Friday, 25th October 2024

ಸಂತೆಯಲ್ಲಿ ಮಾರಾಟಕ್ಕೆ ನಿಂತ ಬಿಜೆಪಿಗರು!

ಜಾತ್ರೆ, ಸಾಮಾಜಿಕ ಕಾರ್ಯಗಳಲ್ಲಿ ದುಡ್ಡು ಕೊಟ್ಟು ಪ್ರಚಾರ

ಚಿತ್ತಾಪುರ: ಸಂತೆಯಲ್ಲಿ ಮಾರಾಟ ಮಾಡಲು ಬಂದು ಜಾತ್ರೆ ಮತ್ತು ಇನ್ನಿತರ ಸಾಮಾಜಿಕ ಕಾರ್ಯಕ್ರಮಗಳಲ್ಲಿ ದುಡ್ಡು ಕೊಟ್ಟು ಪ್ರಚಾರ ಪಡೆದುಕೊಂಡು ಕಳೆದ ಒಂದು 15  ದಿನಗಳಿಂದ ಬಿಜೆಪಿಯ ಕೆಲ ಮುಖಂಡರು ಆರೋಪ ಮತ್ತು ಟೀಕೆ ಹಾಗೂ ಸತ್ಯಕ್ಕೆ ದೂರವಾದ ವಿಷಯಗಳನ್ನು ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡುವ ಮೂಲಕ ಪ್ರಚಾರ ಪಡೆದು ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೇ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಜಿಪಂ ಸದಸ್ಯ ಶಿವಾನಂದ ಪಾಟೀಲ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿ ಅವರು, ಕೆಲ ಬಿಜೆಪಿ ನಾಯಕರು ಮತ್ತು ಇನ್ನೂ ಕೆಲ ಸಮಾಜ ಸೇವೆಕರು ಎಂದು ಹೇಳಿಕೊಂಡು, ಪತ್ರಿಕಾ ಗೋಷ್ಠಿಯಲ್ಲಿ ಮತ್ತು  ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಒಂದು ವಿಷಯವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ.

ಕಳೆದ 8 ವರ್ಷದಲ್ಲಿ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆಯವರು ಚಿತ್ತಾಪುರ ಪಟ್ಟಣ ಸೇರಿ ದಂತೆ ಇಡೀ ತಾಲೂಕಿಗೆ ಕೋಟ್ಯಾಂತರ ರೂಪಾಯಿ ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ.

ಸದ್ಯ ಬಿಜೆಪಿ ಪಕ್ಷದಲ್ಲಿ ಎರಡು ಮೂರು ಬಣಗಳಾಗಿವೆ. ಕೆಲವರು ಸಮಾಜ ಸೇವಕರು ಎಂದು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಕೇಲವರು ಸ್ಥಳೀಯರಿಗೆ ಟಿಕೇಟ್ ನೀಡಿ ಎಂದು ಸುದ್ದಿಗೊಷ್ಠಿ ನಡೆಸುತ್ತಾರೆ. ಇನ್ನೂ ಕೆಲವರು ಜಾತ್ರೆ ಸೇರಿದಂತೆ ವಿವಿಧೆಡೆ ಭೇಟಿ ನೀಡಿ ಪತ್ರಿಕೆಗಳಲ್ಲಿ ಪ್ರಚಾರ ಪಡೆಯುವ ಕೆಲಸ ಮಾಡುತ್ತಿದ್ದಾರೆ. ಆದರೆ, ಬಿಜೆಪಿಯಲ್ಲಿ ಚಿತ್ತಾಪುರ ಮತಕ್ಷೇತ್ರದಿಂದ ಸ್ಪರ್ಧೆ ಮಾಡಲು ಸಮರ್ಥವಾದ ಮೆರೆಟ್  ಅಭ್ಯರ್ಥಿ ಇಲ್ಲ ಅದಕ್ಕೆ  ಪೇಮೆಂಟ್ ಅಭ್ಯರ್ಥಿಗಳು ಸಾಕಷ್ಟು ಪೈಪೋಟಿ ಮಾಡುತ್ತಿದ್ದಾರೆ. ವಿವಿಧ ಊರುಗಳಿಗೆ ಹೋಗಿ ಜಾತ್ರೆ ನಾಟಕಗಳಲ್ಲಿ ದುಡ್ಡು ಕೊಟ್ಟು ವೇದಿಕೆ ಮೇಲೆ ಅಥಿತಿ ಆಗುವುದು, ಅಲ್ಪ ಮಟ್ಟದ ಸಹಾಯ ಮಾಡಿ ನಾವು ಸಮಾಜ ಸೇವೆ ಮಾಡುತ್ತಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೋರಿಸಿಕೋಂಡು, ಕ್ಷೇತ್ರದ ಶಾಸಕರ ಮೇಲೆ ಆರೋಪ ಮಾಡುವುದು ಯಾರು ಎಷ್ಟೊಂದು ಸಮಾಜ ಸೇವೆ ಮಾಡಿದರಾ, ಯಾರು ಎಷ್ಡೋಂದು ಅಭಿವೃದ್ಧಿ ಮಾಡಿ ದ್ದಾರೆ ಎಂದು ಜನರಿಗೆ ಗೊತ್ತಿದ್ದೆ. ಅದಕ್ಕೆ ಯಾರಿಗೂ ಮೇರಟ್ ಅಧಾರದ ಮೇಲೆ ಟೀಕೆಟ್ ಸಿಗುವುದಿಲ್ಲ‌ ಅದಕ್ಕೆ ಅವರು ಪೇಮೆಂಟ್ ಸಿಟಿಗೆ ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಿದರು.

