Friday, 1st December 2023

ದೇಶದಲ್ಲೇ ಮೊದಲ ಹೈಬ್ರಿಡ್‌ TAVR ವಿಧಾನದ ಮೂಲಕ ತಿರುಚಿಕೊಂಡಿದ್ದ ಹೃದಯದ ಮಹಾಅಪಧಮನಿಯ ಕವಾಟದ ಬದಲಾವಣೆ

ಬೆಂಗಳೂರು: ಹೃದಯದಿಂದ ರಕ್ತಸಾಗಿಸುವ ಮಹಾಪಧನಿಯ ಕವಾಟವು ಸಂಪೂರ್ಣ ತಿರುಚಿಕೊಂಡು, ಹೃದಯ ವೈಫಲ್ಯ ದಿಂದ ಬಳಲುತ್ತಿದ್ದ ೬೪ ವರ್ಷದ ಮಹಿಳೆಗೆ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ವಾಲ್ವ್ ರಿಪ್ಲೇಸ್‌ಮೆಂಟ್ ( TAVR) ವಿಧಾನದ ಮೂಲಕ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದು ಭಾರತದಲ್ಲೇ ಮೊದಲ ಬಾರಿಗೆ ಹೈಬ್ರಿಡ್‌ TAVR ವಿಧಾನದ ಮೂಲಕ ನಡೆಸಿದ ಶಸ್ತ್ರಚಿಕಿತ್ಸೆಯಾಗಿದೆ.

ಅತ್ಯಂತ ಸವಾಲಿನ ಹಾಗೂ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಲು ಹೃದ್ರೋಗ ತಜ್ಞರು, ಹೃದಯ ಶಸ್ತ್ರಚಿಕಿತ್ಸಕರು, ಸಾಮಾನ್ಯ ಶಸ್ತ್ರ ಚಿಕಿತ್ಸಕರು, ಆಂತರಿಕ ಔಷಧ ತಜ್ಞರು, ಗ್ಯಾಸ್ಟ್ರೋಎಂಟರಾಲಜಿಸ್ಟ್‌, ನೆಫ್ರಾಲಜಿಸ್ಟ್‌ ಮತ್ತು ಅರಿವಳಿಕೆಶಾಸ್ತ್ರಜ್ಞ ಸೇರಿದಂತೆ ಬಹುದೊಡ್ಡ ತಂಡವೇ ಶ್ರಮಿಸಿದೆ. ಈ ಕುರಿತು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡವು ಈ ವಿಶೇಷ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ನೀಡಿದರು.

ಫೋರ್ಟಿಸ್ ಆಸ್ಪತ್ರೆ ಹಿರಿಯ ಹೃದಯತಜ್ಞ ಡಾ ವಿವೇಕ್ ಜವಲಿ ಮಾತನಾಡಿ, ೬೪ ವರ್ಷದ ಹಂಸವೇಣಿ ಎಂಬ ಮಹಿಳೆ ಹತ್ತು ವರ್ಷದಿಂದ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಇದಲ್ಲದೆ, ಜನ್ಮಜಾತ ಹೃದಯ ಕವಾಟದ ಅಸ್ವಸ್ಥತೆಯಿಂದ ಬಳಲಿ, ಮಹಾಪಧಮನಿಯ ಕವಾಟ ಬದಲಾವಣೆ ಮತ್ತು ಸಿಎಬಿಜಿ (ಕೊರೊನರಿ ಆರ್ಟರಿ ಬೈಪಾಸ್ ಗ್ರಾಫ್ಟ್) ಶಸ್ತ್ರಚಿಕಿತ್ಸೆಗೆ ಒಳಗೊಂಡಿದ್ದರು. ಇತ್ತೀಚಿಗೆ ಆಕೆಯು ಎದೆಯ ಅಸ್ವಸ್ಥತೆ ಮತ್ತು ಉಸಿರಾಟದ ತೊಂದರೆಗೆ ಒಳಗಾದರು.

ಈ ವೇಳೆ ಆಕೆಯನ್ನು ಪರೀಕ್ಷೆಗೆ ಒಳಪಡಿಸಿದಾಗ ಏಕನಾಳದ ಪರಿಧಮನಿಯ ಕಾಯಿಲೆ ಇರುವುದು ಪತ್ತೆಯಾಯಿತು. ಆಕೆಯ ಹಿಂದಿನ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅಳವಡಿಸಲಾದ ಪ್ರಾಸ್ಥೆಟಿಕ್ ಕವಾಟವು ವಿಫಲವಾಗಿದ್ದರಿಂದ, ರಕ್ತನಾಳವು ತೀವ್ರವಾಗಿ ಹಾನಿಗೊಳಗಾಗಿತ್ತು. ಇದರಿಂದ ಆಕೆಯ ಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು, ಈಗಾಗಲೇ ಪ್ರಾಸ್ಥೆಟಿಕ್‌ ಕವಾಟವು ವಿಫಲವಾಗಿದ್ದರಿಂದ. ಮತ್ತೊಮ್ಮೆ ಕವಾಟ ಬದಲಾವಣೆ ಅಸಾಧ್ಯವಾದ್ದರಿಂದ ಸಾಕಷ್ಟು ಆಸ್ಪತ್ರೆಯು ಆಕೆಗೆ ಚಿಕಿತ್ಸೆ ನೀಡಲು ನಿರಾಕರಿಸಿದವು. ಮೂರು ತಿಂಗಳುಗಳ ಕಾಲ ಆಕೆಗೆ ಎಲ್ಲೂ ಚಿಕಿತ್ಸೆ ದೊರೆತಿರಲಿಲ್ಲ, ಇದರಿಂದ ಆಕೆಗೆ ಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು. ಅವರು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು, ಸಾಕಷ್ಟು ಪರೀಕ್ಷೆಗಳ ಬಳಿಕ ಆಕೆಗೆ ಬಹು ಅಂಗಾಂಗಳ ವೈಫಲ್ಯವಾಗತೊಡಗಿತ್ತು.

