ಬೆಂಗಳೂರು: ವೀರಭದ್ರ ನಗರದಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು ಅಗ್ನಿ ಅನಾಹುತದಿಂದ ಹತ್ತಕ್ಕೂ ಹೆಚ್ಚು ಖಾಸಗಿ ಬಸ್ಸುಗಳು ಸುಟ್ಟು ಭಸ್ಮ ವಾಗಿವೆ. ಅಗ್ನಿ ಅವಘಡದಿಂದ ಬೆಂಕಿ ಕೆನಾಲಿಗೆ ಮುಗಿಲೆತ್ತರಕ್ಕೆ ಹೊತ್ತಿ ಉರಿದಿದೆ. ಈ ವೇಳೆ, ಸುತ್ತಮುತ್ತಲಿನ ಬಸ್ ಗಳಿಗೂ ಬೆಂಕಿ ವ್ಯಾಪಿಸಿದೆ.
ಮುಗಿಲೆತ್ತರಕ್ಕೆ ಹೊತ್ತಿ ಉರಿದ ಬೆಂಕಿಯ ಕೆನ್ನಾಲಗೆಗೆ ಹತ್ತಕ್ಕೂ ಹೆಚ್ಚು ಬಸ್ ಗಳು ಸುತ್ತು ಭಸ್ಮವಾಗಿವೆ. ಏಕಾಏಕಿ ಕಾಣಿಸಿಕೊಂಡ ಬೆಂಕಿಯಿಂದ ಬೆಂಗಳೂರಿನಲ್ಲಿ ಮತ್ತೊಂದು ಬೆಂಕಿ ಅನಾಹುತ ಸಂಭವಿಸಿದ್ದು ವೀರಭದ್ರ ನಗರದಲ್ಲಿ ಬಸುಗಳು ಸುಟ್ಟು ಕರಕಲಾಗಿವೆ.
ತಕ್ಷಣ 2 ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯವನ್ನು ಮುಂದುವರಿಸಿದ್ದಾರೆ. ಇತ್ತೀಚಿಗೆ ಅತ್ತಿಬೆಲೆಯ ಪಟಾಕಿ ದುರಂತ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಈ ರೀತಿ ಇನ್ನೊಂದು ಬೆಂಕಿ ಅವಘಡ ಸಂಭವಿಸಿದೆ.