Sunday, 24th November 2024

ಪುತ್ರಿ ಬಿಜೆಪಿ ಸೇರ್ಪಡೆ: ಕಾಗೋಡು ತಿಮ್ಮಪ್ಪ ಬೇಸರ

ಶಿವಮೊಗ್ಗ: ಮಗಳು ಬಿಜೆಪಿ ಸೇರಲು ಹೊರಟಿರುವುದು ನನ್ನ ಎದೆಗೆ ಚೂರಿ ಹಾಕಿದಂತಾ ಗಿದೆ. ಆಕೆ ಈ ಕೆಲಸ ಮಾಡಬಾರದಿತ್ತು ಎಂದು ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಅವಳು (ರಾಜ ನಂದಿನಿ) ಈ ರೀತಿ ಮಾಡುತ್ತಾಳೆ ಎಂಬುದನ್ನು ಕನಸಲ್ಲೂ ಯೋಚಿಸಿರ ಲಿಲ್ಲ. ಇದೆಲ್ಲ ಶಾಸಕ ಹರತಾಳು ಹಾಲಪ್ಪ ಅವರ ತಂತ್ರ ಇರಬಹುದು ಎಂದು ಹೇಳಿದ್ದಾರೆ. ರಾಜಕಾರಣದಲ್ಲಿ ಬದ್ಧತೆ, ಸ್ಥಿರತೆ ಇಟ್ಟುಕೊಂಡು ಬೆಳೆದು ಬಂದವರು ನಾವು. ಆ ಸಂತೋಷ, ನೆಮ್ಮದಿ ನನಗೆ ಇದೆ. ಏನೇ ಆಗಲಿ ನಾನು ಕಾಂಗ್ರೆಸ್ ಬಿಟ್ಡು ಹೋಗಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ನಿಲ್ಲುತ್ತೇನೆ ಎಂದು ಕಾಗೋಡು ತಿಮ್ಮಪ್ಪ ಸ್ಪಷ್ಟಪಡಿಸಿದರು.