ಬೆಂಗಳೂರು: ಭಾರತದ ಪ್ರಮುಖ ಆಟೋಮೊಬೈಲ್ ತಯಾರಕ ಸಂಸ್ಥೆ ಮತ್ತು ಭಾರತದಲ್ಲಿ EV ಕ್ರಾಂತಿಯ ಪ್ರವರ್ತಕ ಟಾಟಾ ಮೋಟಾರ್ಸ್, ಇಂದು Tiago.ev ನ ಹೊಸ ಬೆಲೆಯನ್ನು ಘೋಷಿಸಿತು.
ಅದರ ಮೊದಲ 20,000 ಗ್ರಾಹಕರಿಗೆ ನೀಡಲಾದ ಲಾಂಚ್ ಬೆಲೆಯನ್ನು ಅಂತಿಮಗೊಳಿಸಿದೆ. Tiago.ev ಈಗ INR 8.69 ಲಕ್ಷದಿಂದ ಪ್ರಾರಂಭವಾಗುತ್ತಿದೆ (ಭಾರತದಾದ್ಯಂತ – ಎಕ್ಸ್ ಶೋ ರೂಂ). ಎಲ್ಲಾ ವೇರಿಯೆಂಟ್‌ಗಳಾದ್ಯಂತ ಈ INR 20,000 ರ ಬೆಲೆ ಹೆಚ್ಚಳವನ್ನು ಕನಿಷ್ಠಕ್ಕೆ ಇರಿಸಲಾಗಿದೆ.
ಇದರಿಂದಾಗಿ, Tiago.ev ಅತ್ಯಾಕರ್ಷಕ, ಶ್ರಮವಿಲ್ಲದ ಮತ್ತು ಪರಿಸರ ಸ್ನೇಹಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಖರೀದಿಸಲು ಬಯಸುವ ಹೊಸ ಗ್ರಾಹಕರಿಗೆ ಆಕರ್ಷಕ ಕೊಡುಗೆಯಾಗಿ ಉಳಿದಿದೆ.
ಈ ಎಕ್ಸೈಟಿಂಗ್ ಸುದ್ದಿಯ ಕುರಿತು ಪ್ರತಿಕ್ರಿಯಿಸಿದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಮಾರ್ಕೆಟಿಂಗ್, ಮಾರಾಟ ಮತ್ತು ಸೇವಾ ಕಾರ್ಯತಂತ್ರದ ಮುಖ್ಯಸ್ಥರಾದ ಶ್ರೀ ವಿವೇಕ್ ಶ್ರೀವತ್ಸ ಮಾತನಾಡುತ್ತಾ, “Tiago.ev ಒಂದು ವಿಶೇಷ ಉತ್ಪನ್ನವಾಗಿದೆ ಏಕೆಂದರೆ ಇದು ಇಲೆಕ್ಟ್ರಿಕ್ ಮೊಬಿಲಿಟಿಯನ್ನು ಲಭ್ಯವಾಗಿಸುತ್ತದೆ ಮತ್ತು ಮುಖ್ಯವಾಹಿನಿಗೆ ತರುತ್ತದೆ. ಮೊದಲ ದಿನದಲ್ಲಿ 10,000 ಯೂನಿಟ್‌ಗಳನ್ನು ಕಾಯ್ದಿರಿಸುವುದರೊಂದಿಗೆ ಭಾರತದಲ್ಲಿ ‘ವೇಗವಾಗಿ ಬುಕ್ ಮಾಡಲಾದ EV‘ ಆಗಿ ಗ್ರಾಹಕರಿಂದ ಅಸಾಧಾರಣ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ ಮತ್ತು ಒಂದು ತಿಂಗಳೊಳಗೆ 20,000 ಬುಕಿಂಗ್ ಗಳನ್ನು ಸಾಧಿಸಲಾಗಿದೆ.