ಪಟ್ಟಣದಲ್ಲಿ ಡೈಯಾಲಸ್ಸ್  ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯ ಹೊಂದಿರುವ  ಜಿಲ್ಲೆಗೆ ಮಾದರಿ ಆಗುವ ಸರ್ಕಾರಿ ಸಾರ್ವಜನಿಕ  ಆಸ್ಪತ್ರೆ ಚಿತ್ತಾಪುರ ಪಟ್ಟಣದಲ್ಲಿದೆ. ಕಳೆದ ೮ ವರ್ಷದಿಂದ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೇ ಅವರು ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಒತ್ತು ನೀಡಿದ್ದಾರೆ. ಚಿತ್ತಾಪುರ ಪಟ್ಟಣದಲ್ಲಿ ಕೆಲವರಿಗೆ ಆನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ಸೇರಿದು ನಿಜ ಆದರೆ ಕೆಲವರು ಸುಳ್ಳು ಅಂಕಿ ಸಂಖ್ಯೆಯನ್ನು ನೀಡಿ,ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ‌.ಅದಕ್ಕೆ ಜನರು ಯಾವುದಕ್ಕೂ ಗಮನ ನೀಡಬಾರದು ಎಂದ ಹೇಳಿದರು.

ಕಲ್ಯಾಣ ಕರ್ನಾಟಕಕ್ಕೆ ಜಿಲ್ಲೆಗಗಳಿಗೆ ಬಿಜೆಪಿಯ ಕೊಡುಗೆ ಜಿರೋ. ಇದನ್ನು ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ರು ತಿಳಿದುಕೊಂಡು ಮಾತನಾಡಲಿ, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಕೇವಲ ಕಾಂಗ್ರೆಸ್ ಆಡಳಿತ ಸರ್ಕಾರದಲ್ಲಿ ಮಾತ್ರ ಆಗಿದೆ. ಎಂದು ಹೇಳಿದರು.ತಮ್ಮ ಅಭಿವೃದ್ಧಿ ಕಾರ್ಯಗಳಿಂದ ಇಡೀ ರಾಜ್ಯದಲ್ಲಿ ಖರ್ಗೇ ಕುಟುಂಬ ಹೆಸರುವಾಸಿಯಾಗಿದೆ ಎಂದು ಹೇಳಿದರು.

ಶಾಸಕ ಪ್ರಿಯಾಂಕ್ ಖರ್ಗೇ ಅವರು ರಾಜ್ಯ ಸರ್ಕಾದ ಹಲವು ದೊಡ್ಡ ಹಗರಣಗಳು ಹೊರ ಹಾಕಿದ್ದು, ಅದಕ್ಕೆ ಇಡೀ ಸರ್ಕಾರವೇ ಖರ್ಗೇ ಕುಟುಂಬದ ಹಿಂದೆ ಬಿದ್ದಿದೆ.  ಅವರಿಗೆ ಹೇಗೆ ಸೋಲಿಸಬೇಕೆಂದು ಪ್ಲಾನ್ ಮಾಡುತ್ತಿದ್ದಾರೆ ಅದರೇ ಇಡೀ ರಾಜ್ಯ ಜನ ಮತ್ತು ಮತಕ್ಷೇತ್ರದ ಅರ್ಶಿವಾದ ಅವರ ಜೊತೆ ಇರುವರೆಗೆ ಅವರಿಗೆ ಯಾರು ಸೋಲಿಸಲು ಆಗುವುದಿಲ್ಲ ಎಂದು ಗುಡುಗಿದರು.

