ಬೆಂಗಳೂರು:ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ಬರುತ್ತಿರುವ ಬೆದರಿಕೆ ಕರೆಗಳಿಂದ ವಿದ್ಯಾರ್ಥಿ ಮತ್ತು ಪೋಷಕ ಸಮೂಹ ತೀವ್ರ ಆತಂಕಕ್ಕೊಳ ಗಾಗಿದ್ದು, ಶಾಲೆಗಳಲ್ಲಿ ಅಗ್ನಿ ಸುರಕ್ಷತೆ ಮಾದರಿಯಲ್ಲಿ ಮಕ್ಕಳ ರಕ್ಷಣೆಗಾಗಿ ಬಾಂಬ್ ನಿಷ್ಕ್ರಿಯಗೊಳಿಸುವ ಬಗ್ಗೆ ಸೂಕ್ತ ತರಬೇತಿ ನೀಡಿ ಪ್ರತ್ಯೇಕ ದಳ ಸ್ಥಾಪಿಸಬೇಕೆಂದು ಫುಡ್ ವೈರ್ ಇಂಡಿಯಾ ಸಂಸ್ಥೆಯ ಹಿರಿಯ ಸಲಹೆಗಾರ ಪ್ರದೀಪ್ ಸಿ.ಬಾರ್ಕೂರ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ, ಪೊಲೀಸ್ ಇಲಾಖೆ, ಸಂಘ ಸಂಸ್ಥೆಗಳು, ಆಸಕ್ತ ಯುವ ಸಮೂಹವನ್ನೊಳಗೊಂಡ ಪರಿಣಿತರ ತಂಡ ರಚಿಸಿದರೆ ಸುರಕ್ಷೆಯ ಭಾವನೆ ಮತ್ತಷ್ಟು ಗಟ್ಟಿಯಾಗುತ್ತದೆ. ಸರ್ಕಾರ ಈ ನಟ್ಟಿನಲ್ಲಿ ತಜ್ಞರಿಂದ ಸಾಧಕ – ಬಾಧಕಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಪಡೆಯಬೇಕು. ರಕ್ಷಣಾ ಕ್ರಮಕ್ಕಾಗಿ ಪೋಷಕರು ತಮ್ಮ ಒಪ್ಪಿಗೆ ಮತ್ತು ಬೆಂಬಲ ವ್ಯಕ್ತಪಡಿಸಲು ಗೂಗಲ್ ಫಾರ್ಮ್/ಲಿಂಕ್ ಅನ್ನು ಪ್ರಾರಂಭಿಸಿ ದ್ದೇನೆ.
ಸಾಮೂಹಿಕ ಧ್ವನಿ ಹೊಂದಿರುವ ಸಹಿ ಮಾಡಿದ ಗೂಗಲ್ https://forms.gle/j3QeumUX8VT5uvLmZ. ಫಾರ್ಮ್/ಲಿಂಕ್ ಅನ್ನು ಇಲ್ಲಿ ಲಗತ್ತಿಸ ಲಾಗಿದೆ. wwwfoodwireindia.com ಗೆ ಭೇಟಿ ನೀಡಿ ಮತ ಚಲಾಯಿಸಬಹುದು ಎಂದರು.
ಕಳೆದ 2004 ರಲ್ಲಿ ತಮಿಳುನಾಡಿನ ಕುಂಬಕೋಣಂನ ಶಾಲೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ರಾಜ್ಯದ ಶಾಲೆಗಳಲ್ಲಿ ಅಗ್ನಿ ಸುರಕ್ಷತಾ ಮಾರ್ಗಸೂಚಿ ಹೊರಡಿಸಿದ್ದು, ಹಲವೆಡೆ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ. ಆದರೆ ಬಾಂಬ್ ಬೆದರಿಕೆ ಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಗೊಳಿಸಲು ಸರ್ಕಾರ ಮುಂದಾಗಬೇಕು. ಸರ್ಕಾರಿ ಹಾಗೂ ಖಾಸಗಿ ಶಾಲೆ ಎಂಬ ತಾರತಮ್ಯ ಇರಬಾರದು. ಬಡವರ ಮಕ್ಕಳ ರಕ್ಷಣೆ ಸರ್ಕಾರದ ಆದ್ಯತೆಯಾಗಬೇಕು. ಬಾಂಬ್ ನಿಷ್ಕ್ರೀಯ ಕ್ರಮಗಳಿಗೆ ಪೊಲೀಸ್ ಇಲಾಖೆಯ ನೆರವು ಪಡೆಯಬೇಕು.
ಪ್ರಥಮ ಚಿಕಿತ್ಸೆ ಮಾದರಿಯಲ್ಲಿ ಇಂತಹ ಬೆದರಿಕೆಗಳನ್ನು ಎದುರಿಸುವ ಪಡೆಗಳನ್ನು ಸ್ಥಾಪಿಸಬೇಕು. ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಒಂದು ಶಾಲೆಗೆ ಅಗ್ನಿ ಸುರಕ್ಷತಾ ಕ್ರಮ ಅಳವಡಿಸಬೇಕಾದರೆ ಕನಿಷ್ಠ 12 ರಿಂದ 30 ಲಕ್ಷ ರೂ. ವರೆಗೂ ವೆಚ್ಚ ಮಾಡಬೇಕಾಗುತ್ತದೆ. ಆದರೆ ಬಾಂಬ್ ನಿಷ್ಕ್ರೀಯ ದಳಕ್ಕೆ ಹೆಚ್ಚಿನ ಆರ್ಥಿಕ ಹೊರೆ ಬೀಳುವುದಿಲ್ಲ. ಮಕ್ಕಳು ಸುರಕ್ಷಿತವಾಗಿ ಶಾಲೆಗೆ ಹೋಗಬೇಕು ಮತ್ತು ಶಾಲೆಯಲ್ಲಿ ಬಾಂಬ್ ಇಡಲಾಗಿದೆ.