Thursday, 3rd October 2024

Teachers Day: ಬೆಂಗಳೂರಿನಲ್ಲಿ ಸೆ.8 ರಂದು ಶಿಕ್ಷಕರ ದಿನಾಚರಣೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ

Teachers Day

ಬೆಂಗಳೂರು: ಕನ್ನಡ ಸಂಘರ್ಷ ಸಮಿತಿಯ ವತಿಯಿಂದ ಶಿಕ್ಷಕರ ದಿನಾಚರಣೆ (Teachers Day) ಹಾಗೂ ಎಚ್‌.ಆರ್. ಲಕ್ಷ್ಮಮ್ಮ ಮತ್ತು ಎ.ಬಿ. ಮಾರೇಗೌಡ ಸ್ಮರಣಾರ್ಥ “ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿ ಬಾ ಫುಲೆ” ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಬೆಂಗಳೂರು ನಗರದ ಬಿ.ಎಂ.ಶ್ರೀ. ಕಲಾಭವನದಲ್ಲಿ ಸೆ.8 ರಂದು ಭಾನುವಾರ ಬೆಳಗ್ಗೆ 11 ಗಂಟೆಗೆ ಏರ್ಪಡಿಸಲಾಗಿದೆ.

ಈ ಸುದ್ದಿಯನ್ನೂ ಓದಿ | KPSC Group B Exam: ಕೆಪಿಎಸ್‌ಸಿ ಗ್ರೂಪ್‌-ಬಿ ಹುದ್ದೆಗಳ ಪರೀಕ್ಷೆ ಹಾಲ್‌ ಟಿಕೆಟ್‌ ಬಿಡುಗಡೆ; ಡೌನ್‌ಲೋಡ್‌ ವಿಧಾನ ಇಲ್ಲಿದೆ

ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ ಕಾರ್ಯಕ್ರಮವನ್ನು ಉದ್ಘಾಟಿಸುವರು. ಹಿರಿಯ ಕವಯತ್ರಿ ಡಾ. ಕೆ. ಷರೀಫಾ ಪ್ರಶಸ್ತಿ ಪ್ರದಾನ ಮಾಡುವರು. ನಿವೃತ್ತ ಶಿಕ್ಷಕ ಹಾಗೂ ಕವಿ ಚಂದ್ರಶೇಖರ ಹಡಪದ ಪ್ರಶಸ್ತಿ ಸ್ವೀಕರಿಸುವರು.

ಈ ಸುದ್ದಿಯನ್ನೂ ಓದಿ | Sandalwood News: ಗಣೇಶ ಹಬ್ಬ ಸಂಭ್ರಮದ ನಡುವೆ ಸ್ಯಾಂಡಲ್‌ವುಡ್‌ಗೆ ‘ಟಾಮಿ’ ಎಂಟ್ರಿ!

ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷ ಎ.ಎಸ್.‌ ನಾಗರಾಜಸ್ವಾಮಿ ಅಧ್ಯಕ್ಷತೆ ವಹಿಸುವರು. ಹಿರಿಯ ಪತ್ರಕರ್ತ ರಾಮಣ್ಣ ಎಚ್‌. ಕೋಡಿಹೊಸಹಳ್ಳಿ ಉಪಸ್ಥಿತರಿರಲಿದ್ದಾರೆ. ಸಮಾರಂಭದಲ್ಲಿ ಗಾಯತ್ರಿ ರಾಮಣ್ಣ, ಡಾ. ಅಂಬುಜಾಕ್ಷಿ ಬೀರೇಶ ಅವರಿಂದ ಗೀತ ಗಾಯನ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.