Saturday, 14th December 2024

ಭವಾನಿ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಾಳೆೆಗೆ ಮುಂದೂಡಿಕೆ

ಬೆಂಗಳೂರು: ಲೈಂಗಿಕ ಕಿರುಕುಳ ಹಾಗೂ ಸಂತ್ರಸ್ತೆಯ ಅಪಹರಣ ಕೇಸ್​​​​ ಸಂಬಂಧ ಮಾಜಿ ಸಚಿವ ಹೆಚ್​​​​.ಡಿ.ರೇವಣ್ಣರ ಪತ್ನಿ ಭವಾನಿ ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್​ ಮೇ.29ರಂದು ಮುಂದೂಡಿ ಆದೇಶಿಸಿದೆ.

ಮೈಸೂರಿನ ಕೆ.ಆರ್​. ನಗರದ ಸಂತ್ರಸ್ತೆಯ ಕಿಡ್​​​ನ್ಯಾಪ್​​​ ​ಪ್ರಕರಣದಲ್ಲಿ ಭವಾನಿ ರೇವಣ್ಣ ಪ್ರೇರಣೆಯೂ ಇದೆ ಎಂಬ ಆರೋಪದಡಿ ಅವರಿಗೂ ಎಸ್​​ಐಟಿ ನೋಟಿಸ್​​ ನೀಡಿತ್ತು.

ಈ ಹಿನ್ನೆಲೆಯಲ್ಲಿ ಬಂಧನ ಭೀತಿಯಿಂದಾಗಿ ಭವಾನಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​​​ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ವಿಚಾರಣೆ ನಡೆಸಿ ಮುಂದಿನ ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು. ಇದೀಗ ಮತ್ತೆ ನಾಳೆಗೆ ಮುಂದೂಡಿ ಆದೇಶ ಹೊರಡಿಸಿದೆ. ಈಗಾಗಲೇ ಪ್ರಕರಣ ಸಂಬಂಧ ಹೆಚ್​​​​.ಡಿ.ರೇವಣ್ಣ ಅವರಿಗೆ ಜಾಮೀನು ಸಿಕ್ಕಿದೆ.