Friday, 8th November 2024

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಈಶ್ವರರಿಂದ ಆರ್ಥಿಕ ಸಹಾಯ

ಮಾನವಿ: ಅನಾರೋಗ್ಯದಿಂದ ಸಂಕಷ್ಟದಲ್ಲಿ ಸಿಲುಕಿದ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಈಶ್ವರ.

ಲಿಂಗಸಗೂರು ಪಟ್ಟಣದ ಗಡಿಯಾರ ಚೌಕ್ ಹತ್ತಿರ ಎರಡು ಬಡ ಕುಟುಂಬ ಗಳಿಗೆ ಅನಾರೋಗ್ಯದಿಂದ ಸಾಕಷ್ಟು ತೊಂದರೆ ಅಗಿದೆ…ಇಂತಹ ಪರಿಸ್ಥಿತಿಯನ್ನು ಮನಗಂಡ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಈಶ್ವರ ಎಂ ವಜ್ಜಲ್ ಅವರ ಮನೆಗೆ ಭೇಟಿ ನೀಡಿ ಆತ್ಮಸ್ತೈರ್ಯ ನೀಡಿ ಕೈಲಾಗುವಷ್ಟು ಆರ್ಥಿಕ ಸಹಾಯಕ್ಕೆ ಮುಂದಾಗಿದ್ದಾರೆ‌‌.

ಸ್ವತಃ ಅವರೆ ಮನೆಗಳಿಗೆ ಭೇಟಿ ನೀಡಿ..ಸಹಾಯದ ಮಾನವೀಯತೆ ಮೆರೆದಿ ದ್ದಾರೆ. ಅವರ ಈ ಸಹಾಯವನ್ನು ಕಂಡು ಕುಟುಂಬದ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.