Saturday, 14th December 2024

XR ಓಪನ್ ಸೋರ್ಸ್ ಫೆಲೋಶಿಪ್ ಪ್ರೊಗ್ರಾಮ್‍ಗಾಗಿ $1 ಮಿಲಿಯನ್ ಬೆಂಬಲ

ಮೆಟಾ, ಭಾರತೀಯ ವಾಣಿಜ್ಯ, ಕೈಗಾರಿಕಾ ಮಹಾಮಂಡಳಿ

ಬೆಂಗಳೂರು: XR ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಭಾರತದ ಕೊಡುಗೆಯನ್ನು ವರ್ಧಿಸುವ ತನ್ನ ಬದ್ಧತೆಯ ನಿರ್ಮಾಣದಲ್ಲಿ ಮೆಟಾ, ಭಾರತೀಯ ವಾಣಿಜ್ಯ ಹಾಗೂ ಕೈಗಾರಿಕಾ ಮಹಾಮಂಡಳಿ(FICCI)ಗೆ, XR ಓಪನ್ ಸೋರ್ಸ್(XROS) ಫೆಲೋಶಿಪ್ ಪ್ರೊಗ್ರಾಮ್‍ಗಾಗಿ $1 ಮಿಲಿಯನ್ ಬೆಂಬಲ ಒದಗಿಸುತ್ತಿದೆ. FICCI ನಡೆಸಿಕೊಡುವ XROS, 100 ಭಾರತೀಯ ಡೆವಲಪರ್ ಳಿಗೆ ಸ್ಟೈಪಂಡ್ ಮತ್ತು ಮಾರ್ಗದರ್ಶನ ಒಳಗೊಂಡಂತೆ, ಫೆಲೋಶಿಪ್ ಒದಗಿಸುವ ಮೂಲಕ ವಿಸ್ತರಿತ ವಾಸ್ತವತೆ (XR)ತಂತ್ರಜ್ಞಾನಗಳ ಮೇಲೆ ಕಾರ್ಯನಿರ್ವಹಿಸಲು ಬೆಂಬಲ ಒದಗಿಸಲಿದೆ.

ಈ ಪ್ರೊಗ್ರಾಮ್, XR ತಂತ್ರಜ್ಞಾನಕ್ಕೆ ಸಂಬಂಧಿಸಿದ ಮುಕ್ತ ಮೂಲದ ಯೋಜನೆಗಳಿಗೆ ಕೊಡುಗೆ ಸಲ್ಲಿಸುವುದಕ್ಕೆ ಡೆವಲಪರ್ ಳಿಗೆ ಬೆಂಬಲ ನೀಡಿ ಕೈಗೆಟುಕುವಂತಹ, ಸೂಕ್ತವಾದ ಹಾಗು ಭಾರತೀಯ ಭಾಷೆಗಳಿಗೆ ಸ್ಥಳೀಕರಿಸಲಾದ ಭಾರತ ನಿರ್ದಿಷ್ಟ ಪರಿಹಾರ ಗಳಿಗೆ ಅಡಿಪಾಯ ಹಾಕಲಿದೆ.

ಪ್ರೊಗ್ರಾಮ್ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ, ಮೆಟಾದ ಜಾಗತಿಕ ವ್ಯವಹಾರಗಳ ವಿಭಾಗದ ಅಧ್ಯಕ್ಷ ನಿಕ್ ಕ್ಲೆಗ್, “ಮೆಟಾವರ್ಸ್ ಒಂದು ಸಂಸ್ಥೆಯಿಂದ ನಿರ್ಮಾಣಗೊಳ್ಳುವುದಿಲ್ಲ. XR ಓಪನ್ ಸೋರ್ಸ್‍ನಂತಹ ಪ್ರೊಗ್ರಾಮ್‍ಗಳ ಮೂಲಕ ಈ ಕೌತುಕಮಯವಾದ ತಂತ್ರಜ್ಞಾನಗಳ ಮೇಲೆ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಡೆವಲಪರ್ ಗಳಿಗೆ ನಾವು ಬೆಂಬಲ ಒದಗಿಸುತ್ತೇವೆ. ಮುಂದಿನ ಪೀಳಿಗೆಯನ್ನು ಖಾತರಿಪಡಿಸುವ ಆಶಯ ನಮ್ಮದು.”ಎಂದು ಹೇಳಿದರು.

