Thursday, 12th December 2024

ಜಾಬ್ ಕೊಡಿಸುವ ನೆಪದಲ್ಲಿ ಸೆಕ್ಸ್ ಗೆ ಡಿಮ್ಯಾಂಡ್: 3 ಬಿಜಾಪುರದ ಆರೋಪಿಗಳು ಅಂದರ್

ಹೆಣ್ಮಕ್ಕಳಿಗೆ ಟಾರ್ಚರ್
ನಕಲಿ ಕಂಪನಿ ಕೃತ್ಯ
‌ತುಮಕೂರು: ನಕಲಿ ಕಂಪನಿ ಹೆಸರಿನಲ್ಲಿ ನಿರುದ್ಯೋಗಿ ಯುವತಿಯರಿಗೆ ಕೆಲಸ ಕೊಡಿಸುವ ನೆಪದಲ್ಲಿ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದ ಗ್ಯಾಂಗ್ ಅಂದರ್ ಆಗಿದೆ.
ಫೇಸ್‌ಬುಕ್ ಮೂಲಕ  ಜಾಹೀರಾತು ನೀಡಿ ಜಾಬ್ ಆಮಿಷ ತೋರಿಸಿ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿ ವಿಡಿಯೋ ಮಾಡಿಕೊಂಡು ಹೆದರಿಸುತ್ತಿದ್ದ ಕಿಲಾಡಿಗಳನ್ನು ಗ್ರಾಮಾಂತರ ಪೊಲೀಸರು ಎಡೆಮುರಿ ಕಟ್ಟಿದ್ದಾರೆ.
ಏನಿದು ಘಟನೆ? :ಬಿಜಾಪುರ ಮೂಲದ  ಮಹದೇವ್, ರಾಯಪ್ಪ, ಸಂತೋಷ್ ಎಂಬ ಮೂವರು ವಂಚಕರು ತುಮಕೂರಿನ ಅಪಾಟ್೯ಮೆಂಟ್ ಒಂದರಲ್ಲಿ ಮೂರ್ನಾಲ್ಕು ಫ್ಲ್ಯಾಟ್ ಬಾಡಿಗೆ ಪಡೆದು ಸಿಎಲ್‌ವೈ ಎಂಬ ಕಂಪನಿ ಹೆಸರಲ್ಲಿ ಪೇಸ್ ಬುಕ್ ಮೂಲಕ ಜಾಹೀರಾತು ನೀಡಿ ಹತ್ತನೇ ತರಗತಿ ಮೇಲ್ಪಟ್ಟ ನಿರುದ್ಯೋಗಿ ಯುವತಿಯರಿಗೆ ಕೆಲಸ ಕೊಡಿಸಲಾಗುವುದು ಎಂಬ ಪೋಸ್ಟರ್ ಹರಿಬಿಟ್ಟಿದ್ದರು.
ವಂಚಕರು ಹಾಕಿದ್ದ ನಕಲಿ ಜಾಹೀರಾತನ್ನು ನೋಡಿ ಕೆಲಸ ಪಡೆಯುವ ಆಸೆಯಿಂದ ಶಿವಮೊಗ್ಗ, ಚಾಮರಾಜನಗರ, ಕೊಪ್ಪಳ, ಹುಬ್ಬಳ್ಳಿ, ದಾವಣಗೆರೆ ಸೇರಿ ಹಲವು ಜಿಲ್ಲೆಗಳ 30ಕ್ಕೂ ಹೆಚ್ಚು ಯುವಕ-ಯುವತಿಯರು ಸಂಪರ್ಕಿಸಿದ್ದಾರೆ. ಆರಂಭದಲ್ಲಿ ಇವರಿಂದ ನೋಂದಣಿಗೆಂದು 2,500 ರುಪಾಯಿ ಪಡೆದ ವಂಚಕರು, ಒಳ್ಳೆಯ ಕೆಲಸ, ನಿಮ್ಮೆ ಕೈ ತುಂಬಾ ಹಣ ಬರುತ್ತೆ, ಕಾರು, ಬಂಗಲೆ ಸಿಗುತ್ತೆ. ನಿಮಗೆ ಒಳ್ಳೆಯ ಕೆಲಸ ಕೊಡಿಸಬೇಕು ಅಂದ್ರೆ ನಮಗೆ ತಲಾ 40ರಿಂದ 50 ಸಾವಿರ ರುಪಾಯಿ ಕೊಡಬೇಕು ಎಂದು ಹಣ ವಸೂಲಿ ಮಾಡಿದ್ದಾರೆ.
