Thursday, 12th December 2024

ಚೊಚ್ಚಲ ಹೆರಿಗೆಯಲ್ಲೇ ಹತ್ತು ಪುಸ್ತಕಗಳ ಜನನ !

ವೀರಲೋಕ ಪ್ರಕಾಶನದಿಂದ 10 ಕನ್ನಡ ಪುಸ್ತಕಗಳ ವಿನೂತನ ಬಿಡುಗಡೆ

ಕನ್ನಡ ಸಾರಸ್ವತದಲ್ಲಿ ಶ್ರೀನಿವಾಸ್ ವೀರ ಸಾಹಸ

ಬೆಂಗಳೂರು: ಅದು ಪುಸ್ತಕ ಬಿಡುಗಡೆ ಸಮಾರಂಭ ಎನ್ನುಂತಿರಲಿಲ್ಲ. ಸ್ಟಾರ್ ಹೋಟೆಲ್‌ ನಲ್ಲಿ ಯಾವು ದೋ ಖಾಸಗಿ ಕಂಪನಿಯ ಬ್ರ್ಯಾಂಡಿಂಗ್ ಕಾರ್ಯಕ್ರ ಮದಂತಿತ್ತು. ಈ ರೀತಿಯ ಕಾರ್ಯಕ್ರಮದಲ್ಲಿ ‘ವೀರಲೋಕ ಪ್ರಕಾಶನ’ ಹೊರತಂದಿರುವ ಹತ್ತು ಪುಸ್ತಕಗಳ ಲೋಕಾರ್ಪಣೆ ಸಮಾರಂಭ ‘ಪುಸ್ತಕಗಳು ಜ್ಞಾನದ ಕೀಲಿಕೈ’ ಎಂಬ ಹೆಸರಿನಲ್ಲಿ ನಡೆಯಿತು.

ಅಲ್ಲಿ ಪುಸ್ತಕ ಬಿಡುಗಡೆಯ ಸಾಮಾನ್ಯ ಭಾಷಣಗಳಿಗಿಂತ ಕನ್ನಡ ಪುಸ್ತಕಗಳನ್ನು ಓದುವ ಕುರಿತಾಗಿ, ಅದರ ಅಗತ್ಯದ ಕುರಿತಾಗಿ ಮಾತುಗಳು ಕೇಳಿಬಂದವು. ಜಯನಗರದ ಖಾಸಗಿ ಹೋಟೆಲ್‌ನಲ್ಲಿ ಕನ್ನಡ ಪುಸ್ತಕಗಳ ರಾಯಭಾರಿಯೂ ಆಗಿರುವ ನಟ ರಮೇಶ್
ಅರವಿಂದ್ ಕಾರ್ಯಕ್ರಮ ಉದ್ಘಾಟಿಸಿದರು.

ನಟ ಕಿಚ್ಚ ಸುದೀಪ್ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು. ಸಣ್ಣ ಸನ್ನಿವೇಶ ಗಳನ್ನು ಕಥೆಯ ರೂಪದಲ್ಲಿ ರಚಿಸುವ ಬರಹಗಾರರ ಆಲೋಚನಾ ಶಕ್ತಿ ನನ್ನನ್ನು ನಿಬ್ಬೆರಗಾಗುವಂತೆ ಮಾಡುತ್ತಿದೆ.

ಇಂತಹ ಬರಹಗಳನ್ನು ಓದಿ ಎಲ್ಲರೂ ಸಾಹಿತ್ಯದ ಅರಿವು ಮೂಡಿಸಿಕೊಳ್ಳಬೇಕು. ಹೊಸ ಪದಗಳ ಬಗ್ಗೆ ಆಸಕ್ತಿ ಹೊಂದಬೇಕು ಎಂದವರು ರಮೇಶ್ ಅರವಿಂದ್. ಪ್ರೌಢ ಶಿಕ್ಷಣದಲ್ಲಿ ವಿದ್ಯಾಬ್ಯಾಸ ಮಾಡುವ ಸಂದರ್ಭ ದಲ್ಲಿ ಸಿನಿಮಾವೊಂದರಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ನಟನೆಗಾಗಿ ತಲೆ ಕೂದಲು ತೆಗೆಯಬೇಕಾದ ಸಂದರ್ಭ ಎದುರಾಗಿತ್ತು. ತಲೆ ಬೋಳಿಸಿಕೊಂಡು ಹೆಚ್ಚು ಓಡಾ ಡಲು ಸಾಧ್ಯವಿಲ್ಲದ ಕಾರಣಕ್ಕೆ ಶಾಲೆಯ ಗ್ರಂಥಾಲಯಕ್ಕೆ ತೆರಳಿ ಪುಸ್ತಕಗಳ ಓದುವುದನ್ನು ಶುರುಮಾಡಿದೆ. ನಂತರ ಅದು ಹವ್ಯಾಸವಾಯಿತು. ಹಲವು ಪುಸ್ತಕಗಳನ್ನು ಓದಿದ್ದರ ಪರಿಣಾಮ ಇದೀಗ ಪುಸ್ತಕ ಬರೆಯುವಂತಹ ಆಲೋಚನಾ ಶಕ್ತಿ ನನ್ನಲ್ಲಿ ಪ್ರಾರಂಭವಾಗಿದೆ ಎಂದು ಹೇಳಿದರು.