“ಈ ಪ್ರಯಾಣದ ಮುಂದಿನ ಹಂತಕ್ಕೆ ನಾವು ಸಾಗುವ ಸಮಯ ಈಗ ಬಂದಿದೆ. ಈ ಅತ್ಯಾಕರ್ಷಕ ಉತ್ಪನ್ನದ ಉತ್ಸಾಹವನ್ನು ಯಾವುದೇ ರಾಜಿಯಿಲ್ಲದೆ ಹೆಚ್ಚಿನ ಗ್ರಾಹಕರಿಗೆ ವಿಸ್ತರಿಸುವುದನ್ನು ಮುಂದುವರಿಸಲು, Tiago.ev ಶ್ರೇಣಿಯ ಆರಂಭಿಕ ಬೆಲೆ ಯನ್ನು INR 8.69 ಲಕ್ಷಕ್ಕೆ ಘೋಷಿಸಲು ನಾವು ಸಂತೋಷಪಡುತ್ತೇವೆ, ಪ್ರಸ್ತಾವಿತ ಪರಿಚಯಾತ್ಮಕ ಬೆಲೆಯಿಂದ ಕನಿಷ್ಟ INR 20,000 ಹೆಚ್ಚಳದೊಂದಿಗೆ, EV ಮಾರುಕಟ್ಟೆಯನ್ನು ಸಾಮನ್ಯಜನರಿಗೆ ತೆರೆದಿಡುವುದು ಮತ್ತು 10 ಲಕ್ಷಕ್ಕಿಂತ ಕಡಿಮೆ ಆರಂಭಿಕ ಬೆಲೆಯನ್ನು ಉಳಿಸಿಕೊಳ್ಳುವ ಮೂಲಕ ಉತ್ಪನ್ನವನ್ನು ಎಲ್ಲರಿಗೂ ಸುಲಭ ಲಬ್ಯವಾಗುವಂತೆ ಮಾಡುವ ನಮ್ಮ ಭರವಸೆಗೆ ನಾವು ಬದ್ಧರಾಗಿದ್ದೇವೆ.
Tiago.ev ಇದು, ಸಾಮಾನ್ಯವಾಗಿ ಪ್ರೀಮಿಯಂ ಕಾರುಗಳಲ್ಲಿ ಲಭ್ಯವಿರುವ ಎಲ್ಲಾ ಪರಿಷ್ಕಾರಗಳನ್ನು ಹೊಂದಿರುವ ಉತ್ತಮ ಗುಣಮಟ್ಟದ ಸಂಪರ್ಕಿತ ವೈಶಿಷ್ಟ್ಯಗಳನ್ನು ನೀಡುವ ತನ್ನ ವಿಭಾಗದಲ್ಲಿಯೇ ಮೊದಲನೆಯ ಕಾರು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಇದು ಬ್ಯಾಟರಿ ಪ್ಯಾಕ್‌ಗಳ ಎರಡು ಆಯ್ಕೆಗಳು ಮತ್ತು ನಾಲ್ಕು ವಿಭಿನ್ನ ಚಾರ್ಜಿಂಗ್ ಪರಿಕರಗಳೊಂದಿಗೆ ಬರಲಿದೆ, ಗ್ರಾಹಕರು ತಮ್ಮ ಚಲನಶೀಲತೆಯ ಅಗತ್ಯಗಳನ್ನು ಉತ್ತಮವಾಗಿ ಪೂರೈಸುವ ಸಂಯೋಜನೆಯನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ.
ಐಷಾರಾಮಿ ವಾತಾವರಣದ ನಡುವೆ ಅದರ ರೋಮಾಂಚಕ, ಅದರೊಂದಿಗೆ ಚಾಲನೆ ಮಾಡಲು ಸುಲಭವಾದ ಅನುಭವ ದೊಂದಿಗೆ, Tiago.ev ಪ್ರತಿ ಕುಟುಂಬದ ಸದಸ್ಯರ ನೆಚ್ಚಿನ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಆಗುವ ಹಾದಿಯಲ್ಲಿದೆ. Tiago.ev ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಗ್ರಾಹಕರು Tiagoev.tatamotors.comಗೆ ಭೇಟಿ ನೀಡಬಹುದು ಅಥವಾ ಹತ್ತಿರದ ಡೀಲರ್‌ಶಿಪ್‌ಗೆ ಭೇಟಿ ನೀಡಬಹುದು.