Friday, 22nd November 2024

Bheema Jewellers: ಚಿನ್ನ, ವಜ್ರ ಮತ್ತು ಬೆಳ್ಳಿಯ ಸಂಗ್ರಹಗಳ ಮೇಲೆ ವಾರ್ಷಿಕೋತ್ಸವದ ಅತ್ಯಾಕರ್ಷಕವಾದ ಕೊಡುಗೆಗಳನ್ನು ಘೋಷಿಸಿದ ಭೀಮ ಜ್ಯುವೆಲ್ಲರ್ಸ್

ಬೆಂಗಳೂರು: ಪ್ರತಿಷ್ಠಿತ ಜ್ಯುವೆಲ್ಲರಿಗಳಲ್ಲಿ ಒಂದಾಗಿರುವ ಭೀಮ ಜ್ಯುವೆಲ್ಲರ್ಸ್ ಡಿಕನ್ಸನ್ ರೋಡ್ ನಲ್ಲಿರುವ ತನ್ನ ಮೊದಲ ಮಳಿಗೆಯ 25ನೇ ವರ್ಷದ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದೆ. ಗ್ರಾಹಕರು 25 ವರ್ಷಗಳ ಕಾಲ ಸಂಸ್ಥೆಯ ಮೇಲೆ ಇಟ್ಟಿರುವ ನಂಬಿಕೆ, ಆಭರಣಗಳ ಗುಣಮಟ್ಟ ಮತ್ತು ಸಂಸ್ಥೆಯ ಬದ್ಧತೆಗೆ ಈ ಸಂಭ್ರಮಾಚರಣೆ ಸಾಕ್ಷಿಯಾಗಿದೆ. ಈ ಮಳಿಗೆಯನ್ನು ಬೆಂಗಳೂರಿನಲ್ಲಿ ಬ್ರಾಂಡ್ ನ ಮೊದಲ ಶೋರೂಮ್ ಆಗಿ 1999 ರಲ್ಲಿ ಆರಂಭಿಸಲಾಯಿತು.

ಅಂದಿನಿಂದ ಈ ಮಳಿಗೆಯು ಭೀಮ ಸಂಸ್ಥೆಯನ್ನು ನಂಬಿಕಸ್ಥ ಸಂಸ್ಥೆಯನ್ನಾಗಿ ಭಾವಿಸಲು ಮೂಲ ಕಾರಣವಾಯಿತು. ಭೀಮ ಸಂಸ್ಥೆಯ ಗೆಲುವಿಗೆ ಅಡಿಗಲ್ಲನ್ನು ಈ ಮಳಿಗೆ ಹಾಕಿತು. ಈ ಮಳಿಗೆಯು ಭೀಮ ಜ್ಯುವೆಲ್ಲರ್ಸ್ನ ಪರಂಪರೆಯ ಮೂಲಾಧಾರವಾಗಿದ್ದು. ಅಸಾಮಾನ್ಯ ಕರಕುಶಲತೆ ಮತ್ತು ವೈಯಕ್ತೀಕರಿಸಿದ ಆಭರಣ ಶಾಪಿಂಗ್ ಅನುಭವವನ್ನು ಬಯಸುವ ಗ್ರಾಹಕರಿಗೆ ಉತ್ತಮ ಸ್ಥಳವಾಗಿ ಮೂಡಿ ಬಂದಿದೆ.

