Wednesday, 11th December 2024

ಕನ್ನಡ ಪುಸ್ತಕಗಳಿಗಾಗಿ ವಿನೂತನ ವೀರಲೋಕ ಸಜ್ಜು

ಬೆಂಗಳೂರಿನಲ್ಲಿ 1000 ಬುಕ್ ಸ್ಟ್ಯಾಂಡ್: ವೀರಕಪುತ್ರ ಶ್ರೀನಿವಾಸ್ ಹೊಸ ಸಾಹ

ಬೆಂಗಳೂರು: ಪುಸ್ತಕ ಬಿಡುಗಡೆ, ಅದರಲ್ಲೂ ಕನ್ನಡ ಪುಸ್ತಕ ಬಿಡುಗಡೆ ಎಂದರೆ ಆಮಂತ್ರಣ ಪತ್ರಿಕೆ ಮುದ್ರಿಸಿ, ಹಂಚುವುದು, ಒಂದಷ್ಟು ಜನರನ್ನು ಸೇರಿಸಿ ಪುಸ್ತಕ ಬಿಡುಗಡೆ ಮಾಡಿಸಿ, ಮೂರ್ನಾಲ್ಕು ಅತಿಥಿಗಳಿಂದ ಭಾಷಣ ಮಾಡಿಸುವುದು, ಮರುದಿನದ ಪತ್ರಿಕೆಯಲ್ಲಿ ಒಂದಷ್ಟು ವರದಿ ಪ್ರಟಿಸಿಕೊಳ್ಳುವುದು… ಇಷ್ಟೇ ಆಗಿದೆ. ಅಲ್ಲಿಗೆ ಕಾರ್ಯಕ್ರಮ ಮುಗಿಯಿತು.

ಆದರೆ, ಪುಸ್ತಕ ಬಿಡುಗಡೆಗೂ ಒಂದು ಮಹತ್ವವಿದೆ. ಪುಸ್ತಕಗಳನ್ನು ಲೋಕಾರ್ಪಣೆ ಮಾಡು ವುದರೊಂದಿಗೆ ಅದನ್ನು ಓದುಗರಿಗೆ ತಲುಪಿಸುವ ಹೊಣೆಗಾರಿಕೆಯೂ ಇದೆ. ಇದರೊಂದಿಗೆ ಕನ್ನಡ ಪುಸ್ತಕಗಳ ಮಾರಾಟಕ್ಕೆ ಬ್ರ್ಯಾಂಡ್ ಕ್ರಿಯೇಟ್ ಮಾಡುವುದು, ಅವುಗಳಿಗೆ ತಾರಾ ಮೌಲ್ಯ ತಂದುಕೊಡುವ ಪ್ರಯತ್ನವೊಂದು ನಡೆದಿದೆ.

ಹೌದು, ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ಇಂತಹ ಮಹತ್ವದ ಪ್ರಯತ್ನಕ್ಕೆ ಕೈಹಾಕಿದೆ. ಬುಧವಾರ ಸಂಜೆ (ಜೂ.8) ಬೆಂಗಳೂರಿನ ಸ್ಟಾರ್ ಹೋಟೆಲ್‌ನಲ್ಲಿ ತಮ್ಮ ‘ವೀರಲೋಕ ಪಬ್ಲಿಕೇಷನ್’ ಮೂಲಕ ಜನಪ್ರಿಯ ಸಾಹಿತಿಗಳ ಹತ್ತು ಪುಸ್ತಕಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ವಿಶೇಷವೆಂದರೆ, ಪ್ರತಿ ಪುಸ್ತಕ ಬಿಡುಗಡೆಗೆ 5 ನಿಮಿಷ ನಿಗದಿ ಪಡಿಸಲಾಗಿದೆ. ಒಟ್ಟಾರೆ ಒಂದು ಗಂಟೆಯಲ್ಲಿ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ.

ಇದೇ ವೇಳೆ ಸುಮಾರು ೨೦೦ ಸಾಹಿತಿಗಳ ಮುಕ್ತ ಸಂವಾದವೂ ಇರುತ್ತದೆ. ನಟ ಕಿಚ್ಚ ಸುದೀಪ್ ಪುಸ್ತಕಗಳನ್ನು ಬಿಡುಗಡೆ ಮಾಡ ಲಿದ್ದಾರೆ. ಪ್ರತಿ ಪುಸ್ತಕದ ಬಗ್ಗೆ ಸಿನಿಮಾ ಟ್ರೇಲರ್ ಮಾದರಿಯಲ್ಲಿ ಪ್ರೋಮೋ ಮಾಡಿಸಲಾಗಿದೆ. ಅಷ್ಟೇ ಅಲ್ಲ, ಈ ಪುಸ್ತಕಗಳಿಗಾಗಿ ಅವರು ನಟ ರಮೇಶ್ ಅರವಿಂದ್ ಅವರನ್ನು ರಾಯಭಾರಿಯಾಗಿ ನೇಮಿಸಿದ್ದಾರೆ.

