Saturday, 14th December 2024

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರಿಗೆ ವಿಶೇಷ ಪ್ರವೇಶ ಘೋಷಿಸಿದ ವಂಡರ್‌ಲಾ

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಾ.8ರಂದು ವಂಡರ್‌ಲಾದಲ್ಲಿ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶ ವಿರಲಿದೆ.

ಈ ದಿನವನ್ನು ಕೇವಲ ಮಹಿಳೆಯರಿಗಾಗಿ ಮೀಸಲಿಡುವ ಉದ್ದೇಶದಿಂದ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶವಿರಲಿದ್ದು,10 ವರ್ಷಕ್ಕಿಂತ ಮೇಲ್ಪಟ್ಟ ಗಂಡು ಮಕ್ಕಳಿಗೆ ಆ ದಿನ ಪ್ರವೇಶವಿರುವುದಿಲ್ಲ. ಅಷ್ಟೇ ಅಲ್ಲದೆ, ಆ ದಿನದಂದು ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್‌ ಮಾಡುವ ಸಾವಿರ ಮಹಿಳೆಯರಿಗೆ ಒಂದು ಟಿಕೆಟ್‌ ಪಡೆದರೆ ಮತ್ತೊಂದು ಟಿಕೆಟ್‌ ಉಚಿತವಿರಲಿದೆ. ಇದಷ್ಟೇ ಅಲ್ಲದೆ,

ಬಿಎಂಟಿಸಿ ವೋಲ್ವೊ ಪ್ರಯಾಣಿಕರಿಗೆ ಶೇಕಡ 15% ರಿಯಾಯಿತಿ
ಮಾರ್ಚ್ 8 ರಂದು ಬೆಂಗಳೂರಿನಿಂದ ವಂಡರ್ಲಾಗೆ ಬರುವ ಮಹಿಳೆಯರಿಗೆ ವೋಲ್ವೋ ಬಸ್ ಸೇವೆಯನ್ನು ಒದಗಿಸಲು BMTCಯು ಸಹಯೋಗವನ್ನು ಘೋಷಿಸಿದೆ. ಹೆಚ್ಚುವರಿಯಾಗಿ ಅದೇ ದಿನ ಪಾರ್ಕ್ ಟಿಕೆಟ್ ಕೌಂಟರ್‌ನಲ್ಲಿ ತಮ್ಮ BMTC ವೋಲ್ವೋ ಬಸ್ ಟಿಕೆಟ್ ಅನ್ನು ಪ್ರಸ್ತುತಪಡಿಸುವ ಮಹಿಳಾ ಪ್ರಯಾಣಿಕರಿಗೆ ವಂಡರ್ಲಾ ಪಾರ್ಕ್ ಟಿಕೆಟ್‌ಗಳ ಮೇಲೆ 15% ರಿಯಾಯಿತಿಯನ್ನು ನೀಡುತ್ತಿದೆ..

ಈ ಕುರಿತು ಮಾತನಾಡಿದ ವಂಡರ್‌ ಲಾ ವ್ಯವಸ್ಥಾಪಕ ನಿರ್ದೇಶಕರಾದ ಅರುಣ್ ಕೆ ಚಿಟ್ಟಿಲಪ್ಪಿಳ್ಳಿ, “ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಮಾರ್ಚ್ 8ರಂದು ವಂಡರ್‌ಲಾ ಪಾರ್ಕ್‌ಗೆ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶ ನೀಡುವುದರ ಮೂಲಕ ಮಹಿಳೆಯರಿಗೆ ಅವಿಸ್ಮರಣೀಯ ದಿನವನ್ನಾಗಿಸಲಿದ್ದೇವೆ ಎಂದರು.

ಬಿಎಂಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಿ ಸಿ ನಾಗರಾಜ್ ಮೂರ್ತಿ ಮಾತನಾಡಿ, ಬಿಎಂಟಿಸಿ ಈ ಹಿಂದೆಯೂ ವಂಡರ್‌ಲಾ ಹಾಲಿಡೇಸ್‌ನೊಂದಿಗೆ ಸಹಯೋಗ ಹೊಂದಿದ್ದು ಇದರ ಫಲಿತಾಂಶವು ಪರಿಣಾಮಕಾರಿಯಾಗಿರುವುದರೊಂದಿಗೆ ಸಾರ್ವಜನಿಕರಿಗೆ ಸಹಾಯವಾಗುವ ಇಂತಹ ಅನೇಕ ವ್ಯವಸ್ಥೆಯನ್ನು ಆಯೋಜಿಸಲು ಬಿಎಂಟಿಸಿ ಸಂಸ್ಥೆಯು ಎದುರುನೋಡುತ್ತಿದೆ ಎಂದು ತಿಳಿಸಿದರು.

ಕೊಡುಗೆಯ ಕುರಿತು ಹೆಚ್ಚಿನ ವಿವರಗಳಿಗಾಗಿ, https://www.wonderla.com/offers/womens-day-offer-at-wonderla-parks.html ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಬೆಂಗಳೂರು ಪಾರ್ಕ್ ಅನ್ನು ಸಂಪರ್ಕಿಸಿ – 91 80372 30333, 91 80350 73966 ವಂಡರ್ಲಾ ಕುರಿತು ಹೆಚ್ಚಿನ ಮಾಹಿತಿಗಾಗಿ, www.wonderla.com ಗೆ ಭೇಟಿ ನೀಡಿ.