Friday, 25th October 2024

ಬುದ್ಧನ ತತ್ವಗಳು ಮನುಕುಲಕ್ಕೆ ದಾರಿದೀಪ: ಮಲ್ಲಿಕಾರ್ಜುನ ಖರ್ಗೆ

2566ನೇ ವೈಶಾಕ ಬುದ್ಧ ಪೂರ್ಣಿಮಾ ಆಚರಣೆ

ಕಲಬುರಗಿ: ಜಗತ್ತಿನಲ್ಲಿ ಗೌತಮ ಬುದ್ಧ ಜನಿಸದೆ ಇದ್ದಾರೆ ಪ್ರಪಂಚದಲ್ಲಿ ಬೌದ ಧರ್ಮದ ಸ್ಥಾಪನೆಯೇ ಆಗುತ್ತಿರಲಿಲ್ಲ. ಡಾ. ಅಂಬೇಡ್ಕರ್ ಅವರು ದೇಶದ ಜನರಿಗೆ ಸಂವಿಧಾನ ಕೊಟ್ಟ ಹಾಗೇ, ಬುದ್ಧನು ಪ್ರಪಂಚದ ಜನರಿಗೆ ತನ್ನ ಅನುಭವಗಳ ಮೂಲಕ ಇಡೀ ಮಾನವ ಕುಲಕ್ಕೆ ದಾರಿದೀಪವಾಗಿದ್ದರೆ ಎಂದು ರಾಜ್ಯಸಭೆ ವಿರೋಧ ಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅಭಿಮತ ಪಟ್ಟರು.

ಇಲ್ಲಿನ ಸೇಡಂ ರಸ್ತೆ ಬಳಿ ಇರುವ ಸಿದ್ಧಾರ್ಥ್ ಬುದ್ಧ ವಿಹಾರದಲ್ಲಿ 2566ನೇ ವೈಶಾಕ ಬುದ್ಧ ಪೂರ್ಣಿಮಾ ಆಚರಣೆಯನ್ನು ಗೌತಮ ಬುದ್ಧರ ಪ್ರತಿಮೆಗೆ ಪುಷ್ಪರ್ಚಾನೆ ಮಾಡಿ ನೇರವೇರಿಸಿ ಮಾತನಾಡಿದರು.

ಇಂದು ಜಗತ್ತಿನಾದ್ಯಂತ ನಡೆಯುತ್ತಿರುವ ಎಲ್ಲತಲ್ಲಣಗಳು ದೂರ ಮಾಡುವ ಶಕ್ತಿ ಬುದ್ಧ ತತ್ವ ಗಳಿಗಿದೆ. ಇಡೀ ಜಗತ್ತಿಗೆ ಶಾಂತಿ ಹಾಗೂ ಅಹಿಂಸೆಯ ತತ್ವ ಹೇಳಿ ಕೊಟ್ಟವನು ಬುದ್ಧನಾಗಿದ್ದಾನೆ. ಬುದ್ಧನ ಅನುಯಾಗಳ ದೇಶ ಇಂದು ಅಂತಾರಾಷ್ಟ್ರೀಯ ಮಟ್ಟದ ಖುಷಿಯಿಂದ ಇದೆ ಎಂದು ವಿಶ್ವ ಸಂಸ್ಥೆ ಹೇಳುತ್ತದೆ. ಬುದ್ಧನ ವಿಚಾರಧಾರೆಗಳು ವೈಜ್ಞಾನಿಕ ಸತ್ಯ ಸಂಗತಿಯಾಗಿವೆ. ಹೀಗಾಗಿ ಹಲವಾರು ರಾಷ್ಟ್ರಗಳ ಮೇಲೆ ಅವರ ತತ್ವಗಳು ಪ್ರಭಾವ ಬೀರಿ ಅವರನ್ನು ಒಪ್ಪಿಕೊಂಡಿವೆ. ನಾವುಗಳು ಸಹ ಬುದ್ಧರ ತತ್ವಾದರ್ಶಗಳನ್ನು ಒಪ್ಪಿ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದೇಶದಲ್ಲಿ ಬುದ್ಧರ ವಿಚಾರಗಳನ್ನು ಮರೆತ್ತಿದ್ದೇವೆ. ಬಾಬಾ ಸಾಹೇಬರು ಹೇಳಿದಂತೆ ನಾವು ಬುದ್ಧರ ತತ್ವ ಕಲಿಯು ತ್ತಿಲ್ಲ. ಹೀಗಾಗಿ ನಾವೆಲ್ಲರೂ ಜೀವನದಲ್ಲಿ ಸಂಪೂರ್ಣ ವಿಫಲರಾಗುತ್ತಿದ್ದೇವೆ. ಬುದ್ಧ ಹಾಗೂ ಬಸವಣ್ಣನವರು ಮೂರ್ತಿ ಪೂಜೆ ಯಾವತ್ತೂ ಒಪ್ಪಿದವರಲ್ಲ, ಆದರೆ, ಇಂದು ಅವರನ್ನು ಗೌರವಿಸವ ಉದ್ದೇಶ ದಿಂದ ಆ ಮಹಾನ್ ಪುರುಷರ ಮೂರ್ತಿಗಳ ಪೂಜೆ ಮಾಡುತ್ತಿರುವುದು ವಿಪರ್ಯಾಸ ಎಂದರು.

