Thursday, 12th December 2024

3 ಸಾವಿರ ಲಂಚ: ಬಿಲ್ ಕಲೆಕ್ಟರ್ ಗೆ 3 ವರ್ಷ 6 ತಿಂಗಳು ಜೈಲು 

ತುಮಕೂರು: ಮೂರು ಸಾವಿದ ಲಂಚ ಪಡೆಯುವಾಗ ಈ ಹಿಂದೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಕ್ಕಿಬಿದ್ದಿದ್ದ ಬಿಲ್ ಕಲೆಕ್ಟರಿಗೆ ಮೂರು ವರ್ಷ ಆರು ತಿಂಗಳು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿರುವ ಪ್ರಕರಣ ನಡೆದಿದೆ.
ಜಿಲ್ಲೆಯ ತುರುವೇಕೆರೆ ತಾಲೂಕಿನ ಹುಲ್ಲೇಕೆರೆ ಗ್ರಾಮ ಪಂಚಾಯಿತಿ ಬಿಲ್‌ ಕಲೆಕ್ಟರ್ ಎಚ್.ಎನ್.ಕೀರ್ತನ್ ಕುಮಾರ್‌ಗೆ 3 ವರ್ಷ 6 ತಿಂಗಳು ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆದೇಶಿಸಿದೆ.
ತುರುವೇಕೆರೆ ತಾಲೂಕಿನ ಹುಲ್ಲೇಕೆರೆ ಗ್ರಾಮದ ಎಚ್.ಕೆ.ಚಂದ್ರಕಲಾ ಅವರ ಖಾತೆ ಸಂಖ್ಯೆ 534, 535ರ ಸ್ವತ್ತಿಗೆ ನಮೂನೆ-9, ನಮೂನೆ-11ಎ ನೀಡಲು 73 ಸಾವಿರ ಲಂಚಕ್ಕೆ ಬಿಲ್ ಕಲೆಕ್ಟರ್ ಒತ್ತಾಯಿಸಿದ್ದರು.
ಮುಂಗಡವಾಗಿ 3 ಸಾವಿರ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹದಳಕ್ಕೆ ಸಿಕ್ಕಿಬಿದ್ದಿದ್ದರು. ಈ ಕುರಿತು  ಭ್ರಷ್ಟಾಚಾರ ನಿಗ್ರಹ ದಳದ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ಅವರು  ಪ್ರಕರಣದ ವಿಚಾರಣೆ ನಡೆಸಿ, ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ.