Saturday, 26th October 2024

ಪ್ರಧಾನಿ ವಿರುದ್ಧ ಬಿಲಾವಲ್ ಭುಟ್ಟೋ ಜರ್ಧಾರಿ ಹೇಳಿಕೆಗೆ ಬಿಜೆಪಿ ಖಂಡನೆ

ಚಿಕ್ಕಬಳ್ಳಾಪುರ : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ‘ಒಸಾಮಾ ಬಿನ್ ಲಾಡೆನ್ ಸತ್ತಿದ್ದಾನೆ, ಆದರೆ ಗುಜರಾಜ್‌ನ ಕಟುಕ ಇನ್ನೂ ಬದುಕಿದ್ದಾನೆ. ಮತ್ತು ಆತ ಭಾರತದ ಪ್ರಧಾನ ಮಂತ್ರಿ, ‘ಭಾರತ ಎರಡೂ ದೇಶಗಳಲ್ಲಿನ ಮುಸ್ಲೀ ಮರನ್ನು ಭಯೋತ್ಪಾದಕರೊಂದಿಗೆ ಸೇರಿಸಲು ಯತ್ನಿಸುತ್ತಿದೆ ಎಂದು ಹೇಳುವ ಮೂಲಕ ಕೀಳು ಮಟ್ಟದ ಪ್ರಚಾರ ಪಡೆಯಲು ಮುಂದಾಗಿರುವುದು ಅತ್ಯಂತ ಖಂಡನೀಯ ವಿಚಾರ ವಾಗಿದೆ ಎಂದು ರಾಷ್ಟ್ರೀಯ ಪರಿಷತ್ ಸದಸ್ಯ ಲಕ್ಷ್ಮೀನಾರಾಯಣಗುಪ್ತ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಶಿಡ್ಲಘಟ್ಟ ವೃತ್ತದಲ್ಲಿ ಶನಿವಾರ ಜಮಾಯಿಸಿದ ನೂರಾರು ಸಂಖ್ಯೆಯ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಬಿಲಾವಲ್ ಭೂಟ್ಟೋ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಯವರ ಬಗ್ಗೆ ತುಚ್ಚವಾಗಿ ಮಾತನಾಡಿರುವ ಬಿಲಾವಲ್ ಭೂಟ್ಟೋ ಅವರ ಹೇಳಿಕೆ ಭಾರತ ದೇಶಕ್ಕೆ ಮಾಡಿದ ಅಪಮಾನದಂತಿದೆ. ಇದನ್ನು ೧೩೦ ಕೋಟಿ ಭಾರತೀಯರು ಏಕ ಕಂಠದಿ೦ದ ಖಂಡಿಸುತ್ತಾರೆ.ಅವರು ತಮ್ಮ ಪಾಪಿ ಪಾಕಿಸ್ತಾನ ದೇಶದ ಬಗ್ಗೆ ಅಲ್ಲಿನ ಪ್ರಧಾನಿ ಸಚಿವರರ ಬಗ್ಗೆ ಏನು ಬೇಕಾದರೂ ಮಾತನಾಡುವ ಸ್ವಾತಂತ್ರö್ಯ ಅವರಿಗಿದೆ. ಆದರೆ ಭಾರತ ದೇಶ ಮತ್ತು ಪ್ರಧಾನಿಗಳ ಬಗ್ಗೆ ಮಾತನಾಡುವ  ನೈತಿಕತೆ ಆತನಿಗಲ್ಲ ಎಂದು ಕಿಡಿ ಕಾರಿದರು.

ಗುಜರಾಜ್ ಘಟನೆಗೂ ಪ್ರಧಾನಿ ನರೇಂದ್ರ ಮೋದಿಗೂ ಯಾವುದೇ ಸಂಬ೦ಧ ಇಲ್ಲ ಎಂಬುದನ್ನು ಈ ದೇಶದ ಸರ್ವೋಚ್ಛ ನ್ಯಾಯಾಲಯವೇ ತೀರ್ಪು ನೀಡಿದೆ. ಸತ್ಯ ಹೀಗಿದ್ದರೂ ಅನಗತ್ಯವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯನ್ನು ಕುಂದಿಸುವ ನಿಟ್ಟಿನಲ್ಲಿ ಭಯೋತ್ಪಾದಕನಿಗೆ ಪ್ರಧಾನಿಯವರನ್ನು ಹೋಲಿಸಿ ಮಾತನಾಡಿರುವುದು ಅವರ ಹೀನ ಸಂಸ್ಕೃತಿ ಯನ್ನು ತೋರಿಸುತ್ತದೆ. ಭುಟ್ಟೋ ಅವರು ಕ್ಷಮಾಪಣೆ ಕೇಳಬೇಕು ಇಲ್ಲದಿದ್ದರೆ ಭಾರತೀಯರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ರಾಜ್ಯ ಪರಿಷತ್ ಸದಸ್ಯ ಬೈರೇಗೌಡ ಮಾತನಾಡಿ ಭಾರತದ ಪ್ರಧಾನಿ ಬಗ್ಗೆ ಪಾಕಿಸ್ತಾನ ವಿದೇಶಾಂಗ ಸಚಿವರ ಪುತ್ರ ನೀಡಿರುವ ಹೇಳಿಕೆಯನ್ನು ಭಾಜಪ ಖಂಡಿಸುತ್ತದೆ.ಇವರ ಹೇಳೀಕೆಯು ಪಾಕಿಸ್ತಾನದ ಹತಾಶೆಯನ್ನು ತೋರಿಸುತ್ತಿದೆ.ಭಾರತ ಎಂದೆAದಿಗೂ ಶಾಂತಿಯ ತೋಟ ಎಂಬುದು ಪಾಪ ಆ ಕುನ್ನಿಗೆ ಇನ್ನೂ ಅರಿವಾಗಿಲ್ಲ.ಮೊದಲು ಭಾರತದ ಚರಿತ್ರೆಯನ್ನು ಅರಿಯವ ಕೆಲಸ ಮಾಡಲಿ ಎಂದು ತಿರುಗೇಟು ನೀಡಿದರು.