ಡಾ. ಮಲ್ಲಿಕಾರ್ಜುನ ಖರ್ಗೇ ಅವರು ಸೋಲಿನಿಂದಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ಇದು ಕಲಬುರಗಿ ಜನರಿಗೆ ಸಹ ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ಮುಕ್ತ ಬಿಜೆಪಿ ಆಗಲಿದೆ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿ ದರು.

ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಮಾತನಾಡಿ, ಕಲುಷಿತ ನೀರಿನಿಂದ ಕೆಲವರು ಮಾತ್ರ ಅನಾರೋಗ್ಯಕ್ಕೆ ಒಳಗಿದ್ದಾರೆ.ಅದಕ್ಕೆ ಕೆಲವರು ತಪ್ಪು ಮಾಹಿತಿ, ಮತ್ತು ಸುಳ್ಳು ಆರೋಪ ಮಾಡಿ ರಾಜಕೀಯ ಮಾಡುತ್ತಿದ್ದಾರೆ. ಅನಧಿಕೃತವಾಗಿ ನಳದ ಸಂಪರ್ಕ ಪಡೆದ ಕೆಲಕಡೆ ನೀರಿನ ಪೈಪ್ ನ ಜೊತೆಗೆ ಚರಂಡಿ ನೀರು ಮಿಶ್ರಣ ಗೊ‌ಂಡು  ಕಲಾರ್ ರೋಗ ಬಂದಿದ್ದೆ. ಅದಕ್ಕೆ ಸುಳ್ಳು ಅಂಕಿ ಸಂಖ್ಯೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಮತ್ತು ಪತ್ರಿಕೆಗಳಲ್ಲಿ ಪ್ರಚಾರ ಪಡೆಯಲು ಕೆಲವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಕೆಲವರಿಗೆ ಅವರ ಪಕ್ಷದಲ್ಲಿ ಅವರಿಗೆ ನೆಲೆ ಇಲ್ಲ. ಅವರು ಸಂತೆ ಮಾಡಿಕೊಳ್ಳಲು ಚಿತ್ತಾಪುರಕ್ಕೆ ಬಂದಿದ್ದಾರೆ. ಇಲ್ಲಿ ಸಂತೆ ಮುಗಿದ ನಂತರ ಮತ್ತೊಂದು ಕಡೆ ಹೋಗುತ್ತಾರೆ ನಾವು  ಪಟ್ಟಣದ ಜನರ ಆರೋಗ್ಯದ ಹಿತ ದೃಷ್ಟಿಯಿಂದ ಎಲ್ಲಾ ರೀತಿಯಲ್ಲಿ ಕ್ರಮವನ್ನು ಕೈಗೊಂಡಿದ್ದೇವೆ ಯಾರು ಅಂತಕ ಪಡೆಯುವ ಅಗತ್ಯವಿಲ್ಲ ಎಂದು ಹೇಳಿದರು.

ಸುದ್ದಿಗೊಷ್ಠಿಯಲ್ಲಿ ಮಾಜಿ ಜಿಪಂ ಸದಸ್ಯ ಶಿವರುದ್ರಭೀಣಿ, ಮುಂಖರಾದ ಮುಕ್ತಾರ ಪಟೇಲ್, ವಿನೊಧ ಗುತ್ತೇದಾರ, ಶ್ರೀನಿವಾಸ ರೆಡ್ಡಿ ಪಾಲಪ್,ರಸೂಲ್ ಮುಸ್ತಾಫ್ ,ಜಗದೇವ ಪೋಲಿಸ್ ಪಾಟೀಲ,ಶಿವರಾಜ ಪಾಳೆದ, ಬಸಬರಾಜ ಚಿನ್ನಮಳ್ಳಿ ಸೇರಿದಂತೆ ಇತರರು ಉಪಸ್ಥಿತಿದರು.