Saturday, 12th October 2024

ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಲಕ್ಷ ಬಿಲ್ವಾರ್ಚನೆ

ತುಮಕೂರು: ಸಿದ್ದಗಂಗಾ ಮಠ ಹಿರಿಯ ಶ್ರೀಗಳಾದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ 3ನೇ ವರ್ಷದ ಲಕ್ಷ ಬಿಲ್ವಾರ್ಚನಾ  ಕಾರ್ಯಕ್ರಮವನ್ನು ವೀರಶೈವ, ಲಿಂಗಾಯಿತ ಮಹಾ ವೇದಿಕೆವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ನಡೆದಾಡುವ ದೇವರು,ಅಧುನಿಕ ಬಸವಣ್ಣ ಎಂದು ಭಕ್ತರಿಂದ ಕರೆಯಿಸಿಕೊಳ್ಳುತ್ತಿದ್ದದ ಸಿದ್ಗಗಂಗಾ ಮಠದ ಹಿರಿಯ ಶ್ರೀಗಳಾದ ಲಿಂಗೈಕ್ಯ ಡಾ.ಶ್ರೀಶಿವಕುಮಾರಸ್ವಾಮೀಜಿಗಳು ಲಿಂಗೈಕ್ಯರಾಗಿ ಮೂರು ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಪ್ರತಿವರ್ಷ ದಂತೆ ಈ ವರ್ಷವೂ ವೀರಶೈವ,ಲಿಂಗಾಯಿತ ಮಹಾ ವೇದಿಕೆ ಶ್ರೀಗಳ ಗದ್ದುಗೆಗೆ 3ನೇ ವರ್ಷದ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮ ವನ್ನು ವೇದಿಕೆಯ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ನೂರಾರು ಹರಗುರುಚರಮೂರ್ತಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ,ಮಾಜಿ ಶಾಸಕ ಡಾ.ರಫೀಕ್ ಅಹಮದ್,ಮಾಜಿ ಮಂತ್ರಿ ಡಾ.ವಿನಯಕುಲಕರ್ಣಿ,ಕರುನಾಡ ವಿಜಯಸೇನೆಯ ರಾಜ್ಯಾಧ್ಯಕ್ಷ ಹೆಚ್.ಎನ್.ದೀಪಕ್ ಅವರುಗಳು ಪಾಲ್ಗೊಂಡು ಶ್ರೀಗಳ ಗದ್ದುಗೆಗೆ ಬಿಲ್ವಾರ್ಚನೆ ನೆರವೇರಿಸಿದರು.
ಲಕ್ಷ ಬಿಲ್ವಾರ್ಚನೆಯ ಕಾರ್ಯಕ್ರಮದ ಅಂಗವಾಗಿ ಶ್ರೀಗಳ ಕಂಚಿನ ಪುತ್ಥಳಿಯನ್ನು ಸರ್ವಾಲಂಕೃತ ರಥದಲ್ಲಿರಿಸಿ,ವೀರಗಾಸೆ, ಪಟ ಕುಣಿತ, ಮಂಗಳವಾದ್ಯ ಸೇರಿದಂತೆ 16ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳ ಪ್ರದರ್ಶನದ ಮೂಲಕ ಅದ್ದೂರಿ ಮೆರವಣಿಗೆ ಮತ್ತು ಉತ್ಸವ ನಡೆಸಲಾಯಿತು.ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು, ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಭಕ್ತಿ ಭಾವ ಮೆರೆದರು.