ಬಿಜೆಪಿ ಮುಖಂಡ ಎಸ್‌ಆರ್‌ಎಸ್ ದೇವರಾಜ್ ಮಾತನಾಡಿ ಬಿಲಾವಲ್ ಭುಟ್ಟೋ ಅಂತಹ ನೂರು ಮಂದಿ ಪಾಕಿಸ್ತಾನಿ ನಾಯಿ ಗಳು ನಮ್ಮ ಹೆಮ್ಮೆಯ ಪ್ರಧಾನಿ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದರೆ ಏನೂ ಆಗುವುದಿಲ್ಲ. ವಿಶ್ವಗುರುವಾಗುವ ಅರ್ಹತೆ ನಮ್ಮ ಪ್ರಧಾನಿಗೆ ಇದೆ. ಅವರ ಕಾಲಧೂಳಿಗೂ ಸಮನಲ್ಲದ ಪಾಕಿಸ್ತಾನ ವಿದೇಶಾಂಗ ಸಚಿವನ ಮಗ ತನ್ನ ಇತಿಮಿತಿಯನ್ನು ಅರಿತು ಮಾತನಾಡುವುದು ಕಲಿಯಬೇಕು. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಮೂಲಕ ವಿಶ್ವಮಟ್ಟದಲ್ಲಿ ಟೀಕೆಗೆ ಗುರಿಯಾಗಿ ರುವ ಪಾಕಿಸ್ತಾನ ದಿವಾಳಿಯಾಗುವ ಹಂತದಲ್ಲಿದೆ.

ಈ ಬಗ್ಗೆ ಯೋಚಿಸುವುದನ್ನು ಮರೆತು ಬಿಟ್ಟಿ ಪ್ರಚಾರ ಪಡೆಯಲು ಪ್ರಧಾನಿಗಳ ವಿರುದ್ದ ವೈಯಕ್ತಿಕ ದಾಳಿ ನಡೆಸಿರುವುದು ನಾಚಿಕೆಗೇಡಿನ ಕೆಲಸ. ಇದನ್ನು ನಾನು ಖಂಡಿಸುತ್ತೇನೆ.ಆರ್ಥಿಕವಾಗಿ ದಿವಾಳಿ ಆಗಿರುವ ಪಾಕ್‌ನಿಂದ ಇಂತಹ ಹೇಳಿಕೆಯನ್ನಲ್ಲದೆ ಬೇರೇನೂ ನಿರೀಕ್ಷಿಸಲು ಸಾಧ್ಯವಿಲ್ಲ. ಇದನ್ನು ಇಲ್ಲಿಗೇ ನಿಲ್ಲಿಸಿದರೆ ಕ್ಷೇಮ ಇಲ್ಲದಿದ್ದರೆ ಘೋರಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿ ಎಚ್ಚರಿಕೆ ನೀಡಿದರು.

ನಗರಾಧ್ಯಕ್ಷ ಆನಂದ್ ಅನು,, ಕಾರ್ಯಲಯ ಕಾರ್ಯದರ್ಶೀ ಲಕ್ಷ್ಮೀಪತಿ, ಕಾರ್ಯದರ್ಶಿ ಅಶೋಕ್,ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ,ಸುಮಿತ್ರ, ಸೌಮ್ಯ, ಮಾಧ್ಯಮ ಸಂಚಾಲಕ ಮಧುಚಂದ್ರ, ಸಹವಕ್ತಾರ ರಾಮಣ್ಣ, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ , ನರೇಂದ್ರಬಾಬು, ಕಾರ್ಯಕರ್ತರು ಇದ್ದರು.

Read E-Paper click here