ಕೊಲ್ಹಾರ: ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಶನಿವಾರ ಸಂವಿಧಾನ ಜಾಗೃತಿ ಜಾಥಾ ಜರುಗಿತು.
ಪಟ್ಟಣದ ದಿಗಂಬರೇಶ್ವರ ಮಠದಿಂದ ಪ್ರಾರಂಭವಾದ ಜಾಥಾ ಶಿವಾಜಿ ವೃತ್ತ, ಬಸವೇಶ್ವರ ವೃತ್ತ, ಮಹಾತ್ಮ ಗಾಂಧೀಜಿ ವೃತ್ತ, ಆಜಾದ ನಗರ, ಡಾ.ಅಂಬೇಡ್ಕರ್ ವೃತ್ತ, ಸಂಗಮೇಶ್ವರ ವೃತ್ತದ ಮೂಲಕ ಮರಳಿ ದಿಗಂಬರೇಶ್ವರ ಮಠಕ್ಕೆ ಆಗಮಿಸಿ ಸಮಾಪ್ತಿ ಗೊಂಡಿತು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಗೋವಿಂದ ವಾಲಿಕಾರ ಮಾತನಾಡಿ ಸಂವಿಧಾನ ಮಾನವೀಯ ಮೌಲ್ಯಗಳ ಮೂಲಕ ದೇಶದ ಪ್ರಜೆಗಳ ಬದುಕನ್ನು ರಕ್ಷಣೆ ಮಾಡುತ್ತಾ ಘನತೆಯ ಬದುಕನ್ನು ಕಟ್ಟಿಕೊಡುವ ಗ್ರಂಥವಾಗಿದೆ ಎಂದರು.
ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಅವಿರತವಾಗಿ ಶ್ರಮಿಸುವ ಮೂಲಕ ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ. ಸಾಂವಿಧಾನಿಕ ತತ್ವದಡಿ ನಾವುಗಳು ಸಾಗಿದಲ್ಲಿ ಬದುಕು ಉಜ್ವಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಗೋವಿಂದ ವಾಲಿಕಾರ, ಸಹ ಶಿಕ್ಷಕರಾದ ಸಂಜೀವ ದಿವಟಗಿ, ಸಂಗಮೇಶ ಬೀರುಣಗಿ, ಬಸವರಾಜ ಸಜ್ಜನ, ಮಲ್ಲಪ್ಪ ಸಜ್ಜನ, ಅನಂದ ಲಮಾಣಿ, ಶ್ರೀಮತಿ ಸಾವಿತ್ರಿ ಮೇತ್ರಿ, ಶ್ರೀಮತಿ ಪಿ.ಎಸ್ ಕೆರಿಗೊಂಡ, ಎಸ್.ಪಿ ಕಂಬಾರ, ಎಸ್.ಜಿ ಗಡಾದ, ಪಿ.ಬಿ ಕೂಡಗಿ, ಹಣಮಂತ ಪಾಟೀಲ, ಶ್ರೀಮಂತರಾಯ ಉಮರಜಿ, ಆರ್.ಎಂ ತಳವಾರ ಹಾಗೂ ಇನ್ನಿತರರು ಇದ್ದರು.