ಕಾರ್ಯಕ್ರಮದ ಪರಿಚಯದ ಸಂದರ್ಭದಲ್ಲಿ ಹಾಜರಿದ್ದ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹಾಗಾರರಾದ ಪ್ರೊ.ಅಜಯ್‍ ಕುಮಾರ್ ಸೂದ್, “2ನೆ ಮತ್ತು 3ನೆ ದರ್ಜೆ ನಗರಗಳೂ ಒಳಗೊಂಡಂತೆ ಯುವ ಡೆವಲಪರ್ ಗಳು ಮತ್ತು ಸ್ಟಾರ್ಟ್‍ ಅಪ್‍ಗಳು ಮೆಟಾವರ್ಸ್‍ನಲ್ಲಿರುವ XR ನಂತಹ ಭವಿಷ್ಯತ್ತಿನ ತಂತ್ರಜ್ಞಾನಗಳಿಗೆ ನೆರವು ಒದಗಿಸಿದರೆ ಮಾತ್ರ ಭಾರತದ ತಂತ್ರ ಜ್ಞಾನ ದಶಕದ(ಟೆಕೇಡ್)ಕನಸು ನನಸಾಗುತ್ತದೆ. ಎಫ್‍ಐಸಿಸಿಐ ಮತ್ತು ಮೆಟಾ ಪ್ರಾರಂಭಿಸುತ್ತಿರುವುದು ನನಗೆ ಸಂತೋಷದ ವಿಷಯವಾಗಿದೆ”ಎಂದು ಹೇಳಿದರು.

ಪ್ರೊಗ್ರಾಮ್‍ನ ಸಹಭಾಗಿತ್ವದ ಬಗ್ಗೆ ಮಾತನಾಡುತ್ತಾ,NeGD ಆದ ಅಧ್ಯಕ್ಷ ಮತ್ತು ಸಿಇಒ ಅಭಿಷೇಕ್ ಸಿಂಗ್,“ಮುಕ್ತಮೂಲ ತಂತ್ರಜ್ಞಾನಚಾಲಿತ ಪರಿಸರವ್ಯವಸ್ಥೆಗಳು, ಪರಸ್ಪರ ಕಾರ್ಯಚರಣೀಯವಾದ ಮತ್ತು ಸಂಯೋಜಿತ ಆರ್ಕಿಟೆಕ್ಚರ್ ಅನುಸರಿ ಸುವ ಪ್ರಬಲವಾದ ಸಾರ್ವಜನಿಕ ವಸ್ತುಗಳ ನಿರ್ಮಾಣದಲ್ಲಿ ದೊಡ್ಡ ಪಾತ್ರ ವಹಿಸಬಲ್ಲದು. ಭಾರತೀಯ ಡೆವಲಪರ್ ಗಳು, ಅದರಲ್ಲೂ ವಿಶೇಷವಾಗಿ 2ನೆ ಮತ್ತು 3ನೆ ದರ್ಜೆ ನಗರಗಳಿಂದ ಬಂದ ಡೆವಲಪರ್ ಗಳು, ಭಾರತದ ಹಾಗು ವಿಶ್ವಕ್ಕಾಗಿ ವಿಕಸನ ಗೊಳ್ಳುತ್ತಿರುವ ತಂತ್ರಜ್ಞಾನ ಮತ್ತು ಮೆಟಾವರ್ಸ್‍ನ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾ, ದೇವಿ ನಾರಂಗ್, ಎಫ್‍ಐಸಿಸಿಐದ ಸಮಿತಿ ಸದಸ್ಯರು ಮತ್ತು ಸಿಂಡಿ ಕ್ಯಾಟಮ್ ರೆನ್ಯೂವಬಲ್ ಎನರ್ಜಿಯ ಕಂಟ್ರಿ ಹೆಡ್_ಭಾರತ, “XROS ಫೆಲೋಶಿಪ್ ಪ್ರೊಗ್ರಾಮ್, ವಿಸ್ತರಿತ ವಾಸ್ತವತೆ(XR) ತಂತ್ರಜ್ಞಾನಗಳಿಗೆ ಸಂಬಂಧಿಸಿದ ಓಪನ್ ಸೋರ್ಸ್ ಯೋಜನೆಗಳಿಗೆ ಮಹತ್ತರವಾದ ಕೊಡುಗೆ ಸಲ್ಲಿಸುವುದಕ್ಕಾಗಿ ಭಾರತೀಯ ಡೆವಲಪರ್ ಗಳಿಗೆ ಬೆಂಬಲ ಒದಗಿಸುವ ಗುರಿಯಿರಿಸಿಕೊಂಡಿರುವ ಉಪಕ್ರಮವಾಗಿದೆ. ಈ ಕಾರ್ಯಕ್ರಮಕ್ಕೆ ಬೆಂಬಲ ಒದಗಿಸು ತ್ತಿರುವುದಕ್ಕಾಗಿ ಮೆಟಾಗೆ ಮತ್ತು ಈ ಕಾರ್ಯಕ್ರಮದ ಭಾಗೀದಾರನಾಗಿರುವುದಕ್ಕಾಗಿ NeGD ಗೆ ನಾವು ಧನ್ಯವಾದ ಅರ್ಪಿಸುತ್ತೇವೆ.”ಎಂದರು.

