Friday, 13th December 2024

ತಾಂತ್ರಿಕ ದೋಷದಿಂದ ಮೆಟ್ರೋ ಸಂಚಾರ ಸ್ಥಗಿತ: ಸೇವೆ ಪುನರಾರಂಭ

ಬೆಂಗಳೂರು: ರೈಲು ಹಳಿಯಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದ ಸಂಚಾರ ಸ್ಥಗಿತಗೊಂಡಿದ್ದ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಮೊದಲಿನಂತೆ ಸೇವೆ ಆರಂಭಿಸಿದೆ.

ತಾಂತ್ರಿಕ ಸಮಸ್ಯೆಯಿಂದಾಗಿ ಪೀಣ್ಯದಿಂದ ನಾಗಸಂದ್ರಕ್ಕೆ ಮೆಟ್ರೋ ಸಂಚಾರ ಸೇವೆಯಲ್ಲಿ ವ್ಯತಯ ಉಂಟಾಗಿತ್ತು. ಯಶವಂತಪುರ – ಸಿಲ್ಕ್ ಇನ್ಸ್ಟಿಟ್ಯೂಟ್​ ತನಕ ಮಾತ್ರ ಸಂಚಾರ ಇತ್ತು. ಬಳಿಕ ರೈಲು ಹಳಿಯ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿದ್ದು ಯಥಾಸ್ಥಿತಿಗೆ ಮರಳಿದೆ. ನಂತರ ಎಂದಿನಂತೆ ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಿದೆ ಎಂದು ನಮ್ಮ ಮೆಟ್ರೊ ಸಂಸ್ಥೆ ತಿಳಿಸಿದೆ.

ದುರಸ್ತಿ ಆಗುವವರೆಗೂ ಮೆಟ್ರೋ ಸಂಚಾರ ಇಲ್ಲದೇ ಕೆಲವರು ತೊಂದರೆಗೊಳಗಾದರು. ಕೆಲ ಪ್ರಯಾಣಿಕರು, ತಮ್ಮ ತಮ್ಮ ಸ್ಥಳಗಳನ್ನು ತಲುಪಲು ಬಸ್​ಗಳ ಮೊರೆ ಹೋಗಿದ್ದರು.

ಅಕ್ಟೋಬರ್​ನಲ್ಲಿ ರೀ- ರೈಲು ಹಳಿ ತಪ್ಪಿ ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲಿನ ಸಂಚಾರ ತಾತ್ಕಲಿಕವಾಗಿ ವ್ಯತ್ಯಯವಾಗಿತ್ತು. ಆದರೆ, ಅಂದು ಪ್ರಯಾಣಿಕರಿಗೆ ತಾಂತ್ರಿಕ ಅಡಚಣೆಯಿಂದಾಗಿ ಸುಗಮ‌ ಸಂಚಾರದಲ್ಲಿ ವ್ಯತ್ಯಯ ಆಗಿರುವ ಬಗ್ಗೆ ಮಾಹಿತಿ ನೀಡಿರಲಿಲ್ಲ. ಪರಿಣಾಮ ಈ ಬಗ್ಗೆ ಅರಿಯದ ಪ್ರಯಾಣಿಕರು ಯಶವಂತಪುರ ಮೆಟ್ರೋ ರೈಲು ನಿಲ್ದಾಣದಲ್ಲಿ ಗಂಟೆಗಟ್ಟಲೇ ಮೆಟ್ರೋಗಾಗಿ ಕಾದಿದ್ದರು. ಸಿಟ್ಟಿಗೆದ್ದಿದ್ದ ಪ್ರಯಾಣಿಕರು ಬಿಎಂಆರ್​ಸಿಎಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.