ಓದು ಎಂಬ ನಿಧಿ: ನನಗೆ ಬರಹಗಾರರು, ಸಣ್ಣ ಕಥೆಗಳನ್ನು ಬರೆಯುವವರನ್ನು ಕಂಡರೆ ಬಹಳ ಗೌರವ. ಅವರು ಯೋಚನೆ  ಮಾಡುವ ರೀತಿ ಅಚ್ಚರಿ ಹುಟ್ಟಿಸುತ್ತದೆ. ಹಸು ಹಾಲು ಕೊಡುವ ಪ್ರಾಣಿ, ಹುಲಿ ಕಾಡಿನ ಪ್ರಾಣಿ. ಇದರಲ್ಲಿ ಪ್ರಾಮಾಣಿಕತೆ, ನಿಷ್ಠೆ ಎಂಬ ಮೌಲ್ಯ ತಂದು ಗೋವಿನ ಹಾಡು ರೂಪಿಸುವ ಅದ್ಭುತ ಬರಹಗಾರರನ್ನು ಕಂಡಾಗ ಹೀಗೂ ಆಗುತ್ತದೆ ಎಂದು ಗೊತ್ತಾಗು ತ್ತದೆ. ಇಂತಹ ಬರಹಗಾರರಿಂದ ಆದಂತಹ ಸಹಾಯ ನನ್ನ ಜೀವನ ಹಾಗೂ ಶಿಕ್ಷಣಕ್ಕೆ ಸಹಕಾರಿಯಾಗಿದೆ.

ನಾನು ನ್ಯಾಷನಲ್ ಶಾಲೆಯಲ್ಲಿ ಓದಿದೆ. ಪುಸ್ತಕಗಳನ್ನ ಓದಿ. ಖಂಡಿತ ಅವುಗಳು ನಮಗೆ ಸಿಕ್ಕ ನಿಧಿ. ನಿಮಗೂ ಓದಿನಿಂದ ಅಂತಹ ನಿಧಿ ಸಿಗುತ್ತದೆ. ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿ ಪುಸ್ತಕಗಳನ್ನು ಓದಿ ಎಂದು ಅವರು ತಿಳಿಸಿದರು. ವೀರಪುರತ್ರ ಶ್ರೀನಿವಾಸ್ ಅವರು ವೀರಲೋಕ ಪ್ರಕಾಶನ ಸಂಸ್ಥೆ ಆರಂಭಿಸಿದ್ದಾರೆ. ಆ ಮೂಲಕ ಕನ್ನಡ ಪುಸ್ತಕಗಳ ಓದುಗರಿಗೆ ಉತ್ತಮ ವೇದಿಕೆ ನೀಡಿದ್ದಾರೆ. ಅಲ್ಲದೆ, ಓದುಗರ ಮನೆ ಬಾಗಿಲಿಗೂ ಪುಸ್ತಕಗಳನ್ನು ತಲುಪಿಸಲು ಮುಂದಾಗಿದ್ದಾರೆ. ಈ ಬೆಳವಣಿಗೆ ರಾಜ್ಯದಲ್ಲಿ ಪುಸ್ತಕಗಳ ಓದುಗರ ಸಂಖ್ಯೆ ವೃದ್ಧಿಸಲು ಕಾರಣವಾಗಲಿದೆ ಎಂದರು.

