Friday, 22nd November 2024

ಸೆಪ್ಟಂಬರ್ 25 ರಿಂದ 28ರ ವರೆಗೆ ವಿಶ್ವ ಕಾಫಿ ಸಮ್ಮೇಳನ: ಭಾರತಕ್ಕೆ ಆತಿಥ್ಯ

ಬೆಂಗಳೂರು: ವಿಶ್ವ ಕಾಫಿ ಸಮ್ಮೇಳನ 2023ರ ಸೆಪ್ಟಂಬರ್ 25 ರಿಂದ 28ರ ವರೆಗೆ ನಡೆಯಲಿದ್ದು ಇದೇ ಮೊದಲ ಬಾರಿಗೆ ಭಾರತ ಆತಿಥ್ಯ ವಹಿಸುತ್ತಿದೆ. ವಿಶ್ವ ಕಾಫಿ ಸಮ್ಮೇಳನದ ಐದನೇ ಆವೃತ್ತಿಗೆ ಬೆಂಗಳೂರು ಆತಿಥ್ಯ ವಹಿಸಲಿದೆ.

ಇಂಟರ್‌ನ್ಯಾಷನಲ್ ಕಾಫಿ ಸಂಸ್ಥೆ, ಕಾಫಿ ವ್ಯಾಪಾರವನ್ನು ಉತ್ತೇಜಿಸಲು ಮತ್ತು ಕಾಫಿ ಉತ್ಪಾದನೆ ಮಾಡುವ ಮತ್ತು ಅತಿ ಹೆಚ್ಚು ಬಳಸುವ ರಾಷ್ಟ್ರಗಳ ನಡುವೆ ಸಹಕಾರ ಹೆಚ್ಚಿಸಲು ಮೀಸಲಾಗಿರುವ ಪ್ರಾಥಮಿಕ ಅಂತರ ಸರ್ಕಾರಿ ಸಂಸ್ಥೆಯಾಗಿದೆ.

ಸೋಮವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಲೋಗೋ ಮತ್ತು ಥೀಮ್ ಅನ್ನು ಅನಾವರಣಗೊಳಿಸಲಾಯಿತು. 80 ಕ್ಕೂ ಹೆಚ್ಚು ದೇಶಗಳ ಉತ್ಪಾದಕರು, ಕ್ಯೂರ್‌ಗಳು, ರೋಸ್ಟರ್‌ಗಳು, ರಫ್ತುದಾರರು, ನೀತಿ ನಿರೂಪಕರು ಮತ್ತು ಸಂಶೋಧಕರು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ ಎಂದು ಹೇಳಲಾಗಿದೆ.

ಕರ್ನಾಟಕದ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಅವರು ಕಾರ್ಯಕ್ರಮದ ಬ್ರಾಂಡ್ ಅಂಬಾಸಿಡರ್ ಆಗಿರುತ್ತಾರೆ ಎಂದು ಕಾಫಿ ಬೋರ್ಡ್ ಆಫ್ ಇಂಡಿಯಾ ಸಿಇಒ ಮತ್ತು ಕಾರ್ಯದರ್ಶಿ ಕೆ.ಜಿ. ಜಗದೀಶ ಘೋಷಿಸಿದರು. ಏಷ್ಯಾದಲ್ಲೇ ಮೊದಲ ಬಾರಿ ವಿಶ್ವ ಕಾಫಿ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ.

ವಿಶ್ವ ಕಾಫಿ ಸಮ್ಮೇಳನನದ ಹಿಂದಿನ ಆವೃತ್ತಿಗಳು ಇಂಗ್ಲೆಂಡ್ (2001), ಬ್ರೆಜಿಲ್ (2005), ಗ್ವಾಟೆಮಾಲಾ (2010) ಮತ್ತು ಇಥಿಯೋಪಿಯಾ (2016) ದಲ್ಲಿ ನಡೆದಿದ್ದವು.