಾಡುತ್ತಾನೆ. ಪ್ರತಿಯೊಂದೂ ಕಾಗದರಹಿತವಾಗಿದೆ ಹಾಗೂ ಉತ್ತಮ ಅಂಶ ಎಂದರೆ, ನಾನು ನನ್ನ ಟ್ರಕ್‌ಗಳ ಬಗ್ಗೆ ಅಥವಾ ಚಾಲಕರ ಬಗ್ಗೆ ಸದಾ ಯೋಚಿಸುವ ಅಗತ್ಯವಿಲ್ಲ ಹಾಗೆಯೇ ಲೋಡ್ ಸರಿಯಾದ ಸಮಯಕ್ಕೆ ತಲುಪಿತೇ ಇಲ್ಲವೇ ಎಂಬ ಚಿಂತೆಯಿಲ್ಲ. ಇದು ನನ್ನ ಒತ್ತಡವನ್ನು ತಗ್ಗಿಸಿ ನನಗೆ ಶಾಂತಿ ಒದಗಿಸಿದೆ”.
ಚೇತನ್‌ರ ಪ್ರಕಾರ, “ದಶಕಗಳ ಕಾಲ ತಮ್ಮ ವ್ಯವಹಾರ ನಿರ್ವಹಿಸಲು ನಮ್ಮ ತಂದೆ ತೀರಾ ಪರಿಶ್ರಮದೊಂದಿಗೆ ಕೆಲಸ ನಿರ್ವಹಿಸುವುದನ್ನು ನೋಡಿದ್ದೇನೆ, ವ್ಯವಹಾರ ಗಳಿಸಲು ಆಗಾಗ ಸಾಕಾಣೆದಾರರನ್ನು ಖುದ್ದಾಗಿ ಭೇಟಿಯಾಗುವುದು, ತನ್ನ ಎಲ್ಲ ವ್ಯವಹಾರವನ್ನೂ ನಗದಿನ ಮೂಲಕ ಮಾಡುವುದು ಹಾಗೂ ಲೆಕ್ಕವನ್ನು ತಮ್ಮ ನಂಬಿಕೆಯ ನೋಟ್ ಪುಸ್ತಕದಲ್ಲಿ ಮಾಡುವುದನ್ನು ನೋಡಿದ್ದೇನೆ. ಆದರೆ ಕಾಲ ಬದಲಾಗಿದೆ ಹಾಗೂ ಟ್ರಕ್ಕಿಂಗ್ ಕಾಲದೊಂದಿಗೆ ಬದಲಾಗಬೇಕಿದೆ. ಒಂದು ಉದ್ಯಮವಾಗಿ ಕೆನಡಾದಂತಹ ದೇಶಗಳಲ್ಲಿರುವಂತೆ ಇದು ಇನ್ನೂ ಆಧುನಿಕತೆ ಅಳವಡಿಸಿಕೊಳ್ಳುವ ಅಗತ್ಯವಿದೆ. ಹೊಸತನಕ್ಕೆ ದಾರಿ ಮಾಡಿಕೊಡಲು ನಾವು ಕೆಲ ಹಳೆಯ ಅಭ್ಯಾಸಗಳನ್ನು ಬಿಡಬೇಕಿದೆ. ತನ್ನ ಉದ್ಯಮವನ್ನು ಬೆಳೆಸಲು ನನ್ನ ತಂದೆಗೆ ಅನೇಕ ವರ್ಷಗಳ ಅನುಭವದ ಆಸರೆ ಇದೆ, ಅವರಿಗೆ ಲೇನ್‌ಗಳ ಬಗ್ಗೆ ಎಲ್ಲವೂ ತಲೆಯಲ್ಲಿಯೇ ಮಾಹಿತಿ ಇರುತ್ತದೆ, ಒಂದು ಟ್ರಕ್ ಒಂದು ಸ್ಥಳದಿಂದ ಮುಂದಿನ ನಿಲಗಡೆಯನ್ನು ತಲುಪಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದು ಅವರಿಗೆ ಸಮರ್ಪಕವಾಗಿ ತಿಳಿದಿದೆ. ನನಗೆ ಇದನ್ನು ಸಾಧಿಸಲು ವರ್ಷಗಳೇ ಬೇಕು, ಆದ್ದರಿಂದ ಮುಂದಿನ ದಶಕದ ವರೆಗೆ ಉದ್ಯಮವನ್ನು ವಿಸ್ತರಿಸಲು ಹಾಗೂ ನನಗೆ ಉದ್ಯಮದಲ್ಲಿ ಚಾಪು ಒತ್ತಲು ತಂತ್ರಜ್ಞಾನವೊAದೇ ಮಾರ್ಗ. ಡಿಜಿಟಲ್ ಮುಂದಿನ ಭವಿಷ್ಯ”.