ಈ ಮಹತ್ವದ ಸಂದರ್ಭವನ್ನು ಸಂಭ್ರಮಿಸಲು ಭೀಮ ನವೆಂಬರ್ 22 ರಿಂದ 24 ರವರೆಗೆ ವಾರ್ಷಿಕೋತ್ಸವದ ಆಚರಣೆಯಲ್ಲಿ ಪಾಲ್ಗೊಳ್ಳಲು ತನ್ನ ಗ್ರಾಹಕರನ್ನು ಆಹ್ವಾನಿಸುತ್ತದೆ. ಈ ಮೂರು ದಿನಗಳಲ್ಲಿ ಗ್ರಾಹಕರಿಗೆ ಭೀಮ ಸಂಸ್ಥೆಯು ವಿಶೇಷ ವಾರ್ಷಿಕೋತ್ಸವ ಕೊಡುಗೆಗಳನ್ನು ನೀಡುತ್ತಿದೆ. ಈ ಸಂದರ್ಭದಲ್ಲಿ ಗ್ರಾಹಕರು ಚಿನ್ನದ ಆಭರಣಗಳ ಮೇಲೆ ಪ್ರತಿ ಗ್ರಾಂಗೆ 500 ರೂ. ವರೆಗಿನ ರಿಯಾಯಿತಿಯನ್ನು ಪಡೆಯಬಹುದು. ವಜ್ರದ ಆಭರಣಗಳ ಮೇಲೆ ಪ್ರತಿ ಕ್ಯಾರೆಟ್ ಗೆ ರೂ. 7,000 ವರೆಗಿನ ಕ್ಯಾಶ್ ಬ್ಯಾಕ್ ಪಡೆಯಬಹುದು . ಅದರ ಜೊತೆಗೆ ರೂ. 1 ಲಕ್ಷ ಮೌಲ್ಯದ ವರೆಗೆ ಉಚಿತ ಗಿಫ್ಟ್ ಕಾರ್ಡ್ ಕೂಡ ಪಡೆಯಬಹುದು. ಬೆಳ್ಳಿ ಆಭರಣಗಳ ಮೇಲೆ ಪ್ರತಿ ಕಿಲೋಗ್ರಾಂಗೆ ರೂ. 5,000 ವರೆಗಿನ ರಿಯಾಯಿತಿ ಪಡೆಯಬಹುದಾಗಿದೆ. ಹೆಚ್ಚುವರಿಯಾಗಿ, ಈ ಅವಧಿಯಲ್ಲಿ ಶೋರೂಮ್ಗೆ ಭೇಟಿ ನೀಡುವ ಗ್ರಾಹಕರು ವಿಶೇಷ ಲಕ್ಕಿ ಡ್ರಾದಲ್ಲಿ ಭಾಗವಹಿಸುವ ಅವಕಾಶವನ್ನು ಕೂಡ ಹೊಂದಿರುತ್ತಾರೆ. ಅದೃಷ್ಟಶಾಲಿಗಳು ಪ್ರತಿ ದಿನ ಎರಡು ಏಪ್ರಿಲಿಯಾ ಸ್ಕೂಟರ್ಗಳನ್ನು ಗೆಲ್ಲುವ ಅಪೂರ್ವ ಅವಕಾಶ ಇದೆ. ಈ ಮೂಲಕ ಭೀಮ ತನ್ನ ಗ್ರಾಹಕರು ಸಂಸ್ಥೆಗೆ ತೋರಿರುವ ನಿರಂತರ ನಿಷ್ಠೆಗೆ ಕೃತಜ್ಞತೆಯನ್ನು ಸಲ್ಲಿಸುತ್ತದೆ.

ಮದುವೆ ಮತ್ತು ವಿವಾಹ ವಾರ್ಷಿಕೋತ್ಸವಗಳಿಂದ ಹಿಡಿದು ಇತರ ಶುಭ ಸಂದರ್ಭಗಳನ್ನು ಸ್ಮರಣೀಯ ವಾಗಿಸುವ ನಿಟ್ಟಿನಲ್ಲಿ ಈ ಮಳಿಗೆಯು ಕಾರ್ಯ ನಿರ್ವಹಿಸುತ್ತಿದ್ದು, ಬೆಂಗಳೂರು ಜನರ ಹೃದಯದಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಈ ಮಹತ್ವದ ಮೈಲಿಗಲ್ಲನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಭೀಮ ತನ್ನ ಈ ಹಿಂದಿನ ಪರಂಪರೆಗೆ ಗೌರವ ಸಲ್ಲಿಸುತ್ತಿರುವುದು ಮಾತ್ರವೇ ಅಲ್ಲದೆ, ಭರವಸೆಯಿಂದ ತುಂಬಿದ ಭವಿಷ್ಯದ ಕಡೆಗೆ ಎದುರು ನೋಡುತ್ತಿದೆ. ಹೊಸತನವನ್ನು ಅಳವಡಿಸಿಕೊಳ್ಳುತ್ತಲೇ ಸಂಪ್ರದಾಯವನ್ನು ಕೂಡ ಪಾಲಿಸುವ ಸಂಸ್ಥೆಯ ಬದ್ಧತೆಯನ್ನು ಇದರ ಇತಿಹಾಸ ಮತ್ತು ಪರಂಪರೆಯಿಂದ ತಿಳಿಯಬಹುದಾಗಿದೆ. ಭೀಮ ಸಂಸ್ಥೆಯ ಶ್ರೇಷ್ಠ ಗುಣಮಟ್ಟದ, ನಂಬಿಕಾರ್ಹ ಮತ್ತು ಗ್ರಾಹಕರಿಗೆ ನೆಮ್ಮದಿ ಒದಗಿಸುವ ಆಭರಣಗಳನ್ನು ನೀಡಲು ಬದ್ಧವಾಗಿದೆ, ಈ ಮೌಲ್ಯ ಅದರ ಪ್ರಯಾಣದ ಬಹುಮುಖ್ಯ ಅಂಶವಾಗಿದೆ.

ಬೆಳ್ಳಿ ಹಬ್ಬದ ಈ ಸಂಭ್ರಮಾಚರಣೆಯಲ್ಲಿ ನಮ್ಮೊಂದಿಗೆ ಭಾಗವಹಿಸಿ ಮತ್ತು ಡಿಕನ್ಸನ್ ರೋಡ್ ನಲ್ಲಿರುವ ಭೀಮ ಶೋರೂಮ್ ನಲ್ಲಿ ವಿಶೇಷ ಕೊಡುಗೆಗಳನ್ನು ಪಡೆದು ಆನಂದಿಸಿ.