ಮೈಸೂರು: ಜಿಲ್ಲೆಯ (Mysuru News) ನಂಜನಗೂಡಿನ ಗ್ರಾಮವೊಂದರಲ್ಲಿ, ವ್ಯಕ್ತಿಯೊಬ್ಬರನ್ನು ಕತ್ತು ಕೊಯ್ದು ಕೊಲೆ (Murder Case) ಮಾಡಲಾಗಿದೆ. ಹೆಣದ ಬಳಿಯಲ್ಲಿ ವಾಮಾಚಾರಕ್ಕೆ (Black Magic) ಬಳಸಲಾಗಿದೆ ಎನ್ನಲಾದ ಸಾಮಗ್ರಿಗಳು ದೊರೆತಿವೆ. ಹೀಗಾಗಿ ಇದು ವಾಮಾಚಾರಕ್ಕಾಗಿ ನಡೆಸಿದ ಬಲಿ ಇರಬಹುದು ಎಂದು ಅನುಮಾನಿಸಲಾಗಿದೆ.
ಹುಣ್ಣಿಮೆ ದಿನದಂದೇ 43 ವರ್ಷದ ವ್ಯಕ್ತಿಯೊಬ್ಬರ ಕೊಲೆಯಾಗಿದೆ. ಮಡುವಿನಹಳ್ಳಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಮಲ್ಕುಂಡಿ ಗ್ರಾಮದ ಸದಾಶಿವ ಎಂಬವರು ಕೊಲೆಯಾದ ವ್ಯಕ್ತಿ. ಕತ್ತು ಕೊಯ್ದ ಸ್ಥಿತಿಯಲ್ಲಿ ಸದಾಶಿವ ಅವರ ದೇಹ ಪತ್ತೆಯಾಗಿದೆ.
ಈ ಗ್ರಾಮದ ಪ್ರೌಢಶಾಲೆಯ ಸಮೀಪ ಈ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದುದ್ದನ್ನು ಕಂಡವರು ಗ್ರಾಮಸ್ಥರಿಗೆ ವಿಚಾರ ತಿಳಿಸಿದ್ದಾರೆ. ಹೀಗೆ ದೇಹ ಪತ್ತೆಯಾದ ಜಾಗದಲ್ಲಿ ರಕ್ತ ಚೆಲ್ಲಾಡಿದ್ದು, ಎಲೆ ಮತ್ತು ಅಡಿಕೆ ಹಾಗೂ 101 ರೂ. ಹಣವನ್ನು ಇಡಲಾಗಿತ್ತು. ನಿಂಬೆಹಣ್ಣುಗಳು ಕೂಡ ಸ್ಥಳದಲ್ಲಿ ಸಿಕ್ಕಿವೆ.
ಸದಾಶಿವ ಅವರನ್ನು ಉಳಿಸಲು ತಕ್ಷಣವೇ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸದಾಶಿವ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: Belagavi Murder Case: ಬೆಳಗಾವಿ ಉದ್ಯಮಿ ಕೊಲೆ ಪ್ರಕರಣ: ಕೊಲೆಯಾದವನು ಪತ್ನಿಗೆ ನೀಡುತ್ತಿದ್ದ ಕಿರುಕುಳ ಅಂತಿಂಥದ್ದಲ್ಲ!