Thursday, 12th December 2024

6 ನೇ ವರ್ಷದ ಸಂಭ್ರಮದಲ್ಲಿ ಸಿದ್ಧಗಂಗಾ ಆಸ್ಪತ್ರೆ ಕ್ಯಾಥಲ್ಯಾಬ್‌

ತುಮಕೂರು: ಸಿದ್ಧಗಂಗಾ ಆಸ್ಪತ್ರೆಯ ಕ್ಯಾಥಲ್ಯಾಬ್‌ ಘಟಕಕ್ಕೆ ೬ ವರ್ಷಗಳು ತುಂಬಿದ್ದು ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಹೃದ್ರೋಗಿಗಳಿಗೆ ಚಿಕಿತ್ಸೆ ನೀಡಿರುವುದು ವಿಭಾಗದ ಹೆಮ್ಮೆ ಎಂದು ಸಿದ್ಧಗಂಗಾ ಆಸ್ಪತ್ರೆ ಸೂಪರ್‌ ಸ್ಪೆಷಾಲಿಟಿ ವಿಭಾಗದ ಮುಖ್ಯಸ್ಥ ಹಾಗೂ ಹೃದ್ರೋಗ ತಜ್ಞ ಡಾ.ಎಚ್.ಎಂ. ಭಾನುಪ್ರಕಾಶ್‌ ತಿಳಿಸಿದರು.
ಅವರು ಕ್ಯಾಥಲ್ಯಾಬ್‌ ೬ನೇ ವರ್ಷದ ಸಂಭ್ರಮದ ಹಿನ್ನಲೆಯಲ್ಲಿ ಮಾತನಾಡಿ ನಮ್ಮ ಈ ಸಾಧನೆಗೆ ಸಾರ್ವಜನಿಕರು ನಮ್ಮ ಮೇಲೆ ವಿಶ್ವಾಸವಿಟ್ಟು ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದು ಪ್ರಮುಖ ಕಾರಣವಾಗಿದ್ದು, ೧೫ ಸಾವಿರ ಆಂಜಿಯೋಗ್ರಾಂ, ೭ ಸಾವಿರಕ್ಕೂ ಹೆಚ್ಚು ಆಂಜಿಯೋಪ್ಲಾಸ್ಟಿ ಮಾಡಿರುವುದೇ ನಮ್ಮ ಹೆಜ್ಜೆಗುರುತನ್ನು ತಿಳಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ಹೃದ್ರೋಗ ತಜ್ಞ ಡಾ.ಶರತ್‌ ಕುಮಾರ್‌ ಮಾತನಾಡಿ ಸಿದ್ಧಗಂಗಾ ಆಸ್ಪತ್ರೆ ಹೃದ್ರೋಗ ವಿಭಾಗದಲ್ಲಿ ಹೃದಯಕ್ಕೆ ಸಂಬಂಧಿಸಿದ ಎಲ್ಲಾ ಸೌಕರ್ಯಗಳನ್ನೂ ಕೂಡ ಒಳಗೊಂಡಿದ್ದು, ಅತ್ಯಾಧುನಿಕ ಒಸಿಟಿ ತಂತ್ರಜ್ಞಾನದ ಮೂಲಕ ವೇಗ ಹಾಗೂ ನಿಖರ ಚಿಕಿತ್ಸೆ ನೀಡುತ್ತಿದ್ದು ಎಲ್ಲಾ ತೆರೆದ ಹೃದಯ ಚಿಕಿತ್ಸೆ ಸೇರಿದಂತೆ ಎಲ್ಲಾ ರೀತಿಯ ಶಸ್ತ್ರಚಿಕಿತ್ಸೆಗಳು ಲಭ್ಯವಿರುವುದು ವಿಭಾಗದ ಪರಿಪೂರ್ಣತೆಗೆ ಸಾಕ್ಷಿ ಎಂದರು.

ಕಾರ್ಡಿಯೋವ್ಯಾಸ್ಕ್ಯುಲಾರ್‌ ಸರ್ಜನ್‌ ಡಾ.ರವಿಚಂದ್ರ, ಹೃದ್ರೋಗ ತಜ್ಞ ಡಾ.ನಿಲೇಶ್‌ ಸೇರಿದಂತೆ ಕ್ಯಾಥಲ್ಯಾಬ್‌ ಘಟಕದ ಸಿಬ್ಬಂದಿ ಉಪಸ್ಥಿತರಿದ್ದರು.