Sunday, 15th December 2024

ಬಿಜೆಪಿ ಬೂತ್ ವಿಜಯ್ ಅಭಿಯಾನಕ್ಕೆ ಚಾಲನೆ

ತುಮಕೂರು: ಮುಂದಿನ  ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ತುಮಕೂರು ಜಿಲ್ಲಾ ಉಸ್ತುವಾರಿ ಹಾಗು ವಿಧಾನಪರಿಷತ್ ಸದಸ್ಯ ನವೀನ್ ಅವರ ನೇತೃತ್ವ ದಲ್ಲಿ ಜ.೨ ರಿಂದ ೧೨ ರವರೆಗೆ ಬೂತ್ ವಿಜಯ ಅಭಿಯಾನ  ಆರಂಭಿಸ ಲಾಯಿತು.
ಸಿದ್ಧರಾಮೇಶ್ವರ ಬಡಾವಣೆ ಪಶ್ಚಿಮ ೩ನೇ ಕ್ರಾಸ್ ನಲ್ಲಿರುವ ೨೨೪ನೇ ಬೂತ್ ಅಧ್ಯಕ್ಷ ಜಗದೀಶ್,  ಮನೆಯಿಂದ ಬೂತ್ ವಿಜಯ ಅಭಿಯಾನವನ್ನು ಅರಂಭಿಸಲಾಯಿತು.ಬೂತ್ ಕಮಿಟಿಯ ಸದಸ್ಯರು ಗಳ ಪರಿಶೀಲನೆ, ಅವರನ್ನು ಚುರುಕುಗೊಳಿಸುವ ನಿಟ್ಟಿ ನಲ್ಲಿ ಕಾರ್ಯಕ್ರಮ ನಡೆಯಿತು.
ಈ ವೇಳೆ  ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ಮಾತನಾಡಿ, ಜನವರಿ ೦೨ ರಿಂದ ೧೨ ವರೆಗೆ ಹತ್ತು ದಿನಗಳ ಕಾಲ ನಡೆಯುವ ಈ ಆಭಿಯಾನದಲ್ಲಿ ೫ ಪ್ರಮುಖ ಕಾರ್ಯಕ್ರಮ ಗಳನ್ಬು ಹಾಕಿಕೊಂಡಿದೆ.  ಈ ಆಭಿಯಾನ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಲ್ಲಿಯೂ ನಡೆಯಲಿದೆ ಎಂದರು
ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ಮುಂಬರುವ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇದು ಮಹತ್ವದ ಕಾರ್ಯಕ್ರಮವಾಗಿದ್ದು, ಬಿಜೆಪಿ ಕಾರ್ಯಕರ್ತರು ಇದನ್ನು ಗಂಭೀರ ವಾಗಿ ಪರಿಗಣಿಸಬೇಕು. ಪ್ರತಿ ಮನೆಮನೆಗೆ ದೇಶಕ್ಕೆ ಬಿಜೆಪಿ ಪಕ್ಷ ಏಕೆ ಬೇಕು, ಪಕ್ಷದಿಂದ ಆಗಿರುವ ಕಾರ್ಯಕ್ರಮಗಳೇನು ಎಂಬುದರ ಆರಿವು ಮೂಡಿಸುವುದರ ಜತೆಗೆ, ನಮ್ಮ ಕಾರ್ಯ ಕರ್ತರನ್ನು ಸಕ್ರಿಯಗೊಳಿಸಿ, ಮತದಾರರ ಡಾಟಾಬೇಸ್ ಹೊಂದಲು ಸಹಕಾರಿಯಾಗಲಿದೆ.ಈ ನಿಟ್ಟಿನಲ್ಲಿ ೨೨೪ ನೇ ಬೂತ್ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ  ಸತೀಶ್ , ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ  ಟಿ.ಹೆಚ್.ಹನುಮಂತರಾಜು,ಕಾರ್ಯದರ್ಶಿ ಗಳಾದ ರಾಜೀವ್ ಮತ್ತು ಗಣೇಶ್, ಉಪಾಧ್ಯಕ್ಷ ರಾದ ವಿರೂಪಾಕ್ಷಪ್ಪ, ಶಂಕರ್ ಗಂಗಾಧರ, ಯುವಮೋರ್ಚಾ ಅಧ್ಯಕ್ಷ ನಾಗೇಂದ್ರ, ಕೆ.ಪಿ.ಮಹೇಶ್, ಜೆ.ಜಗದೀಶ್ ಸೇರಿದಂತೆ ೨೨೪ ನೇ ಬೂತ್ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Read E-Paper click here