Sunday, 15th December 2024

ಪುತ್ರನಿಗೆ ಟಿಕೆಟ್ ಬೇಕಾದರೆ ರಾಜಕೀಯ ನಿವೃತ್ತಿ ಘೋಷಿಸಿ: ಸೋಮಣ್ಣಗೆ ಹೈಕಮಾಂಡ್ ಸೂಚನೆ

ಬೆಂಗಳೂರು : ಪುತ್ರನಿಗೆ ಟಿಕೆಟ್ ಬೇಕಾದರೆ ರಾಜಕೀಯ ನಿವೃತ್ತಿ ಘೋಷಿಸಿ ಎಂದು ಸಚಿವ ಸೋಮಣ್ಣಗೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ.

ಚುನಾವಣಾ ರಾಜಕೀಯಕ್ಕೆ ಈಶ್ವರಪ್ಪ ರಾಜೀನಾಮೆ ನೀಡಿದ ಬೆನ್ನಲ್ಲೇ ಸಚಿವ ಸೋಮಣ್ಣ ಗೆ ಹೈಕಮಾಂಡ್ ಸಂದೇಶ ರವಾನಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಒಂದೇ ಕುಟುಂಬಕ್ಕೆ 2 ಟಿಕೆಟ್ ನೀಡಲು ಆಗಲ್ಲ ಪುತ್ರನಿಗೆ ಟಿಕೆಟ್ ಬೇಕಾದರೆ ರಾಜಕೀಯ ನಿವೃತ್ತಿ ಘೋಷಿಸಿ ಎಂದು ಸಚಿವ ಸೋಮಣ್ಣಗೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾ ಗಿದೆ.

ಚಾಮರಾಜನಗರದ ಮಲೆಮಹಾದೇಶ್ವರ ಬೆಟ್ಟಕ್ಕೆ ತೆರಳಿ, ಮಾದಪ್ಪನ ದರ್ಶನವನ್ನು ಇಂದು ವಸತಿ ಸಚಿವ ವಿ.ಸೋಮಣ್ಣ ಪಡೆದರು. ಈ ಬಳಿಕ ಕಾರು ಹತ್ತುವ ವೇಳೆಯಲ್ಲಿ ಈ ಬಾರಿ ಎಲ್ಲಿಂದ ಸ್ಪರ್ಧಿಸುವುದಾಗಿ ಕಾರ್ಯಕರ್ತರು ಕೇಳಿದರು. ಕಾರ್ಯಕರ್ತರ ಪ್ರಶ್ನೆಗೆ ಉತ್ತರಿಸಿ, ಮಾದಪ್ಪನ ದರ್ಶನ ಪಡೆದು, ಯಾವ ಕ್ಷೇತ್ರಕ್ಕೆ ಹೋಗುತ್ತೀನೋ, ಅಲ್ಲಿಂದಲೇ ಸ್ಪರ್ಧಿಸುವು ದಾಗಿ ಹೇಳಿದರು.