ಬೆಂಗಳೂರು: ಪರ್ಸನಲ್ ಕೇರ್ ಅಪ್ಲೈಯನ್ಸ್ (ಪಿಸಿಎ)(ವೈಯಕ್ತಿಕ ಆರೈಕೆ ಉತ್ಪನ್ನಗಳು) ಮತ್ತು ಬ್ಯೂಟಿ ಕೇರ್ ಆಕ್ಸೆಸರೀಸ್ (ಬಿಸಿಎ)(ಸೌಂದರ್ಯ ಆರೈಕೆ ಪರಿಕರ) ವರ್ಗಗಳಲ್ಲಿ ಮುಂಚೂಣಿಯಲ್ಲಿರುವ ವೆಗಾ, ಇಂದು ಮಹಿಳಾ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮಹಿಳಾ ಕ್ರಿಕೆಟ್ ತಂಡದೊ0ದಿಗೆ ತನ್ನ ಮೊದಲ ಕ್ರೀಡಾ ಪಾಲುದಾರಿಕೆ ಪ್ರಕಟಿಸಿದೆ. ಆಟಗಾರರು ಪಿಚ್ನಲ್ಲಾಗಲೀ ಮತ್ತು ಹೊರಗಡೆಯಾಗಲೀ ಎರಡೂ ಕಡೆಗಳಲ್ಲಿ ಹೆಚ್ಚು ಪ್ರಯತ್ನವಿಲ್ಲದೆ ವಿಶೇಷ ಶೈಲಿ ಹೊಂದಲಿದ್ದಾರೆ.
ಈ ಸಹಯೋಗದ ಅಡಿಯಲ್ಲಿ, ಮುಂದಿನ ದಿನಗಳಲ್ಲಿ ಬೆಂಗಳೂರು ತಂಡ ಆಡುವ ಎಲ್ಲಾ ಪಂದ್ಯಗಳಲ್ಲಿ ಆಟಗಾರರ ಲೀಡ್ ಟ್ರೌಸರ್ಗಳು ಆರ್ಸಿಬಿ ಜರ್ಸಿಯ ಭಾಗವಾಗಿ ವೆಗಾ ಚಿಹ್ನೆಯನ್ನು ಒಳಗೊಂಡಿರುತ್ತವೆ. ಮಾರ್ಚ್ ೪ ರಂದು ಮುಂಬೈನಲ್ಲಿ ಉದ್ಘಾಟನಾ ಪಂದ್ಯದೊ೦ದಿಗೆ ಡಬ್ಲ್ಯುಪಿಎಲ್ ಪ್ರಾರಂಭವಾಯಿತು. ಮಾರ್ಚ್ ೫ ರಂದು ಮುಂಬೈನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಸಿಬಿ ತನ್ನ ಮೊದಲ ಪಂದ್ಯ ಆಡಿತ್ತು.