ಪ್ರಯತ್ನ ಪಡದೇ ಈ ಜಗತ್ತಲ್ಲಿ ಏನು ಸಿಗುವುದಿಲ್ಲ. ಜೀವನದಲ್ಲಿ ಏನಾದರು ಸಾಧಿಸಲು ಏನಾದರು ಪ್ರಯತ್ನ ಮಾಡಬೇಕು. ಪ್ರಯತ್ನದಿಂದ ಮಾತ್ರ ಬದುಕಲ್ಲಿ ಯಶಸ್ವಿಯಾಗಲು ಸಾಧ್ಯ. ಆದರಿಂದಲೇ ಬುದ್ಧ ಕರ್ಮ ಸಂದೇಶ ಹಾಗೂ ಹಾಗೂ ಬಸವಣ್ಣ ಕಾಯಕ ಸಂದೇಶ ಜಗತ್ತಿಗೆ ಸಾರಿದ್ದಾರೆ ಎಂದು ಖರ್ಗೆ ಅವರು ಹೇಳಿದರು.

ದೇಶದ ಎಲ್ಲಾ ಬುದ್ಧ ವಿಹಾರ ಕೇಂದ್ರಗಳು ಕೇವಲ ಸೆಮಿನಾರ್ ಕೇಂದ್ರಗಳಾಗದೆ ಬುದ್ಧನ ತತ್ವ ಪಾಲನೆ, ನಂಬಿಕೆ, ಧ್ಯಾನ ಹಾಗೂ ವಿಚಾರಗಳನ್ನು ಅಳವಡಿಸಿ ಕೊಳ್ಳುವ ವಿಚಾರ ಕೇಂದ್ರಗಳಾಗಬೇಕು ಎಂದರು.

ಸಾಹಿತಿ ಹಾಗೂ ಆಕಾಶವಾಣಿ ಕಾರ್ಯಕ್ರಮ ನಿರೂಪಕ ಸುಬ್ಬು ಹೊಲೆಯಾರ್‌ ಮಾತನಾಡಿ, ಬಸವಣ್ಣ, ಬುದ್ಧ, ಅಂಬೇಡ್ಕರ್‌ ಅವರು ಮೌಢ್ಯ ಕಂದಾಚಾರ ಬಗ್ಗೆ ಬಾಲ್ಯದಲ್ಲೇ ಪ್ರಶ್ನಿಸುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಹಾದಿ ತೋರಿದ ಮಹಾನ ಶಕ್ತಿಗಳು ಎಂದು ಹೇಳಿದರು.

ಬುದ್ಧನ ವಿಚಾರಗಳು ಸಮುದ್ರವಿದ್ದಂತೆ, ಅದನ್ನು ಬೊಗಸೆಯಲ್ಲಿಹಿಡಿಯುವುದು ಅಸಾಧ್ಯ. ಧರ್ಮ, ಜಾತಿ, ಮತ ಹೊರತುಪಡಿಸಿ ಕೇವಲ ಕರುಣೆಗೆ ಮಾತ್ರ ಬೌದ್ಧರಲ್ಲಿಸ್ಥಳ ನೀಡಿದೆ. ಬುದ್ಧರು ಎಂದು ಹಿಂಸೆಗೆ ಪ್ರಚೋದನೆ ನೀಡಲಿಲ್ಲ. ನಾವೆಲ್ಲರೂ ಅದರ ಪಾಲನೆ ಮಾಡೋಣ ಎಂದು ಹೇಳಿದರು.

ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಪ್ಪಗೇರೆ ಸೋಮಶೇಖರ ಸ್ವಾಗತಿಸಿದರು.

ಅಫಜಲಪುರ ಶಾಸಕ ಎಂ.ವೈ.ಪಾಟೀಲ, ವಿಧಾನ ಪರಿಷತ್‌ ಸದಸ್ಯ ರವಿಕುಮಾರ ಅರಳಿ, ಮಾಜಿ ಎಂಎಲ್‌ಸಿ ಅಲ್ಲಮ ಪ್ರಭು ಪಾಟೀಲ್‌, ತಿಪ್ಪಣಪ್ಪ ಕಮಕನೂರು, ಸಿಡಿಸಿ ಅಧ್ಯಕ್ಷ  ಜಗದೇವಯ್ಯ ಗುತ್ತೇದಾರ್‌, ಡಾ.ಎಸ್‌.ಬಿ.ಕಾಮರೆಡ್ಡಿ, ರಾಜಗೋಪಾಲರೆಡ್ಡಿ, ನೀಲಕಂಠರಾವ್‌ ಮೂಲಗೆ ಸೇರಿ ಅಪಾರ ಪ್ರಮಾಣದ ಬೌದ್ಧ ಉಪಾಸಕ ಉಪಾಸಕಿಯರಿದ್ದರು. ಈಶ್ವರ ಎಂ.ಇಂಗನ್‌ ವಂದನಾರ್ಪಣೆ ಮಾಡಿದರು. ಡಾ.ಚಂದ್ರಶೇಖರ ದೊಡ್ಡಮನಿ ನಿರೂಪಣೆ ಮಾಡಿದರು.