ಎರಡು ಮೂರು ದಿನ ಟ್ರೈನಿಂಗ್ ನೆಪದಲ್ಲಿ ಕಳ್ಳಾಟವಾಡಿದ್ದಾರೆ. ಬಳಿಕ ಇದೊಂಥರಾ ಚೈನ್ ಲಿಂಕ್. ನೀವು ಎಷ್ಟು ಮಂದಿಯನ್ನ ನಮ್ಮ ಕಂಪನಿಗೆ ಸೇರಿಸುತ್ತಿರೋ ಅಷ್ಟೇ ಲಾಭ ಇದೆ. ನಿಮಗೆ ಕಮಿಷನ್ ಸಿಗುತ್ತೆ ಎಂದು ಬೈನ್ ವಾಷ್ ಮಾಡಿದ್ದಾರೆ.  ಅಲ್ಲದೆ, ಕೆಲಸ ಕೇಳಿಕೊಂಡು ಬಂದಿದ್ದ ಕೆಲ ಯುವತಿಯರಿಗೆ ಇಲ್ಲಸಲ್ಲದ ಆಸೆ ಹುಟ್ಟಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ತಾವು ಮೋಸ ಹೋಗಿರುವುದು ಗೊತ್ತಾಗಿ ನಮಗೆ ಕೆಲಸ ಬೇಡ, ನಮ್ಮ ಹಣ ಕೊಡಿ ಎಂದವರ ಮೇಲೆ ಪುಡಿರೌಡಿಗಳನ್ನ ಕರೆಸಿ ಹಲ್ಲೆ ಮಾಡಿಸಿದ್ದಾರೆ. ಹಣ ವಾಪಸ್ ಕೇಳಿದ್ರೆ ಹಾಗೂ ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ಕೊಲೆ ಮಾಡುತ್ತೀವಿ ಎಂದು ಜೀವ ಬೆದರಿಕೆ ಹಾಕಿದ್ದಾರೆ.
ಯುವತಿಯರಿಗೆ  ಖಾಸಗಿ ವಿಡಿಯೋ ಹಾಗೂ ಫೋಟೋಗಳನ್ನ ತೋರಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ವಂಚಕರ ಜಾಲಕ್ಕೆ ಸಿಲುಕಿ ನರಳಿದ ಹಲವರಲ್ಲಿ ಕೆಲವರು ಧೈರ್ಯ ಮಾಡಿ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
 ದೂರಿನನ್ವಯ ಪೊಲೀಸರು ಅಪಾ ಮೆಂಟ್ ಮೇಲೆ ದಾಳಿ ಮಾಡಿದ್ದು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೋಸದತಾಣವಾದ ಜಾಲತಾಣ: ಸಾಮಾಜಿಕ ಜಾಲತಾಣ ಹೆಚ್ಚಾಗಿ ಮೋಸದ ಕೃತ್ಯಗಳಿಗೆ ಬಳಕೆಯಾಗುತ್ತಿದೆ.  ಬಳಸುವಾಗ ಎಚ್ಚರಿಕೆಯಿರಬೇಕು. ಹೆಣ್ಣುಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಜಾಲತಾಣದಲ್ಲಿ ಅಧಿಕಗೊಳ್ಳುತ್ತಿದೆ. ಈ ಬಗ್ಗೆ ಜಾಗೃತಿವಹಿಸಬೇಕಾಗಿದೆ.