Tuesday, 10th September 2024

ಕೆನರಾ ಬ್ಯಾಂಕ್ ನೂತನ ಶಾಖೆ ಆರಂಭ 

ತುಮಕೂರು: ಮಂಜುನಾಥ ನಗರದಲ್ಲಿ ನೂತನವಾಗಿ ಆರಂಭಿಸಲಾಗಿರುವ ಕೆನರಾ ಬ್ಯಾಂಕ್‌ನ 51ನೇ ನೂತನ ಶಾಖೆಯನ್ನು ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ  ಉದ್ಘಾಟಿಸಿದರು.
ನೂತನ ಶಾಖೆ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಕೆನರಾ ಬ್ಯಾಂಕ್ ತುಂಬಾ ಹಳೆಯ ಬ್ಯಾಂಕ್ ಆಗಿದ್ದು, ಗ್ರಾಹಕರಿಗೆ ಉತ್ತಮ ಸೇವೆ ಒದಗಿಸು ತ್ತಿದೆ. ಇಂದು ಮಂಜುನಾಥ ನಗರದಲ್ಲಿ ತನ್ನ 51ನೇ ಶಾಖೆಯನ್ನು ತೆರೆದಿದೆ. ಇದು ಹೀಗೆ ಮುಂದುವರೆದು ಮುಂದಿನ ದಿನಗಳಲ್ಲಿ 100 ಶಾಖೆಗಳನ್ನು ತೆರೆಯಲಿ ಎಂದು ಆಶಿಸಿದರು.
ಕೆನರಾ ಬ್ಯಾಂಕ್ ಸಹಾಯಕ ಮಹಾಪ್ರಬಂಧಕರಾದ ರವಿ ಮಾತನಾಡಿ,  ನಮ್ಮ ಬ್ಯಾಂಕ್‌ನ 51ನೇ ಶಾಖೆಯನ್ನು ತೆರೆಯಲಾಗಿದೆ. ಈ ಭಾಗದಲ್ಲಿ ಯಾವುದೇ ಬ್ಯಾಂಕ್ ಇಲ್ಲದಿರುವುದರಿಂದ ಗ್ರಾಹಕರ ಅನುಕೂಲಕ್ಕಾಗಿ ನೂತನ ಶಾಖೆಯನ್ನು ತೆರೆದಿರುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಕೆನರಾ ಬ್ಯಾಂಕ್ ಮಹಾಪ್ರಬಂಧಕರಾದ ಪಿ. ಗೋಪಿಕೃಷ್ಣ, ಅಶೋಕ್ ಟಿ., ವ್ಯವಸ್ಥಾಪಕರಾದ ಜಿ. ಕಿರಣ್‌ಕುಮಾರ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *