Friday, 21st June 2024

ಅದ್ಧೂರಿಯಾಗಿ ದೀಪಾವಳಿ ಹಬ್ಬ ಆಚರಿಸಿದ ಟೀಂ ಇಂಡಿಯಾ

ಬೆಂಗಳೂರು: ವಿಶ್ವಕಪ್​ನ ಲೀಗ್ ಹಂತದ ಕೊನೆ ಪಂದ್ಯಾಟಕ್ಕೆ ಬೆಂಗಳೂರಿಗೆ ಬಂದಿಳಿದಿರುವ ಭಾರತ ತಂಡದ ಆಟಗಾರರು ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು.

ಭಾರತವು ಲೀಗ್ ಹಂತದ 8 ಪಂದ್ಯಗಳಲ್ಲಿ ಗೆದ್ದು ಬೀಗಿದ್ದು, ಸೆಮಿಫೈನಲ್​ ಸೆಣಸಾಟಕ್ಕೆ ಸಜ್ಜಾಗಿದೆ.

ಇದಕ್ಕೂ ಮುನ್ನ ಬೆಂಗಳೂರಿನ ಖಾಸಗಿ ಹೋಟೆಲ್​ವೊಂದರಲ್ಲಿ ಟೀಮ್​ ಇಂಡಿಯಾ ಆಟಗಾರರು ಸಂಭ್ರಮದಿಂದ ದೀಪಾವಳಿಯನ್ನು ಆಚರಿಸಿದರು. ಈ ವೇಳೆ ಕುಟುಂಬಸ್ಥರು, ಭಾರತ ತಂಡದ ಸದಸ್ಯರು ದೀಪಾವಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ದೀಪಾವಳಿ ಆಚರಣೆಯ ಫೋಟೋವನ್ನು ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಕೆ ಎಲ್​ ರಾಹುಲ್​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಭಾರತ ತಂಡದ ಆಟಗಾರರು ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ್ದಾರೆ.

ಸೆಮೀಸ್​ ಹಂತದಲ್ಲಿ ಕಾದಾಟ ನಡೆಸುವ ತಂಡಗಳು ಅಂತಿಮಗೊಂಡಿದ್ದು, ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್​ ಮತ್ತು ಭಾರತ ಕಾದಾಟ ನಡೆಸಲಿದೆ. ಎರಡನೇ ಸೆಮಿಫೈನಲ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಕಾದಾಟ ನಡೆಸಲಿದೆ. ನ್ಯೂಜಿಲೆಂಡ್​ ಮತ್ತು ಭಾರತ ನಡುವಿನ ಹೈ ವೋಲ್ಟೇಜ್​ ಪಂದ್ಯ ನ. 15ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!