Sunday, 15th December 2024

ಎಲೆಕ್ಟ್ರಿಕಲ್ಸ್, ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಲ್ಲಿ ಉಚಿತ ತರಬೇತಿ: ಸ್ವಯಂ ಉದ್ಯೋಗಕ್ಕೆ ಸೂಕ್ತ ಸೌಲಭ್ಯ

ಬೆಂಗಳೂರು: ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಯುವಕ – ಯುವತಿಯರಿಗೆ ಸೌರ ವಿದ್ಯುತ್ ವಲಯ ಮತ್ತು ವಿವಿಧ ವಿದ್ಯುನ್ಮಾನ ಕ್ಷೇತ್ರಗಳಲ್ಲಿ ಉಚಿತ ತರಬೇತಿ ನೀಡಿ ಸ್ವಾವಲಂಬಿ ಬದುಕು ರೂಪಿಸಲು ಕಾರ್ಯಯೋಜನೆ ರೂಪಿಸ ಲಾಗಿದೆ ಎಂದು ಧನ್ಯ ವಿದ್ಯುನ್ಮಾನ ತರಬೇತಿ ಸಂಸ್ಥೆಯ ಅಧ್ಯಕ್ಷ ಮಹದೇವ ಸ್ವಾಮಿ ತಿಳಿಸಿದ್ದಾರೆ.

ತಮ್ಮ ಊರು,ಗ್ರಾಮಗಳ ಆಸುಪಾಸಿನಲ್ಲಿ ಯಾವುದೇ ಬಂಡವಾಳ ಇಲ್ಲದೇ ಸ್ವಂತ ಉದ್ಯಮ ಆರಂಭಿಸಲು ಇದು ಅತ್ಯುತ್ತಮ ಅವಕಾಶವಾಗಿದ್ದು, ಮೇಲ್ಛಾವಣಿ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಕೆ ಮಾಡುವ ಕುರಿತು ತರಬೇತಿ ನೀಡಲಾಗುವುದು. ಜೊತೆಗೆ ಸೋಲಾರ್ ವಾಟರ್ ಹೀಟರ್ ತಂತ್ರಜ್ಞಾನದ ಬಗ್ಗೆಯೂ ಉಚಿತವಾಗಿ ಬೆಂಗಳೂರಿನ ಜೆ.ಪಿ ನಗರದಲ್ಲಿ ತರಬೇತಿಗೆ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

ಮನೆ, ಅಂಗಡಿ ಮುಂಗಟ್ಟು, ಕೈಗಾರಿಕೆಗಳಿಗೆ ಸಿಸಿಟಿವಿ ಅಳವಡಿಕೆ ಜೊತೆಗೆ ಎಲೆಕ್ಟ್ರಿಕಲ್ಸ್, ಮೆಕಾನಿಕಲ್, ಎಲೆಕ್ಟ್ರಾನಿಕ್ಸ್, ಐಟಿ, ಐಟಿಎಎಸ್ ಹಾಗೂ ಉತ್ತಮ ಗುಣಮಟ್ಟದ ಸೋಲಾರ್ ಉತ್ಪನ್ನಗಳ ಬಳಕೆ ಕುರಿತಂತೆಯೂ ತಿಳಿವಳಿಕೆ ನೀಡಲಾಗುವುದು, ನಮ್ಮ  ಕಂಪನಿಯ ಫ್ರಾಂಚೈಸಿ ಪಡೆಯಲಿಚ್ಚಿಸು ವವರು ಹೆಚ್ಚಿನ ಮಾಹಿತಿಗೆ ಮೊ: 9606153992 ಸಂಪರ್ಕಿಸಬಹುದು ಎಂದು ಮಹದೇವ ಸ್ವಾಮಿ ಹೇಳಿದ್ದಾರೆ.