Saturday, 14th December 2024

ಪೆಟ್ರೊಲ್ ಡೀಸೆಲ್ ಬೆಲೆ ಇಳಿಸಿ: ಬಿಜೆಪಿ ಪ್ರತಿಭಟನೆ

ಶಿರಸಿ: ಇಳಿಸಿ ಇಳಿಸಿ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಇಳಿಸಿ, ದರ ಏರಿಕೆ ಮಾಡಿದ ಪೆಟ್ರೊಲ್ ಡೀಸೆಲ್ ಬೆಲೆ ಇಳಿಸಿ ಎಂದು ಶಿರಸಿ ನಗರದ ಐದು ರಸ್ತೆ ಯಲ್ಲಿ ಬಿಜೆಪಿ ಗುರುವಾರ ಪ್ರತಿಭಟನೆ ನಡೆಸಿತು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಜೆಪಿ ಅನೇಕ ಸಂಘಟನೆಯ ಜತೆಗೆ ಪ್ರತಿಭಟನೆಯ ನೇತ್ರತ್ವ ವಹಿಸಿದ್ದರು. ಕಾಂಗ್ರೆಸ್ ಸರಕಾರ ಇದು ಕಿಲ್ಲರ್ ಸರಕಾರ ಇದನ್ನು ಇಳಿಸಬೆರಕೆಂದು ಪ್ರತಿಭಟನೆಯಲ್ಲಿ ಗಹೋಷಣೆ ಕೂಗಲಾಯಿತು. ಈ ಸಂದರ್ಭದಲ್ಲಿ ಸದಾನಂದ ಭಟ್, ನಂದನ ನಿಲೇಕಣಿ, ಶ್ರೀನಿವಾಸ ಹೆಬ್ಬಾರ್, ಗಣಪತ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

*

ದರ ಏರಿಕೆಯಿಂದ ಸರಕು ಸಾಗಣೆಯದರವೂ ಹೆಚ್ಚಲಿದೆ. ಆದ್ದರಿಂದ ಈ ದರ ಏರಿಕೆಯನ್ನು ಇಳಿಸಬೇಕು. ಅಲ್ಲಿಯವರೆಗೂ ಬಿಜೆಪಿ ಪ್ರತಿಭಟನೆ ನಿಲ್ಲಿಸೋದಿಲ್ಲ.
-ಶ್ರೀನಿವಾಸ ಹೆಬ್ಬಾರ್, ಜೀವಜಲ ಕಾರ್ಯಪಡೆ