Thursday, 19th September 2024

ಜಿಲ್ಲೆಯ ೫ ವಿಧಾನ ಸಭಾ ಕ್ಷೇತ್ರಗಳಲ್ಲೂ ಬಿಎಸ್‌ಪಿ ಅಭ್ಯರ್ಥಿಗಳ ಸ್ಪರ್ಧೆ ಖಚಿತ : ಬಿ.ವಿ.ನಾಗಪ್ಪ

ಚಿಕ್ಕಬಳ್ಳಾಪುರ: ಜಿಲ್ಲೆಯ ಎಲ್ಲಾ ೫ ವಿಧಾನ ಸಭಾ ಕ್ಷೇತ್ರಗಳಲ್ಲಿಯೂ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಗಳು ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಇದರಂತೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಆಗಲಿದೆ ಎಂದು ಬಿಎಸ್‌ಪಿ ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ವಿ.ನಾಗಪ್ಪ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸೋಮವಾರ ನಡೆಸಿದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಷ್ಟ್ರೀಯ ಪಕ್ಷವಾದ ಬಿಎಸ್‌ಪಿ ಬೆಹೆನ್ ಮಾಯಾವತಿ ಅವರ ನೇತೃತ್ವದಲ್ಲಿ ದೇಶದಲ್ಲಿ ಪ್ರಬಲವಾಗುತ್ತಿದೆ.ಜಿಲ್ಲೆಯಲ್ಲಿ ಬಿಎಸ್‌ಪಿ ಪಕ್ಷದ ನಾಯಕತ್ವ ಮತ್ತು ತತ್ವ ಸಿದ್ಧಾಂತ ಒಪ್ಪುವವರು ಅಭ್ಯರ್ಥಿಯಾಗಲು ಇಚ್ಚಿಸು ವವರು ಅರ್ಜಿಯ ಜತೆಗೆ ೫ ಸಾವಿರ ಠೇವಣಿ ನೀಡಬೇಕು.

ಹೀಗಾಗಿ ಅಭ್ಯರ್ಥಿಯಾಗಲು ಇಚ್ಚಿಸುವವರು ಪಕ್ಷದ ಜಿಲ್ಲಾ ಅಧ್ಯಕ್ಷರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಅರ್ಜಿಸಲ್ಲಿಸದೆ ಕೊನೇ ಕ್ಷಣದಲ್ಲಿ ಬರುವ ಅಭ್ಯರ್ಥಿಗಳನ್ನು ಯಾವುದೇ ಕಾರಣಕ್ಕೂ ಪಕ್ಷ ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿ ದರು.

ಡಿ.27ರಂದು ಬೆಂಗಳೂರಿಗೆ ಬಿಎಸ್‌ಪಿ ರಾಷ್ಟ್ರೀಯ ಸಂಯೋಜಕ ಆಕಾಶ್ ಆನಂದ್ ಭೇಟಿ ನೀಡುವರು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ ೩೦೦ ಜನರು ಭಾಗವಹಿಸುವರು ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ದೇಶದಲ್ಲಿ ಬಹುಸಂಖ್ಯಾತರಾದ ದಲಿತರು, ಅಲ್ಪಸಂಖ್ಯಾತರು,ಮತ್ತು ಹಿಂದುಳಿದ ವರ್ಗಗಳಿಗೆ ಸರ್ಕಾರಗಳು ಯಾವುದೇ ಕಾರ್ಯ ಕ್ರಮ ಕೊಡುತ್ತಿಲ್ಲ.ಕೊಟ್ಟರೂ ಆವು ಆವರ್ಗವನ್ನು ಮುಟ್ಟುವಲ್ಲಿ ಸೋತಿವೆ ಎಂದು ದೂರಿದರು.ಬಹುಜನರ ಹಿತ ಕಾಯುವ ಪಕ್ಷವೆಂದರೆ ಅದು ಬಿಎಸ್‌ಪಿ ಮಾತ್ರವಾಗಿದೆ . ಜನತೆ ಯಾವುದೇ ಆಮಿಷಗಳಿಗೆ ಒಳಗಾಗದೆ ಬಿಎಸ್‌ಪಿ ಪಕ್ಷ ಮತ್ತು ಅಭ್ಯರ್ಥಿ ಗಳನ್ನು ಬೆಂಬಲಿಸಿ ಎಂದು ಕೋರಿದರು.

ಸುದ್ದಿಗೋಷ್ಟಿಯಲ್ಲಿ ಪಕ್ಷದ ಮುಖಂಡರಾದ ಸೋಮಶೇಖರ್, ವೆಂಕಟರಮಣಪ್ಪ, ವೆಂಕಟೇಶ್, ನರಸಿಂಹಮೂರ್ತಿ ಮತ್ತಿತರರು ಇದ್ದರು.

Read E-Paper click here