Thursday, 12th December 2024

ಯೂಟ್ಯೂಬರ್ ವಿಕಾಸ್ ಗೌಡ ಬಂಧನ

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ವಿವ್ಯೂಸ್ ಹೆಚ್ಚಿಸಿಕೊಳ್ಳುವ ಭರದಲ್ಲಿ ನಿಯಮ ಮೀರಿ ವಿಡಿಯೋ ಮಾಡಿದ ಯೂಟ್ಯೂಬರ್ ಪೊಲೀಸರು ಅತಿಥಿಯಾಗಿರುವ ಘಟನೆ ನಡೆದಿದೆ.

ನಿರ್ಬಂಧಿತ ಪ್ರದೇಶಕ್ಕೆ ಹೋಗಿ ವಿಡಿಯೋ ಮಾಡಿದ ಆರೋಪ ಮೇರೆಗೆ ಯೂಟ್ಯೂಬರ್ ವಿಕಾಸ್ ಗೌಡ ಎಂಬಾತನನ್ನು ಪೊಲೀಸರು ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧನ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಯೂಟ್ಯೂಬರ್ ವಿಕಾಸ್ ಗೌಡ ಎಂಬಾತನನ್ನು ಯಲಹಂಕ ಪೊಲೀಸರ ನೆರವಿನಿಂದ ಏರ್​​ಪೋರ್ಟ್ ಠಾಣಾ ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿ ವಿರುದ್ಧ ನಿಷೇಧಿತ ಪ್ರವೇಶದ ಅತಿಕ್ರಮ ಪ್ರವೇಶ ಹಾಗೂ ಮೊಬೈಲ್​ ಮೂಲಕ ಏರ್​ಪೋರ್ಟ್​ ರನ್​​ವೇ ಚಿತ್ರೀಕರಣ ಮಾಡಿದ ಆರೋಪ ಕೇಳಿ ಬಂದಿದೆ.

ವಿಕಾಸ್ ಗೌಡ ಸಾಮಾಜಿಕ ಜಾಲತಾಣದಲ್ಲಿ ಏರ್​ಪೋರ್ಟ್​​ಗೆ ಸಂಬಂಧಿಸಿದ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಆ ವಿಡಿಯೋದಲ್ಲಿ 24 ಗಂಟೆಗಳ ಕಾಲ ವಿಮಾನ ನಿಲ್ದಾಣದ ರನ್ ವೇ ಬಳಿಯೇ ಇದ್ದೆ ಎಂದು ಹೇಳಿಕೊಂಡಿದ್ದಾನೆ. ಇನ್ನು ಟಿಕೆಟ್​ ಪಡೆದು ರನ್​ ವೇ ಕಡೆ ಹೋಗಿ ವಿಮಾನ ಏರದೆ ಅಕ್ರಮವಾಗಿ ರನ್​ ವೇ ಬಳಿ ಉಳಿದುಕೊಂಡಿರುವ ಬಗ್ಗೆ ದೂರು ದಾಖಲಿಸಲಾ ಗಿದೆ.

ಯ್ಯೂಟೂಬರ್ ಹಂಚಿಕೊಂಡಿದ್ದ ವಿಡಿಯೋ ನೀಡಿದ ಸಿಐಎಸ್‌ಎಫ್ ಅಧಿಕಾರಿಗಳು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಪೊಲೀಸರು ಆರೋಪಿಯನ್ನು ಬಂಧನ ಮಾಡಿ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಟಿಕೆಟ್ ಪಡೆದಿದುಕೊಂಡಿದ್ದು ತಿಳಿದು ಬಂದಿದೆಯಂತೆ. ಟಿಕೆಟ್ ಪಡೆದು ಟ್ರಾವೆಲ್ ಮಾಡದೇ ರನ್ ವೇ ಬಳಿ ಸುಮಾರು ನಾಲ್ಕೈದು ಗಂಟೆಗಳ ಕಾಲ ಉಳಿದುಕೊಂಡಿದ್ದ ಎನ್ನಲಾಗಿದೆ.  ನಂತರ ವಿಡಿಯೋ ಮಾಡಿಕೊಂಡು ಬಂದಿದ್ದ ವಿಕಾಸ್, ಅದನ್ನು ಎಡಿಟ್ ಮಾಡಿ ತನ್ನ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದನಂತೆ. ಎಲ್ಲಾ ಅಧಿಕಾರಿ, ಸಿಬ್ಬಂದಿ ಕಣ್ತಪ್ಪಿಸಿ ಏರ್​ಪೋರ್ಟ್​ ಪ್ರವೇಶ ಮಾಡಿ ವಿಡಿಯೋ ಮಾಡಿದ್ದ ವಿಕಾಸ್ ವಿರುದ್ಧ ಏರ್​ಪೋರ್ಟ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.