ವ್ಯವಸ್ಥಿತ ಬ್ರ್ಯಾಂಡಿಂಗ್: ಇಂದು ಎಲ್ಲವೂ ನಡೆಯುತ್ತಿರುವುದು ಬ್ರ್ಯಾಂಡಿಗ್ ಮೇಲೆಯೇ. ಹುಟ್ಟುವ ಮಗುವಿಗೆ ಸುತ್ತುವ ಬಟ್ಟೆ ಯಿಂದ ಹಿಡಿದು ಸತ್ತ ನಂತರ ಮಣ್ಣು ಮಾಡುವವರೆಗೂ ಎಲ್ಲಕ್ಕೂ ಬ್ರ್ಯಾಂಡಿಂಗ್ ಇದೆ. ಹೀಗಾಗಿ ಕನ್ನಡ ಪುಸ್ತಕಗಳಿಗೂ ಒಂದು ಬ್ರ್ಯಾಂಡಿಂಗ್ ಇರಬೇಕು ಎಂಬ ಉದ್ದೇಶದಿಂದ ಈ ರೀತಿಯ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ವೀರಕಪುತ್ರ ಹೇಳು ತ್ತಾರೆ.

ಇದಷ್ಟೇ ಅಲ್ಲ, ಬೆಂಗಳೂರಿನ ಮೆಡಿಕಲ್ ಶಾಪ್, ಕಾಫಿ ಡೇ, ದರ್ಶಿನಿ ಹೋಟೆಲ್‌ಗಳು, ಹೋಟೆಲ್, ಮಾಲ್, ಸಿನಿಮಾ ಮಂದಿರ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ 1000 ಬುಕ್ ಸ್ಟ್ಯಾಂಡ್‌ಗಳನ್ನು ಇಟ್ಟು ಆ ಮೂಲಕವೂ ಪುಸ್ತಕವನ್ನು ಜನರಿಗೆ ತಲುಪಿಸಲು ತೀರ್ಮಾನಿಸಿದ್ದಾರೆ.

ಕನ್ನಡ ಪುಸ್ತಕಗಳ ಕಾಲ್ ಸೆಂಟರ್
ಕೇವಲ ಪುಸ್ತಕ ಬಿಡುಗಡೆ ಮಾಡಿ ಸುಮ್ಮನಿರುವುದಲ್ಲ, ಅದನ್ನು ಓದುಗರಿಗೆ ತಲುಪಿಸುವ ಕೆಲಸ ಮಾಡಬೇಕು. ಅದಕ್ಕಾಗಿ ಕನ್ನಡ ದಲ್ಲಿ ಕಾಲ್ ಸೆಂಟರ್ ಒಂದನ್ನು ಆರಂಭಿಸಲಾಗುತ್ತದೆ. ಕನ್ನಡ ಪುಸ್ತಕ ಓದುವವರು ಸಾಕಷ್ಟಿದ್ದಾರೆ. ಆದರೆ, ಅವರಿಗೆ ಪುಸ್ತಕ ತಲುಪಿಸುವ ಕೆಲಸ ಆಗುತ್ತಿಲ್ಲ. ಹೀಗಾಗಿ ಓದುಗರನ್ನು ಗುರುತಿಸಿ ಸುಮಾರು 11 ಲಕ್ಷ ಕನ್ನಡಿಗರ ಮಾಹಿತಿ ಸಂಗ್ರಹಿಸಿ ದ್ದೇವೆ. ಕಾಲ್ ಸೆಂಟರ್ ಮೂಲಕ ಅವರಿಗೆ ವಾಟ್ಸ್‌ಆಪ್, ಕರೆ, ಸಂದೇಶಗಳನ್ನು ಕಳುಹಿಸಿ ಪುಸ್ತಕಗಳ ಬಗ್ಗೆ ಮಾಹಿತಿ ನೀಡಲಾ ಗುವುದು. ಆ ಮೂಲಕ ಮನೆ ಬಾಗಿಲಿಗೆ ಪುಸ್ತಕ ಮಾರಾಟ ವ್ಯವಸ್ಥೆ ಮಾಡಲಾಗುವುದು ಎನ್ನುತ್ತಾರೆ ವೀರಕಪುತ್ರ ಶ್ರೀನಿವಾಸ್.

ಪುಸ್ತಕಗಳಿಗಾಗಿ ಸಂಪರ್ಕಿಸಿ
ದೂರವಾಣಿ: ೦೮೦-೬೯೨೬ ೨೨೨೨
ವಾಟ್ಸ್‌ಆಪ್: ೭೦೨೨೧೨೨೧೨೧
ಈ-ವೆಲ್: ಡಿಡಿಡಿ.qಛಿಛ್ಟಿZಟhZಚಿಟಟho.ಟಞ
ಅಲ್ಲದೆ, /qಛಿಛ್ಟಿZಟhZಙ
ಚಿಟಟho ಮೂಲಕ ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂನಲ್ಲೂ ಸಂಪರ್ಕಿಸಬಹುದು.