Friday, 22nd November 2024

ಭಾರತ್ ಜೋಡೋ ಯಾತ್ರಾ: ವಿವಿಧ ಭಾಗಗಳಲ್ಲಿ ಪಾದಯಾತ್ರೆ

ವಿಜಯಪುರ : ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರಾ ಅಂಗವಾಗಿ ನಗರದಲ್ಲಿ ವಿವಿಧ ಭಾಗ ಗಳಲ್ಲಿ ಪಾದಯಾತ್ರೆ ನಡೆ ಯಿತು.

ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಜಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಗೋಲಗುಂಬಜ್ ಬಳಿಯ ಹಕೀಂ ಸರ್ಕಲ್ ನಲ್ಲಿ ಕಾಂಗ್ರೆಸ್ ಮುಖಂಡ ಹಮೀದ್ ಮುಶ್ರೀಫ್ ಚಾಲನೆ ನೀಡಿದರು.

ನಗರದ ಹಕೀಂ ಚೌಕಿನಿಂದ ಪ್ರಾರಂಭವಾಗಿ ಜಾಮಿಯಾ ಮಸೀದಿ, ಬಡಿಕ ಮಾನ, ಅತಾವುಲ್ಲಾ ಚೌಕ, ಬಾಗಲಕೋಟ ಕ್ರಾಸ್, ಕೇಂದ್ರ ಬಸ್ ನಿಲ್ದಾಣ, ಮಿನಾಕ್ಷೀ ಚೌಕ, ಬಬಲೇಶ್ವರ ನಾಕಾ, ಇಬ್ರಾಹಿಂರೋಜಾ, ಗೋದಾವರಿ ಸರ್ಕಲ್, ಶಿವಾಜಿ ಸರ್ಕಲ್, ಮುಖಾಂತರವಾಗಿ ಗಾಂಧಿ ವೃತ್ತದ ವರೆಗೆ ಭಾರತ್ ಜೊಡೋ ಪಾದಯಾತ್ರೆ ನಡೆಯಿತು.

ಗಾಂಧಿ ವೃತ್ತದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಹಮೀದ್ ಮುಶ್ರೀಫ್, ಬಿಜೆಪಿ ಸರ್ಕಾರ ಜನರ ಮನಸ್ಸಿನಲ್ಲಿ ಕೋಮುವಾದವನ್ನು ಬಿತ್ತುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಈ ಭಾರತ ಜೋಡೋ ಯಾತ್ರೆ, ಬಿಜೆಪಿ ಓಡಿಸುವ ಯಾತ್ರೆಯಾಗಬೇಕು ಎಂದು ಕಾರ್ಯಕರ್ತಗೆ ಕರೆ ನೀಡಿದರು.

ಪಾದಯಾತ್ರೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯ್ಕ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ವಿದ್ಯಾರಾಣಿ ತುಂಗಳ್, ಉಮಾ ಪಾಟೀಲ್ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು, ಮೂಂಚೂಣಿ ಘಟಕಗಳ ಜಿಲ್ಲಾ ಅಧ್ಯಕ್ಷರುಗಳು, ಬ್ಲಾಕ್ ಅಧ್ಯಕ್ಷರು ಗಳು, ಪದಾಧಿಕಾರಿಗಳು, ಮಾಜಿ ಮಹಾನಗರಪಾಲಿಕೆ ಸದಸ್ಯರುಗಳು, ಕಾರ್ಯಕರ್ತರು ಗಳು ಭಾಗಿ.

ಭಾರತ್ ಜೊಡೋ ಯಾತ್ರೆ (ಪಾದಯಾತ್ರೆಗೆ) ಡೊಳ್ಳಿನ ತಂಡದ ಸಾಥ್ ನೀಡಿದ್ದರು. ಈ ವೇಳೆ ಗಾಂಧಿವೃತ್ತದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿದರು.