Sunday, 24th November 2024

ಬಸ್ ನಿಲುಗಡೆಗೆ ವಿಧ್ಯಾರ್ಥಿಗಳ ಹರಸಾಹಸ : ಬಿದರೆಗುಡಿಯ ಮೇಲ್ಸೇತುವೆಯಲ್ಲಿ ಬಸ್ ಸಂಚಾರ

ಬಿದರೆಗುಡಿಯಲ್ಲಿ ತಂಗುದಾಣವಿಲ್ಲದೆ ಬಿಸಿಲಿನಲ್ಲಿ ಬಸ್‌ಗಾಗಿ ಕಾಯುವಿಕೆ: ಗಮನಹರಿಸದ ಜನಪ್ರತಿನಿಧಿಗಳು

ಪ್ರಶಾಂತ್ ಕರೀಕೆರೆ

ತಿಪಟೂರು: ರಾಷ್ಟಿçÃಯ ಹೆದ್ದಾರಿ 206ರಲ್ಲಿ ಹಾದು ಹೋಗಿರುವ ತಾಲ್ಲೂಕಿನ ಗಡಿಭಾಗವಾದ ಬಿದರೆಗುಡಿಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲುಗಡೆ ಯಿಲ್ಲದೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿ ಗಳು ಪ್ರತಿನಿತ್ಯ ಶಾಲಾ ಕಾಲೇಜಿಗೆ ತಡವಾಗಿವೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದ್ದು, ಬಸ್‌ಗಾಗಿ ಕಾದು ಬಿಸಿಲಿನಲ್ಲಿ ಸುಡಬೇಕಾಗಿದೆ.

ಹೆದ್ದಾರಿಯ ಅಗಲೀಕರಣದಿಂದಾಗಿ ಹಾಗೂ ಬಿದರೆಗುಡಿಯ ಹೃದಯ ಭಾಗದಲ್ಲಿ ಮೇಲ್ಸೇತುವೆ ನಿರ್ಮಾಣ ಆಗಿರುವುದರಿಂದ ಅರಸೀಕೆರೆ ಕಡೆಯಿಂದ ಬರುವ ಎಲ್ಲಾ ಬಸ್ಸುಗಳು ಮೇಲ್ಸೇತುವೆಯ ಮೇಲೆ ಹೋಗುತ್ತಿರುವುದರಿಂದ ಹಾಗೂ ಮೇಲ್ಸೇತುವೆಯಿಂದ ಸಂಪರ್ಕ ರಸ್ತೆಗೆ ಬಸ್ ನಿಲ್ದಾಣದಿಂದ ಸುಮಾರು ಅರ್ಧ ಕಿ.ಮೀ ದೂರವಿದ್ದು ಸುತ್ತಮುತ್ತಲಿನ ಭೈರಾಪುರ, ಮತ್ತಿಹಳ್ಳಿ, ಗೌಡನಕಟ್ಟೆ, ಚಿಕ್ಕಬಿದರೆ, ಹಿರೇಬಿದರೆ, ಗ್ರಾಮದ ಸುಮಾರು 80ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಬೇಕಾಗಿರುತ್ತದೆ. ಹಾಗೂ ಬೆಳಗಿನ ವೇಳೆಯಲ್ಲಿ ಸಾರ್ವಜನಿಕರು ಸಹ ನಗರಕ್ಕೆ ಸಂಚಾರ ಮಾಡುವುದು ತುಂಬಾ ಕಷ್ಟಕರವಾಗಿದೆ. ಹಾಗೂ ರಸ್ತೆ ಅಗಲೀಕರಣ ಅಗಿರುವುದರಿಂದ ಸಾರ್ವಜನಿಕರು ನಿಲ್ಲಲು ಇಲ್ಲಿ ಸರಿಯಾದ ಪ್ರಯಾಣಿಕರ ತಂಗು ದಾಣವೂ ಸಹ ಇಲ್ಲದೆಯಿರುವುದು ಬಸ್‌ಗೆ ಯಾವ ಜಾಗದಲ್ಲಿ ನಿಲ್ಲಿಸುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.

ಬಿದರೆಗುಡಿಯ ಮೂಲಕ ಅರಸೀಕೆರೆ ಡಿಪೋ, ಚಿಕ್ಕಮಗಳೂರು, ಕಡೂರು, ತುರವೇಕೆರೆ, ಕುಣಿಗಲ್, ತಿಪಟೂರು ವಿಭಾಗದ ಬಸ್ಸುಗಳ ನಿಲುಗಡೆ ಇದ್ದರೂ ಸಹ ನಿಲುಗಡೆ ಮಾಡದೆಯಿರುವುದು ವಿಧ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಯಾಗಿದೆ. ಅದುದರಿಂದ ಸಂಬ0ಧಪಟ್ಟ ಅಧಿಕಾರಿಗಳು ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಂಡು ಅವ್ಯವಸ್ಥೆಯಾಗಿರುವ ಸಂಚಾರಕ್ಕೆ ಸುಗಮ ವ್ಯವಸ್ಥೆ ಕಲ್ಪಿಸಬೇಕಾಗಿದೆ.
*
ಹೊನ್ನವಳ್ಳಿಗೆ ಹೋಗಿ ವಾಪಸ್ಸು ಬರುವಂತೆ ಕೊನೇಹಳ್ಳಿ ಗ್ರಾಮಕ್ಕೆ ಹೋಗಿ ವಾಪಸ್ಸು ಬರುವ ರೀತಿಯಲ್ಲಿ ಬಸ್‌ಗಳನ್ನು ಹಾಗೂ ಅರಸೀಕೆರೆ-ತಿಪಟೂರು ಮಧ್ಯೆ ಗ್ರಾಮಾಂತರ ಸಾರಿಗೆ ಬಸ್‌ಗಳ ವ್ಯವಸ್ಥೆ ಮಾಡುವುದರಿಂದ ಮುಂಚಾನೆಯ ಸಮಯದಲ್ಲಿ ಮಾರುಕಟ್ಟೆಗೆ ರೈತರು ಸಂಚರಿಸಲು, ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.
ಎಂ.ಪಿ ಹರೀಶ್ ಸದಸ್ಯರು ಮತ್ತಿಹಳ್ಳಿ ಗ್ರಾ ಪಂ

ಮಕ್ಕಳು ಸರಿಯಾದ ಸಮಯಕ್ಕೆ ಶಾಲಾ-ಕಾಲೇಜಿಗೆ ಹೋಗದೆ ಹೋದರೆ ವಿದ್ಯಾಬ್ಯಾಸ ಕುಂಠಿತವಾಗುತ್ತದೆ ಅದ್ದರಿಂದ ಮೊದಲಿನಂತೆ ತಿಪಟೂರಿನ ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕರು ಬೆಳಗಿನ ವೇಳೆಯಲ್ಲಿ ಒಬ್ಬ ಸಿಬ್ಬಂದಿಯನ್ನು ಆಯೋಜಿಸಿದರೆ ಮೇಲ್ಸೇತುವೆಯಲ್ಲಿ ಹೋಗುವ ಬಸ್‌ಗಳ ಗಣನೆಗೆ ಅನುಕೂಲವಾಗುತ್ತದೆ.
ಭರತ್‌ಗೌಡ ಸ್ಥಳೀಯರು.