ಜೊತೆಗೆ, ಆಕೆಗೆ ಮಹಾಪಧಮನಿ (ಹೃದಯದಿಂದ ರಕ್ತವನ್ನು ಸಾಗಿಸುವ ದೇಹದಲ್ಲಿನ ಅತಿದೊಡ್ಡ ಅಪಧಮನಿ) ಅಸಹಜವಾಗಿ ದಪ್ಪವಾಗಿರುವುದು ಮತ್ತು ಕ್ಯಾಲ್ಸಿಫೈಡ್ (ಕ್ಯಾಲ್ಸಿಯಂ ನಿಕ್ಷೇಪಗಳಿಂದ ಗಟ್ಟಿಯಾಗುತ್ತದೆ) ಆಗಿರುವುದು ತೀಳಿದು ಬಂತು.

ಇದರಿಂದ ಹೃದಯದ ಮಹಾಪಧನಿಯ ಕವಾಟವು ಸಂಪೂರ್ಣ ತಿರುಚಿಕೊಂಡಿತ್ತು. ಇದಲ್ಲದೆ, ಈ ಹಿಂದೆ ಬದಲಾಯಿಸಲಾದ ಪ್ರಾಸ್ಥೆಟಿಕ್ ಕವಾಟವನ್ನು ಅಸಹಜವಾಗಿ ಓರೆಯಾಗಿ ಬದಲಾಗಿತ್ತು, ಹೊಸ ಕವಾಟವನ್ನು ಪತ್ತೆಹಚ್ಚುವುದು ಹೆಚ್ಚು ಸವಾಲಿನ ಸಂಗತಿಯಾಗಿತ್ತು. ಅಲ್ಲದೆ, ಆಪರೇಟಿಂಗ್ ಟೇಬಲ್‌ನಲ್ಲಿ ಹೃದಯಾಘಾತಕ್ಕೆ ಕಾರಣವಾಗುವ ಪರಿಧಮನಿಯ ರಕ್ತನಾಳವನ್ನು ತಡೆಯುವ ಹೆಚ್ಚಿನ ಅಪಾಯವನ್ನು ಇದು ಒಡ್ಡಿತು. ಹೀಗಾಗಿ ಆಕೆಗೆ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ವಾಲ್ವ್ ರಿಪ್ಲೇಸ್‌ ಮೆಂಟ್ ( TAVR) ಮೂಲಕ ಶಸ್ತ್ರಚಿಕಿತ್ಸೆ ನಡೆಸಲಾಗಿತು ಎಂದು ವಿವರಿಸಿದರು.

ಇಂಟರ್ವೆನ್ಷನಲ್ ಕಾರ್ಡಿಯಾಲಜಿಯ ಹಿರಿಯ ಸಲಹೆಗಾರ ಡಾ ಶ್ರೀನಿವಾಸ್ ಪ್ರಸಾದ್ ಮಾತನಾಡಿ, ರೋಗಿಯ ಸಂಕೀರ್ಣ ಪರಿಸ್ಥಿತಿಯನ್ನು ಪರಿಗಣಿಸಿ, ನಾವು ಆರಂಭದಲ್ಲಿ ಹೈಬ್ರಿಡ್ TAVR (ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ವಾಲ್ವ್ ರಿಪ್ಲೇಸ್‌ ಮೆಂಟ್) ಕಾರ್ಯವಿಧಾನದ ಮೂಲಕ ಚಿಕಿತ್ಸೆ ನೀಡಲು ಯೋಜಿಸಿದೆವು, ಇದರಲ್ಲಿ MIDCAB (ಕನಿಷ್ಠವಾಗಿ), TAVR ನಂತರ ಬಲ ಪರಿಧಮನಿಯನ್ನು (RCA) ಕಸಿಮಾಡಲು ತೀರ್ಮಾನಿಸಿದೆವು. ಕೂಡಲೇ ಆಕೆಯನ್ನು ತುರ್ತು TAVR ಗಾಗಿ ಕ್ಯಾಥ್ ಲ್ಯಾಬ್‌ಗೆ ಸ್ಥಳಾಂತರಿಸಲಾಯಿತು, ಸಾಕಷ್ಟು ಪ್ರಯತ್ನದ ನಂತರ ಆಕೆಗೆ TAVR ವಿಧಾನದ ಮೂಲಕ ಯಶಸ್ವಿಯಾಗಿ ಚಿಕಿತ್ಸೆ ನೀಡಿದೆವು, ಕೇವಲ ೧೦ ದಿನಗಳ ಬಳಿಕೆ ಆಕೆಯನ್ನು ಆಸ್ಪತ್ಸೆಯಿಂದ ಬಿಡುಗಡೆ ಮಾಡಲಾಯಿತು ಎಂದರು

Leave a Reply

Your email address will not be published. Required fields are marked *

error: Content is protected !!