ವೆಗಾವನ್ನು ಇತ್ತೀಚೆಗೆ ‘ದೇಶದಲ್ಲಿ ನಂ. ೧ ಹೇರ್ ಸ್ಟೆöÊಲರ್ ಅಪ್ಲೈಯನ್ಸ್ ಬ್ರಾಂಡ್’ ಎಂದು ಪ್ರಕಟಿಸಲಾಗಿದೆ. ಎಜೆಡ್ ರಿಸರ್ಚ್ನ ಸಂಶೋಧನೆಯ ಪ್ರಕಾರ, ವೆಗಾವನ್ನು ‘ಅತ್ಯಂತ ಹೆಚ್ಚು ಪುನರ್ ಖರೀದಿ ಮಾಡಲಾದ ಬ್ರ್ಯಾಂಡ್’ ಎಂದು ಗುರುತಿಸಲಾಗಿದೆ ಅಲ್ಲದೇ ಕೇಶ ಶೈಲಿ ಉಪಕರಣಗಳ ಉಪ-ವರ್ಗದಲ್ಲಿ ‘ಅತ್ಯಂತ ತೃಪ್ತಿಕರ ಬಳಕೆದಾರರೊಂದಿಗೆ’ ‘ಮೋಸ್ಟ್ ಓನ್ಡ್ ಬ್ರ್ಯಾಂಡ್’ ಎಂದು ಗುರುತಿಸಲಾಗಿದೆ. ವೆಗಾ ೨ ದಶಕಗಳಿಂದ ಕೇಶ ಬ್ರಶ್ಗಳು ಮತ್ತು ಬಾಚಣಿಗೆಗಳ ವರ್ಗದಲ್ಲಿ ಪ್ರಮುಖ ಸಂಸ್ಥೆಯಾಗಿದೆ ಮತ್ತು ಪುರುಷರ ಪಿಸಿಎ ವರ್ಗಗಳಲ್ಲಿ ವ್ಯಾಪಕ ಶ್ರೇಣಿಯ ಕೊಡುಗೆಗಳನ್ನು ಸಾದರಪಡಿಸುತ್ತಿದೆ. ಇದು ಬಳಸಲು ಸುಲಭ, ನವೀನ ಮತ್ತು ಪ್ರಯಾಣ-ಸ್ನೇಹಿ ಮುಡಿಯಿಂದ ಪಾದದವರೆಗಿನ ಗ್ರೂಮಿಂಗ್(ಒಪ್ಪಓರಣಗೊಳಿಸುವ) ಮತ್ತು ಸ್ಟೈಲಿಂಗ್(ಶೈಲಿ ರೂಪಿಸುವ) ಉತ್ಪನ್ನಗಳನ್ನು ಒಳಗೊಂಡಿದೆ.
ಈ ವ್ಯೂಹಾತ್ಮಕ ಪಾಲುದಾರಿಕೆ ಬಗ್ಗೆ ವೆಗಾದ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಈತಿ ಸಿಂಘಾಲ್ ಪ್ರತಿಕ್ರಿಯಿಸಿ, “ಆರ್ಸಿಬಿಯೊಂದಿಗಿನ ನಮ್ಮ ಒಡ ನಾಟವು ಮಹಿಳಾ ಕ್ರಿಕೆಟಿಗರನ್ನು ಬೆಂಬಲಿಸುವ ನಮ್ಮ ನಡುವಿನ ಹಂಚಿಕೊAಡಿರುವ ಮೌಲ್ಯಗಳನ್ನು ಪ್ರಚಾರ ಮಾಡಲು ನಮಗೆ ಸಹಾಯ ಮಾಡುತ್ತದೆ ಮತ್ತು ಇತರರು ಅವರ ಹೃದಯ ಮತ್ತು ಭಾವೋತ್ಸಾಹವನ್ನು ಅನುಸರಿಸಿ ಸಾಗಲು ಪ್ರೇರೇಪಿಸುತ್ತದೆ. ಈ ಸಹಭಾಗಿತ್ವವು ನಿರ್ದಿಷ್ಟವಾಗಿ ವಿಶೇಷವಾಗಿದೆ. ಏಕೆಂದರೆ ಮಹಿಳೆಯರಿಗೆ ಇಂತಹ ಹಿಂದೆAದೂ ಇಲ್ಲದಂತೆ ಧೈರ್ಯವಾಗಿ ಆಡಲು ಇದು ಮೊದಲ ರೀತಿಯ ವೇದಿಕೆಯಾಗಿದೆ. ವೆಗಾ ಭಾರತದ ನಂಬರ್ ೧ ಹೇರ್ ಸ್ಟೈಲರ್ ಅಪ್ಲೈಯನ್ಸ್ ಬ್ರ್ಯಾಂಡ್ ಆಗಿರುವುದರೊಂದಿಗೆ ಮಹಿಳೆಯರಿಗೆ ಪರ್ಯಾಯನಾಮವಾದ ಬ್ರಾಂಡ್ ಆಗಿದೆ ಅಲ್ಲದೇ ಈಗಾಗಲೇ ನಮ್ಮ ಉತ್ಪನ್ನಗಳೊಂದಿಗೆ ಲಕ್ಷಾಂತರ ಅಭಿಮಾನಿಗಳಿಗೆ ಆನಂದ ನೀಡುತ್ತಿದೆ” ಎಂದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮುಖ್ಯಸ್ಥರು ಮತ್ತು ಉಪಾಧ್ಯಕ್ಷರಾದ ಶ್ರೀ ರಾಜೇಶ್ ಮೆನನ್ ಅವರು ಈ ಸಂದರ್ಭದಲ್ಲಿ ಮಾತನಾಡಿ, “ಡಬ್ಲ್ಯುಪಿಎಲ್ನಲ್ಲಿ ಗುರಿಯಾಗಿಟ್ಟುಕೊಂಡಿರುವ ಮಾರುಕಟ್ಟೆಯಲ್ಲಿ ಪ್ರಬಲವಾದ ಹಾಜರಿ ಹೊಂದಿರುವ ವೆಗಾ ಬ್ರ್ಯಾಂಡ್ನೊ೦ದಿಗೆ ಸಂಬ೦ಧ ಹೊಂದಲು ನಮಗೆ ಸಂತೋಷವಾಗಿದೆ. ಇದನ್ನು ದೀರ್ಘಾವಧಿಯ ಪಾಲುದಾರಿಕೆಯಾಗಿ ನಿರ್ಮಿಸಲು ಮತ್ತು ದೃಢ ಪಡಿಸುವ ಭರವಸೆಯನ್ನು ನಾವು ಹೊಂದಿದ್ದೇವೆ” ಎಂದರು.
ಹೇರ್ ಸ್ಟೆçÃಟ್ನರ್ಗಳು, ಹೇರ್ ಡ್ರೈಯರ್ಗಳು, ಹೇರ್ ಕರ್ಲರ್ಗಳು, ಹೇರ್ ಸ್ಟೈಲರ್ಗಳು, ಫೇಸ್ ಕೇರ್, ಪುರುಷರ ಟ್ರಿಮ್ಮರ್ಗಳು, ಗ್ರೂಮರ್ಗಳು, ಹೇರ್ ಬ್ರಷ್ಗಳು, ಕೈಯಿಂದ ತಯಾರಿಸಿದ ಬಾಚಣಿಗೆಗಳು, ಸ್ನಾನದ ಪರಿಕರಗಳು, ಮೇಕಪ್ ಸೇರಿದಂತೆ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗಾಗಿ ವೆಗಾ ಸಾಟಿಯಿಲ್ಲದ ೬೦೦+ ಉತ್ಪನ್ನಗಳನ್ನು ಪೂರೈಸುತ್ತ್ತಿದೆ. ಬ್ರಶ್ಗಳು, ಸ್ಪಂಜುಗಳು ಇತ್ಯಾದಿ; ಪಫ್ಸ್, ಪೆಡಿಕ್ಯೂರ್(ಪಾದೋಪಚಾರ); ಮ್ಯಾನಿ ಕ್ಯೂರ್ (ಹಸ್ತಾಲಂಕಾರ) ಉಪಕರಣಗಳು ಇತ್ಯಾದಿಗಳು ಕೂಡ ಇವುಗಳಲ್ಲಿ ಸೇರಿವೆ. ಲಕ್ಷಾಂತರ ಜನರಿಗೆ ಅವರ ಅತ್ಯುತ್ತಮ ಶೈಲಿ ಪ್ರದರ್ಶಿಸುವುದಕ್ಕೆ ಸಹಾಯ ಮಾಡಲು ಬ್ರ್ಯಾಂಡ್ ಬದ್ಧತೆ ಹೊಂದಿದೆ. ಆದರೆ ಅವುಗಳನ್ನು ಬದಲಾಯಿಸುವುದಿಲ್ಲ ಬದಲಿಗೆ ಅವುಗಳನ್ನು ಸಬಲೀಕರಿಸುವ ಮೂಲಕ ಅವರ ಸ್ವಂತತೆಯನ್ನು ಅತ್ಯುತ್ತಮಗೊಳಿಸುತ್ತದೆ.