ಆರಂಭದಿಂದಲೇ ಮೆಟಾ, ನೋ ಲಾಂಗ್ವೇಜ್ ಲೆಫ್ಟ್ ಬಿಹೈಂಡ್(NLLB), 25 ಭಾರತೀಯ ಭಾಷೆಗಳೂ ಒಳಗೊಂಡಂತೆ, 200 ಕಡಿಮೆ ಸಂಪನ್ಮೂಲ ಭಾಷೆಗಳಿಗೆ ಬೆಂಬಲ ಒದಗಿಸುವ ಒಂದೇ ಬಹುಭಾಷಾ ಎಐ ಮಾಡಲ್ ಒದಗಿಸುವಿಕೆ ಮುಂತಾದ ಹಲವಾರು ಉಪಕ್ರಮಗಳಿಗೆ ಬೆಂಬಲ ಒದಗಿಸಿ ಆರಂಭಿಸಿದೆ.

ಸಿಬಿಎಸ್‍ಇದೊಂದಿಗಿನ ಈ ಸಹಭಾಗಿತ್ವವು ಭಾರತಕ್ಕೆ ಮೆಟಾದ ಬದ್ಧತೆಯನ್ನು ಪುನರುಚ್ಚರಿಸುವುದಲ್ಲದೆ, ಭಾರತದಾದ್ಯಂತ ಇರುವ ವಿದ್ಯಾರ್ಥಿಗಳು ಗುಣಮಟ್ಟದ ಶೈಕ್ಷಣಿಕ ಕಂಟೆಂಟ್‍ಗೆ ಸಮಾನ ಪ್ರವೇಶಾವಕಾಶ ಪಡೆದುಕೊಂಡು ಡಿಜಿಟಲ್ ರೂಪದ ಶಕ್ತಿಪಡೆದುಕೊಂಡಿರುವ ಆರ್ಥಕತೆಯಲ್ಲಿ ಭವಿಷ್ಯತ್ತಿನ ಕೆಲಸಕ್ಕಾಗಿ ಸಿದ್ಧವಾಗಿರುವುದನ್ನು ಖಾತರಿ ಪಡಿಸುವಮೂಲಕ STEM ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವ ಜಂಟಿ ಮಹತ್ವಾಕಾಂಕ್ಷೆಯನ್ನೂ ಪ್ರತಿಬಿಂಬಿಸುತ್ತದೆ. ಜೂನ್ 2022ರಲ್ಲಿ ಮೆಟಾವರ್ಸ್‍ ನಲ್ಲಿ 40,000 ವಿದ್ಯಾರ್ಥಿಗಳಿಗೆ ತರಬೇತಿಒದಗಿಸಲು LeARn Program ಪ್ರಾರಂಭಿಸಿತ್ತು ಮತ್ತು ಮೆಟಾಸ್ಪಾರ್ಕ್‍ನಲ್ಲಿ ಆಧುನಿಕ ಸಾಮಥ್ರ್ಯಗಳ ಮೇಲೆ ಕಾರ್ಯನಿರ್ವಹಿಸಲು 1000 ಡೆವಲಪರ್‍ಗಳ ಕೌಶಲ್ಯವರ್ಧನೆ ಮಾಡುವಂತಹ ಸ್ಕೂಲ್ ಆಫ್ ಎಆರ್ ಎಂಬ ಪ್ರಮುಖ ಪ್ರೊಗ್ರಾಮ್ ಅನ್ನೂ ಪ್ರಾರಂಭಿಸಿತ್ತು.

ಮೆಟಾದ XR ಪ್ರೊಗ್ರಾಮ್‍ಗಳು ಮತ್ತು ಸಂಶೋಧನಾ ನಿಧಿಯು, ಕೈಗಾರಿಕಾ ಭಾಗೀದಾರರು, ನಾಗರಿಕ ಹಕ್ಕುಗಳ ಗುಂಪುಗಳು, ಸರ್ಕಾರಗಳು, ಲಾಬಕ್ಕಾಗಿಯಲ್ಲದ ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಪ್ರೊಗ್ರಾಮ್ ಮತ್ತು ಬಾಹ್ಯ ಸಂಶೋಧನಾ ಪ್ರೊಗ್ರಾಮ್‍ ಗಳಲ್ಲಿ ಮಾಡಿರುವ ಎರಡು ವರ್ಷಗಳ $50 ಮಿಲಿಯನ್ ಹೂಡಿಕೆಯಾಗಿದೆ (two-year $50 million investment).