Sunday, 15th December 2024

ಬಸ್ ಸಂಚಾರ ಬಂದ್‌ ಮಾಡಿ ಗ್ರಾಮಸ್ಥರ ಪ್ರತಿಭಟನೆ

ಮೈಸೂರು: ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯದಿಂದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಹಿನ್ನಲೆಯಲ್ಲಿ ಮೈಸೂರು – ಚಾಮರಾಜನಗರ ಬಳಿ ಬಸ್ ಸಂಚಾರ ಬಂದ್‌ ಮಾಡಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.

 

ಎಲ್ಲಾ ಬಸ್ ನಲ್ಲೂ ಪ್ರಯಾಣಿಕರು ತುಂಬಿ ತುಳುಕುತ್ತಿದ್ದುದರಿಂದ ಸದ್ಯ ಮೈಸೂರು – ಚಾ.ನಗರ ಮಾರ್ಗ ಸಂಪೂರ್ಣ ಬಂದ್ ಮಾಡಲಾಗಿದ್ದು, ಕೆಎಸ್‌ಆರ್ ಟಿಸಿ ಬಸ್ ಗಳನ್ನು ತಡೆದು ಗ್ರಾಮಸ್ಥರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ನಂಜನಗೂಡು ತಾಲೂಕಿನ ವೀರಗೌಡನಪುರ ಬಳಿ ಗ್ರಾಮಸ್ಥರು ಬಸ್ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದು, ಕಳೆದ ಎರಡು ತಿಂಗಳಿಂದ ನಮ್ಮ ಊರಿನಲ್ಲಿ ಯಾವ ಬಸ್ ಗಳು ನಿಲ್ಲಿಸುತ್ತಿಲ್ಲ. ಶಾಲಾ ಕಾಲೇಜಿಗೆ ತೆರಳುವ ಮಕ್ಕಳಿಗೆ ನಿತ್ಯವು ಸಮಸ್ಯೆಯಾಗುತ್ತಿದೆ ಎಂದರು.

ಕೆ.ಎಸ್.ಆರ್.ಟಿ.ಸಿ ಬಸ್ ಗಳನ್ನು ಮಾತ್ರ ತಡೆದು ಆಕ್ರೋಶ ಹೊರ ಹಾಕುತ್ತಿರುವ ಗ್ರಾಮಸ್ಥರು, ಸ್ಥಳಕ್ಕೆ ಸಾರಿಗೆ ಇಲಾಖೆಯ ಅಧಿಕಾರಿಗಳು ಬರುವಂತೆ ಒತ್ತಾಯಿಸಿ, ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವವರೆಗೂ ರಸ್ತೆ ಬಿಟ್ಟು ಕದಲಲ್ಲ ಎಂದು ಆಕ್ರೋಶ ಹೊರ ಹಾಕಿ ಪ್ರತಿಭಟಿಸುತ್ತಿದ್ದಾರೆ.