Sunday, 24th November 2024

ಕೋಟ್ಯಂತರ ರೂಪಾಯಿ ವೆಚ್ಚದ ಕೃಷ್ಣ ಭಾಗ್ಯ‌ಜಲ‌‌ ನಿಗಮದ ಕಾಮಗಾರಿ ಲೂಟಿ

ಹೆಚ್ ಬಿ ಮುರಾರಿ ಸ್ಥಳಕ್ಕೆ ಬೇಟಿ ನೀಡಿ ಪ್ರತಿಭಟನೆಗೆ ಮುಂದು

ರಾಯಚೂರು : ನಾರಾಯಣಪುರ ಬಲದಂಡೆ ಮುಖ್ಯನಾಲೆ ಆಧುನಿಕರಣ ಸೇರಿ ಕೃಷ್ಣಭಾಗ್ಯ ಜಲ ನಿಗಮದ ನಾಲೆಯ ನಿರ್ವಹಣೆ ಕಾಮಗಾರಿಯ ಹೆಸರಲ್ಲಿ ಕೋಟ್ಯಾಂತರ ಹಣ ಲೂಟಿ ಆಗ್ತಾಯಿದೆ. ನಾರಾಯಣಪುರ ಮುಖ್ಯನಾಲೆಯ ಹನ್ನೊಂದನೇ ಕಿಲೋಮೀಟರ್ ಗೊರೆಬಾಳ ಹತ್ತಿರ ಬಾಕಿ ಉಳಿದ ಕೆಲಸವು ಸಂಪೂರ್ಣ ಕಳಪೆಯಾಗಿದೆ ಎಂದು ಕಾಮಗಾರಿ ಸ್ಥಳಕ್ಕೆ ಸ್ಥಳಿಯ ರೈತರು ಗ್ರಾಮ ಸ್ಥರು ಮತ್ತು ರೈತ ಸಂಹಗಟನೆ ಮುಖಂಡರು ಕಾಮಗಾರಿಯನ್ನು ಬಂದ್ ಮಾಡಿಸಲಾಗಿದೆ.

ಇಷ್ಟಾದರೂ ಸಹಿತ ಕಾಮಗಾರಿ ನಡೆದ ಸ್ಥಳಕ್ಕೆ ಸಂಬಂಧಪಟ್ಟ ಯಾವ ಅಧಿಕಾರಿಗಳು ಇಂಜಿನಿ ಯರ್ ಗಳು ಭೇಟಿ ನೀಡಿಲ್ಲ.. ಕಾಮಗಾರಿ ಸ್ಥಳದಲ್ಲಿ ಸರ್ಕಾರದ ನಿಯಮವನ್ನು ಗಾಳಿಗೆ ತೂರಿ ಮನಬಂದಂತೆ ತರಾತುರಿಯಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ.

ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಭ್ರಷ್ಟಾಚಾರದಲ್ಲಿ ಭಾಗಿಯಾದ ಅಭಿಯಂತರರುಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ ಮತ್ತು ಟೆಂಡರ್ ತೆಗೆದುಕೊಂಡ ಗುತ್ತೇದಾರರ ಮೇಲೆ ಕಾನೂನಿನ ಕ್ರಮ ಜರುಗಿಸಿ ಲೈಸೆನ್ಸ್ ಅನ್ನು ಕಪ್ಪು ಪಟ್ಟಿಗೆ ಸೇರಿಸ ಬೆಕೆಂದೂ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಹೆಚ್ ಬಿ ಮುರಾರಿ ಆಕ್ರೋಶ ಹೊರ ಹಾಕಿದ್ದಾರೆ.