Tuesday, 5th November 2024

ವಂಡರ್‌ಲಾದಲ್ಲಿ ಬುಧವಾರವೂ ಸಿಗಲಿದೆ ಶೇ.25ರಷ್ಟು ರಿಯಾಯಿತಿ

ಬೆಂಗಳೂರು: ಮನರಂಜನಾ ಪ್ರಿಯರಿಗಾಗಿ ವಂಡರ್‌ಲಾ ಇದೀಗ ಬುಧವಾರ ಕೂಡ ವಿಶೇಷ ಕೊಡುಗೆಯನ್ನು ಘೋಷಿಸಿದೆ.

ಪ್ರತಿ ಬುಧವಾರ ಪಾರ್ಕ್‌ನ ಪ್ರವೇಶ ಟಿಕೆಟ್‌ಗಳ ಮೇಲೆ ಶೇ. 25 ರಷ್ಟು ರಿಯಾಯಿತಿ ಘೋಷಿಸಿದ್ದು, ಆನ್‌ಲೈನ್‌ನಲ್ಲಿ ಬುಕ್‌ ಮಾಡುವ ಮೊದಲ 1000 ಟಿಕೆಟ್‌ಗಳ ಮೇಲೆ ಈ ಕೊಡುಗೆ ಅನ್ವಯವಾಗಲಿದೆ.

ಆನ್‌ಲೈನ್‌ನಲ್ಲಿ ಟಿಕೆಟ್‌ ಖರೀದಿದಾರರಿಗೆ ಈ ಆಫರ್‌ನ ಅನುಭವ ಸಿಗಲಿದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಟಿಕೆಟ್‌ಗಳನ್ನು ಕಾಯ್ದಿರಿಸಲು ಅನುವು ಮಾಡಿಕೊಡುತ್ತದೆ. ವಿಶೇಷ ಕೊಡುಗೆಯು ವಂಡರ್ಲಾ – ಬೆಂಗಳೂರು, ಹೈದರಾಬಾದ್ ಮತ್ತು ಕೊಚ್ಚಿಯ ಎಲ್ಲಾ ಮೂರು ಪಾರ್ಕ್‌ಗಳಲ್ಲಿ ಆನ್‌ಲೈನ್ ಟಿಕೆಟ್‌ಗಳಿಗೆ ಮಾತ್ರ ಮಾನ್ಯವಾಗಿರಲಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆಚಿಟ್ಟಿಲಪ್ಪಿಳ್ಳಿ, ಪ್ರತಿ ಬುಧವಾರದಂದು ಈ ವಿಶೇಷ ರಿಯಾಯಿತಿ ನೀಡಿರುವುದು ಸಾಕಷ್ಟು ಜನರಿಗೆ ಅನುಕೂಲವಾಗಲಿದ್ದು, ವಾರದ ಮಧ್ಯದದಲ್ಲೂ ವಂಡರ್‌ಲಾದಲ್ಲಿ ಮನರಂಜನೆ ಪಡೆಯಲು ಸಾಧ್ಯವಾಗಲಿದೆ. ಈ ಅದ್ಭುತ ಕೊಡುಗೆಯು ನಮ್ಮ ನಿಷ್ಠಾವಂತ ಪೋಷಕರಿಗೆ ಧನ್ಯವಾದ ಸಲ್ಲಿಸುವ ಒಂದು ಮಾರ್ಗವಾಗಿದೆ ಎಂದು ಹೇಳಿದರು.

ವಂಡರ್‌ಲಾ ತಮ್ಮ ಆನ್‌ಲೈನ್ ಪೋರ್ಟಲ್ https://bookings.wonderla.com/. ಮೂಲಕ ತಮ್ಮ ಪ್ರವೇಶ ಟಿಕೆಟ್‌ಗಳನ್ನು ಮುಂಚಿತವಾಗಿ ಕಾಯ್ದಿರಿಸಬಹುದು.ಹೆಚ್ಚಿನ ಮಾಹಿತಿಗಾಗಿ https://www.wonderla.com/offers/save-25-on-wednesdays-at-wonderla-parks.html ಗೆ ಭೇಟಿ ನೀಡಿ ಅಥವಾ ಕರೆ ಮಾಡಿ:

ಬೆಂಗಳೂರು: +91 80372 30333, +91 80350 73966
ಹೈದರಾಬಾದ್: 0841 4676333, +91 91000 63636
ಕೊಚ್ಚಿ: 0484-3514001, 7593853107