ಚಿಕ್ಕಬಳ್ಳಾಪುರ : ಯುದ್ದ ಬೇಡ ಬುದ್ದ ಬೇಕು, ನಮ್ಮ ನಡೆ ಬುದ್ದನ ಕಡೆ ಎಂಬ ಸಂದೇಶದೊ0ದಿಗೆ ಸೋಮವಾರ ನಗರದಲ್ಲಿ ಬೌದ್ದ ಧರ್ಮದ ಉಪಾಸಕರು ಮತ್ತು ಅಂಬೇಡ್ಕರ್ ಅನುಯಾಯಿಗಳು ಅಶೋಕ ವಿಜಯದಶಮಿ ಮತ್ತು 68 ನೇ ದಮ್ಮಚಕ್ರ ಪ್ರವರ್ತನ ದಿನಾಚರಣೆಯನ್ನು ಆಚರಿಸಿದರು.
ನಗರದ ಜೈ ಭೀಮ್ ಹಾಸ್ಟೆಲ್ ಬಳಿ ಇರುವ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಸೋಮವಾರ ಮನೆಯ ನಡುವೆಯೂ ಮಾಲಾರ್ಪಣೆ ಮಾಡಿ ೬೮ ನೇ ದಮ್ಮಚಕ್ರ ಪ್ರವರ್ತನ ದಿನದ ಅಂಗವಾಗಿ ಬೌದ್ಧ ವೃತ್ತದ ಬಳಿ ಸಂವಿಧಾನ ಪೀಠಿಕೆ ವಾಚಿಸಿ ಬುದ್ಧನ ಸಂದೇಶ ಸಾರಿದರು.
ಈವೇಳೆ ಮಾತನಾಡಿದ ಶಿಕ್ಷಕ ಶ್ರೀನಿವಾಸ್ ಡಾ. ಬಿ.ಆರ್.ಅಂಬೇಡ್ಕರ್ ದಮ್ಮದಿಕ್ಷೆಯನ್ನು ಪಡೆದು ಅಕ್ಟೋಬರ್ ೧೪ಕ್ಕೆ ೬೮ ವರ್ಷಗಳಾಗಿವೆ. ಇಷ್ಟು ವರ್ಷಗಳ ಸುದೀರ್ಘ ಇತಿಹಾಸವಿರುವ ದಮ್ಮ ದೀಕ್ಷೆ ಸ್ವೀಕಾರದ ಸಂದರ್ಭ ವನ್ನು ಜನತೆಗೆ ತಿಳಿಸುವ ಕೆಲಸವನ್ನು ನಾವು ಮಾಡಬೇಕಾಗಿದೆ.ಇದಕ್ಕಾಗಿಯೇ ಬೈಕ್ರ‍್ಯಾಲಿಯನ್ನು ಆಯೋಜಿಸ ಲಾಗಿದೆ ಎಂದರು.
ಸಮತಾ ಸೈನಿಕ ದಳದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ವೆಂಕಟರವಣಪ್ಪ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭೌದ್ದ ಧರ್ಮ ಸ್ವೀಕರಿಸಿದ ನೆನಪಿನ 68ನೇ ಸಂಭ್ರಮಚಾರಣೆಯನ್ನು ಮಾಡುತ್ತಿರುವುದು ಸಂತಸ ತಂದಿದೆ. ನಮ್ಮ ನಡೆ ಬುದ್ದನ ಕಡೆ ಯುದ್ದ ಬೇಡ ಬುದ್ದ ಬೇಕು ಎನ್ನುವುದು ಅಂಬೇಡ್ಕರ್ ಮತ್ತು ಬೌದ್ಧ ಅನುಯಾಯಿಗಳ ಆಶಯವಾಗಿದೆ.
ಶಾಂತಿ, ಸಹನೆ, ಕರುಣೆ, ಅಪರಿಗೃಹ, ಸೇರಿದಂತೆ ಬುದ್ಧರ ಪಂಚಶೀಲ ತತ್ವಗಳು ನಮ್ಮೆಲ್ಲರ ಉಸಿರಾಗಬೇಕಾಗಿದೆ. ಇಂದಿನ ಶುಭ ದಿನದಂದು ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರು ನಮಗೆ ನೀಡಿರುವಂತಹ ಪಂಚಶೀಲಗಳನ್ನು ಓದಿ ನಮ್ಮ ನಡೆ ಬುದ್ದನ ಕಡೆ ಯುದ್ದ ಬೇಡ ಬುದ್ದ ಬೇಕು ಎಂಬುವ ಸಂದೇಶವನ್ನು ಸಾರುವ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ.ಬಾಬಾ ಸಾಹೇಬರು ಬುದ್ಧರ ಆಶಯದಂತೆ ಪ್ರಪಂಚಾದ್ಯಂತ ಶಾಂತಿ ನೆಲೆಸಲಿ ಎಂದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನ್ನಸಂತಾರ್ಪಣೆಯನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಶ್ರೀನಿವಾಸ್ ಕೆ.ಜಿ, ವಕೀಲ ಮುನಿರಾಜು, ಉಸ್ಮಾನ್,ಕಾಂತರಾಜ್, ಬಾಲಕೃಷ್ಣ, ಜೀವಿಕ ಸಂಘಟನೆಯ ಶ್ರೀನಿವಾಸ್, ಮೂರ್ತಿ,ಎಸ್‌ಎಸ್‌ಡಿ ವೆಂಕಟರಮಣಪ್ಪ, ಮೂರ್ತಿ, ಶ್ರೇಯಸ್, ಅಂಜನ್ ರೆಡ್ಡಿ, ಬಾಲಕೃಷ್ಣ, ಗ್ರೀನ್ ಥಾಟ್ಸ್ ಫೌಂಡೇಶನ್, ಚಿಕ್ಕಬಳ್ಳಾಪುರದ ಕಲ್ಯಾಣ್, ನರೇಂದ್ರ, ರವೀಂದ್ರ, ಪ್ರಜ್ವಲ್,ಬೌದ್ಧ ಫೌಂಡೇಶನ್ ಮಂಚನಬಲೆ ಗಂಗರಾಜು, ಡ್ಯಾನ್ಸ್ ಶ್ರೀನಿವಾಸ್, ರಂಗಭೂಮಿ ಕಲಾವಿದರಾದ ವೇಣು, ಗಂಗಾಧರ್, ಜನಕಲಾ ರಂಗದ ವೆಂಕಟ್ ರಾಮ್, ಮುರಳಿ, ಭಾಗವಹಿಸಿದ್ದರು.
ಇದನ್ನೂ ಓದಿ: Bike Rally: ಹಿಂದಿ ಬಲವಂತ ಹೇರಿಕೆ ವಿರುದ್ಧ ಕಪ್ಪು ದಿನಾಚರಣೆ -ಕರವೇ ಹರೀಶ್