ಬ್ಲಾಕ್‌ಬಕ್ ಸಧ್ಯ ಕರ್ನಾಟಕದ ೪೦೦೦ ಹಳ್ಳಗಳಲ್ಲಿ ಉಪಸ್ಥಿತಿ ಹೊಂದಿದೆ ಹಾಗೂ ಮನ್ನಡೆಯುತ್ತಾ ೧೨,೦೦೦ ರಾಜ್ಯದ ಹಳ್ಳಿಗಳನ್ನು ತಲುಪುವ ಹಾಗೂ ೨ ಪಟ್ಟು ಹೆಚ್ಚು ಟ್ರಕ್ಕರ್‌ಗಳನ್ನು ಡಿಜಿಟೀಕರಿಸುವ ಯೋಜನೆ ಇದೆ.
ಕೇವಲ ಕರ್ನಾಟಕ ಮಾತ್ರವಲ್ಲ ಬ್ಲಾಕ್‌ಬಕ್‌ನ ಡಿಜಿಟಲ್ ಪರಿಹಾರಗಳು ಬಾರತದಾದ್ಯಂತ ಸಾಕಾಣಿಕೆ ನಿರ್ವಾಹಕರ ಆದಾಯದ ಮೇಲೆ ನೇರ ಪ್ರಭಾವ ಬೀರಿವ ಮೂಲಕ ೪ ದಶಲಕ್ಷ ಟ್ರಕ್ಕರ್ ಕುಟುಂಬಗಳನ್ನು ಮೇಲೆತ್ತಿದೆ. ಇದು ಭಾರತದಾದ್ಯಂತ ಯುವಕರಿಗೆ ಉದ್ಯೋಗದ ಅವಕಾಶ ಗಳನ್ನೂ ಸೃಷ್ಟಿಸಿದೆ. ಇಂದು ಶೇಕಡಾ ೮೦ ಕ್ಕೂ ಅಧಿಕ ಬ್ಲಾಕ್‌ಬಕ್ ಉದ್ಯೋಗಿಗಳು ಹಿಂದುಳಿದ ಪ್ರದೇಶಗಳಿಂದ ಬಂದಿದ್ದು ಅವರು ತಮ್ಮದೇ ಟ್ರಕ್ಕಿಂಗ್ ಸಮುದಾಯದ ಮೇಲೆ ಪರಿಣಾಮ ಬೀರುತ್ತಿದ್ದಾರೆ. ಕಂಪನಿಯ ತಂಡ ಸುಮಾರು ಒಂದು ಲಕ್ಷ ಹಳ್ಳಿಗಳಲ್ಲಿ ಟ್ರಕ್ ಸರಕು ಸಾಕಾಣೆ ನಿರ್ವಾಹಕರು ಹಾಗೂ ಟ್ರಕ್ ಚಾಲಕರಿಗೆ ತಮ್ಮ ಸಾಕಾಣೆಗಳನ್ನು ನಿರ್ವಹಿಸಲು ಹಾಗೂ ತಮ್ಮ ಗಳಕೆಯನ್ನು ಹೆಚ್ಚಿಸಿಕೊಳ್ಳಲು ಡಿಜಿಟಲ್ ಸಾಕ್ಷರತೆ ಒದಗಿಸುತ್ತಿದ್ದಾರೆ.
ಹಾಗೆಯೇ ವೀಕ್ಷಿಸಿ : https://www.youtube.com/watch?v=3vVdmYz5eNY&t=3s