Sunday, 15th December 2024

ಮಂಡ್ಯ ಬಿಟ್ಟು ಹೋಗುವುದಿಲ್ಲ, ರಾಜಕೀಯ ಅನಿವಾರ್ಯವಲ್ಲ: ಸುಮಲತಾ ಅಂಬರೀಷ್‌

SumalathaAmbareesh

ಮಂಡ್ಯ : ನಾನು ಮಂಡ್ಯ ಬಿಟ್ಟು ಯಾವ ಕ್ಷೇತ್ರಕ್ಕೂ ಹೋಗುವುದಿಲ್ಲ. ನನಗೆ ರಾಜಕೀಯ ಅನಿವಾರ್ಯವಲ್ಲ, ಮಂಡ್ಯ, ಮಂಡ್ಯದ ಜನತೆಗಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಷ್‌ ಹೇಳಿದರು.

ಮಂಡ್ಯ ಜನರ ಋಣ ತೀರಿಸಲು ಮಂಡ್ಯದಲ್ಲಿದ್ದೇನೆ. ಮಂಡ್ಯ ನನ್ನನ್ನು ಬಿಡಲ್ಲ, ನಾನು ಬಿಟ್ಟು ಹೋಗಲ್ಲ. ಮಂಡ್ಯದ ಜನತೆ ಗಾಗಿ ಹಗಲು ರಾತ್ರಿ ದುಡಿಯುತ್ತೇನೆ. ಚುನಾವಣೆ ಹತ್ತಿರ ಬಂದ ನನ್ನ ಬಗ್ಗೆ ಸುಳ್ಳು ಸುದ್ದಿ ಹರಿಸುತ್ತಾರೆ ಎಂದು ಮಂಡ್ಯದಲ್ಲಿ ಸುಮಲತಾ ಹೇಳಿಕೆ ನೀಡಿದ್ದಾರೆ.

ಕೆಲವರು ಕ್ರೆಡಿಟ್‌ಗಾಗಿ ಕೆಲಸ ಮಾಡಿಸುತ್ತಾರೆ. ಎಲ್ಲಾ ಕೆಲಸ ಅವರೇ ಮಾಡಿಸುತ್ತಾರೆ. ಈ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ. ನನಗೆ ಯಾರ ಮೇಲೂ ಕೋಲ್ಡ್‌ ವಾರ್‌ ಇಲ್ಲ. ನನ್ನಿಂದ ಯಾವುದೇ ಕಾಮಗಾರಿ ವಿಳಂಬವಾಗಿಲ್ಲ ಪರೋಕ್ಷವಾಗಿ ಪ್ರತಾಪ್‌ ಸಿಂಹ ವಿರುದ್ಧ ಕಿಡಿ ಕಾರಿದರು.