ರಮೇಶ್ ರಾಯಭಾರಿ
ಬೆಂಗಳೂರಿನ ಜೀವನಶೈಲಿ ಗಮನದಲ್ಲಿಟ್ಟುಕೊಂಡು ೧೦೦೦ ಬುಕ್ ಸ್ಟ್ಯಾಂಡ್‌ಗಳನ್ನು ತೆರೆಯಲಾಗುತ್ತಿದೆ. ಮೆಡಿಕಲ್ ಶಾಪ್, ಕಾಫಿಡೇ, ಸ್ಟಾರ್ ಹೋಟೆಲ್, ದರ್ಶಿನಿ, ಮಾಲ್, ಥಿಯೇಟರ್ ಮುಂತಾದೆಡೆ ಕನ್ನಡ ಪುಸ್ತಕಗಳು ಇನ್ನು ಮುಂದೆ ಲಭ್ಯವಾಗಲಿದೆ. ಒಂದು ಸ್ಟ್ಯಾಂಡಿನಲ್ಲಿ ೨೦ ಪುಸ್ತಕಗಳಿದ್ದು, ಪ್ರತಿ ವಾರ ೨ ಪುಸ್ತಕಗಳು ಬಿಡುಗಡೆ ಗೊಳ್ಳಲಿವೆ. ಮೊಟ್ಟ ಮೊದಲ ಬಾರಿಗೆ ಕನ್ನಡ ಪುಸ್ತಕಗಳ ಕಾಲ್ ಸೆಂಟರ್ ತೆರಯುತ್ತಿರುವುದು ವಿಶೇಷವಾಗಿದೆ. ವಾಟ್ಸಪ್, ಮೆಸೇಜ್, ಪೋನ್ ಮೂಲಕವೂ ಓದುಗರಿದ್ದಲ್ಲಿಗೇ ಪುಸ್ತಕಗಳು ಲಭ್ಯವಾಗಿಲಿದೆ. ಇಷ್ಟೆಲ್ಲಾ ಮಾಡುವಾಗ ಬ್ರ್ಯಾಂಡ್ ಕೂಡ ಮುಖ್ಯಪಾತ್ರವೆನಿಸುತ್ತದೆ.

ಇಂದು ದಿನ ದಿನ ಬಳಕೆಯ ವಸ್ತುಗಳಿಗೆಲ್ಲ ನಾವು ಜಾಹೀರಾರು ಲೋಕವನ್ನು, ಸ್ಟಾರ್‌ಗಳನ್ನು ಅವಲಂಬಿಸಿದ್ದೇವೆ. ಎಲ್ಲದಕ್ಕೂ ಅಂತಾರಾಷ್ಟ್ರೀಯ ಮಾರುಕಟ್ಟೆ ಸೃಷ್ಟಿಸಿದ್ದೇವೆ. ಆದರೆ ಪುಸ್ತಕಗಳಿಗೆ ಕನ್ನಡದ ಪ್ರತಿಭಾವಂತ ನಾಯಕ ನಟ ರಮೇಶ್ ಅರವಿಂದ್ ವೀರಲೋಕ ರಾಯಭಾರಿ ಎನ್ನುತ್ತಾರೆ ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ್.

ಯಾರ‍್ಯಾರ ಪುಸ್ತಕ?
ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಅವರ ‘ಕೈ ಹಿಡಿದು ನೀ ನಡೆಸು ತಂದೆ’, ಕನ್ನಡಪ್ರಭ ಪುರವಣಿ ಸಂಪಾದಕ ಗಿರೀಶ್ ರಾವ್
(ಜೋಗಿ) ಅವರ ‘ಅವರು ಇವರು ದೇವರು’, ಕುಂ.ವೀರಭದ್ರಪ್ಪ ಅವರ ‘ವಿಶ್ವ ಸುಂದರಿ’, ಕೆ.ಆರ್.ಎಸ್. ಪಕ್ಷದ ಮುಖಂಡ ರವಿ ಕೃಷ್ಣಾ ರೆಡ್ಡಿ ಅವರ ‘ಒಳ್ಳೆಯ ಬದುಕಿನ ಸೂತ್ರಗಳು’, ಅನಂತ ಹುದೆಂಗಜೆ ಅವರ ‘ನಿಮಗೆಷ್ಟು ಹಣ ಬೇಕು?’, ರಂಗಸ್ವಾಮಿ
ಮೂಕನಹಳ್ಳಿ ಅವರ ‘ಮನಿ ಮನಿ ಎಕನಾಮಿ’, ದೀಪಾ ಹಿರೇಗುತ್ತಿ ಅವರ ‘ಸೋಲೆಂಬ ಗೆಲುವು’, ಗಣೇಶ್ ಕಾಸರಗೋಡು ಅವರ
‘ಲಾಸ್ಟ್ ಆ- ದಿ ಲೆಜೆಂಡ್ಸ್’, ರಮೇಶ್ ಅರವಿಂದ್ ಅವರ ‘ಆರ್ಟ್ ಆಫ್ ಸಕ್ಸಸ್’ ಪುಸ್ತಕಗಳನ್ನು ನಟ ಕಿಚ್ಚ ಸುದೀಪ್ ಲೋಕಾರ್ಪಣೆ ಮಾಡಿದರು. ಪುಸ್ತಕಗಳ ಲೇಖಕರು ಮತ್ತು ವೀರಲೋಕ ಸಂಸ್ಥೆಯ ವೀರಪುತ್ರ ಶ್ರೀನಿವಾಸ್ ಮತ್ತಿತರರಿದ್ದರು.

ಮುಖ್ಯಾಂಶಗಳು
ಪುಸ್ತಕಕ್ಕೂ ಸ್ಟಾರ್ ಪಟ್ಟ ನೀಡಿದ ವೀರಲೋಕ ಸಂಸ್ಥೆ ಸ್ಟಾರ್ ಹೋಟೆಲಿನಲ್ಲಿ ಕನ್ನಡ ಪುಸ್ತಕ ಲೋಕಾರ್ಪಣೆ ಮಾಡಿದ್ದು ಐತಿ ಹಾಸಿಕ ಗಮನ ಸೆಳೆದ ಸುಮಾರು ೨೦೦ ಸಾಹಿತಿಗಳ ಮುಕ್ತ ಸಂವಾದಪ್ರತಿ ಪುಸ್ತಕ ಬಿಡುಗಡೆಗೆ ೫ ನಿಮಿಷ ನಿಗದಿ ಮಾಡಿ ಬಿಡುಗಡೆ ಪ್ರತಿ ಪುಸ್ತಕದ ಬಗ್ಗೆ ಸಿನಿಮಾ ಟ್ರೇಲರ್ ಮಾದರಿಯಲ್ಲಿ ಪ್ರೋಮೋ ಪುಸ್ತಕಗಳಿಗಾಗಿ ಸಂಪರ್ಕಿಸಿ.
ದೂರವಾಣಿ: ೦೮೦-೬೯೨೬ ೨೨೨೨, ವಾಟ್ಸಆಪ್: ೭೦೨೨೧೨೨೧೨೧
ಈ-ಮೇಲ್: www.veeralokabooks.com ಅಲ್ಲದೆ, /veeralokabooks ಮೂಲಕ ಫೇಸ್ಬುಕ್, ಟ್ವಿಟರ್ ಮತ್ತು ಇನ್ಸ್ಟಾಗ್ರಾಂನಲ್ಲೂ
ಸಂಪರ್ಕಿಸಬಹುದು.

***

ನಾನು ಜಾಸ್ತಿ ಓದದೆ ಇರುವುದು ತುಂಬಾ ಒಳ್ಳೆಯದಾಗಿದೆ. ಏಕೆಂದರೆ, ಇದರಿಂದ ಹೆಚ್ಚು ಪುಸ್ತಕಗಳನ್ನು ಓದಲು ಸಾಧ್ಯವಾಗಿದೆ. ಇದೀಗ ಹಲವು ಪುಸ್ತಕಗಳನ್ನು ಏಕಕಾಲದಲ್ಲಿ ಬಿಡುಗಡೆ ಮಾಡಿ ಜೀವನದಲ್ಲಿ ಒಂದು ಒಳ್ಳೆಯ ಕೆಲಸ ಮಾಡಿದೆ. ಎಲ್ಲಾ
ಬರಹ ಗಳನ್ನು ಹತ್ತಿರ ಇಟ್ಟುಕೊಂಡಿದ್ದೇನೆ. ಪುಸ್ತಕ ಬರೆಯಲು ಕುಳಿತುಕೊಂಡರೆ ತುಂಬಾ ಸಲ ಏನು ಬರೆಯೋಬೇಕೋ ಗೊತ್ತಾಗುತ್ತಿರಲಿಲ್ಲ. ಎಲ್ಲಾ ಬರಹಗಾರ ಪುಸ್ತಕಗಳನ್ನು ಓದಲೇ ಬೇಕು. ಆದರೆ, ನನಗೆ ಜೀವನದಲ್ಲಿ ಹೆಚ್ಚು ಓದಲೂ ಆಗಿಲ್ಲ, ಬರೆಯಲಿಕ್ಕೂ ಆಗಿಲ್ಲ.
-ಕಿಚ್ಚ ಸುದೀಪ್, ನಟ