ಚಿಕ್ಕನಾಯಕನಹಳ್ಳಿ : ಶೈಕ್ಷಣಿಕ ರ‍್ಷದ ಸಿದ್ಧತೆಗಾಗಿ ಪಟ್ಟಣದಲ್ಲಿರುವ ಕೆ.ಎಂ.ಹೆಚ್.ಪಿ.ಎಸ್.ಸರಕಾರಿ ಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗು ಆರೋಗ್ಯ ಇಲಾಖೆ ಸಹಯೋಗದಲ್ಲಿ ಶಾಲಾ ಆವರಣ ಹಾಗೂ ಕೊಠಡಿಗಳ ಸ್ವಚ್ಛತೆ ಮಾಡುವ ಶ್ರಮದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಶೆಟ್ಟಿಕೆರೆ ಹೋಬಳಿ ಘಟಕದ ಗೌವಾಧ್ಯಕ್ಷರು ಹಾಗು ತಾಲೂಕು ವೈದ್ಯಾಧಿ ಕಾರಿಗಳಾದ ಡಾಟಟನವೀನ್ ರವರು ಮಾತನಾಡಿ ಆರೋಗ್ಯ ಮತ್ತು ನರ‍್ಮಲ್ಯ ಕಾಪಾಡಿಕೊಂಡರೆ ಪರಿಸರ ಸ್ವಚ್ಛವಾಗಿರುತ್ತದೆ. ಅದಕ್ಕಾಗಿ ನಾವು ಇಂದು ತಾಲೂಕು ಕಸಾಪ ಹಾಗೂ ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯ ದಲ್ಲಿ ಮಾನ್ಯ ಶಿಕ್ಷಣ ಸಚಿವರು ಸಂದೇಶದನ್ವಯ ರ‍್ಕಾರಿ ಶಾಲೆಯಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿ ದ್ದೇವೆ ಇದು ಕೇವಲ ಶಿಕ್ಷಕರು ಮತ್ತು ಪೋಷಕರ ಜವಾಬ್ದಾರಿಯಾಗಿರದೆ ಸಮುದಾಯದ ಜವಾಬ್ದಾರಿಯಾಗ ಬೇಕಾಗಿದೆ ಮುಂದಿನ ದಿನಗಳಲ್ಲಿ ಈ ಅಭಿಯಾನ ವಿಸ್ತರಿಸುವುದಾಗಿ ತಿಳಿಸಿದರು
ತಾಲೂಕು ಕಸಾಪ ಹಾಗೂ ಎಸ್ಡಿಎಂಸಿ ಅಧ್ಯಕ್ಷರಾದ ಎಂ ಎಸ್ ರವಿಕುಮಾರ್ ಕಟ್ಟೆಮನೆ ಅವರು ಮಾತನಾಡಿ ರ‍್ಕಾರಿ ಶಾಲೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ಅತ್ಯಂತ ಮಹತ್ವದ್ದಾಗಿದ್ದು ಈ ದಿನ ಕನ್ನಡ ಸಾಹಿತ್ಯ ಪರಿಷತ್ತು, ಆರೋಗ್ಯ ಇಲಾಖೆ, ಹಿರಿಯ ವಿದ್ಯರ‍್ಥಿಗಳ ಸಂಘಟನೆ ಆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ನೆಟ್ಟಿವೆ ಎಂದು ನುಡಿದರು.
ಈ ಸಂರ‍್ಭದಲ್ಲಿ ತಾಲೂಕು ಕಸಾಪ ಗೌರವ ಕರ‍್ಯರ‍್ಶಿಗಳಾದ ಸಿ ಎ ನಿರೂಪ ರಾವತ್, ಶಾಲೆಯ ಮುಖ್ಯೋಪಾಧ್ಯಾಯರು ಹಾಗು ಕಸಾಪ ಗೌರವ ಕೋಶಾಧ್ಯಕ್ಷ ರಾದ ಎಂ ಎಸ್ ಯೋಗೀಶ್ ಕುಮಾರ್, ನಗರ ಕಸಾಪ ಅಧ್ಯಕ್ಷರಾದ ಸಿ ಹೆಚ್ ಗಂಗಾಧರ ಮಗ್ಗದ ಮನೆ, ತಾಲೂಕು ಕಸಾಪ ಸಂಚಾಲಕರಾದ ಲೋಕೇಶ್ ಬಡಗಿ ಆರೋಗ್ಯ ಇಲಾಖೆಯ ಕುಮಾರ್, ಮುರುಳಿ, ಶ್ರೀಧರ್,ಉಮಾಶಂಕರ್, ಅಂಜನಿ, ತಾಲೂಕು ಕಸಾಪ ಕರ‍್ಯರ‍್ತರು ಹಾಗು ಶಿಕ್ಷಕರು ಭಾಗವಹಿಸಿದ್ದರು.
,