Sunday, 15th December 2024

ಜೂನ್ 6, 7ರಂದು ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BSWWB) ಬೆಂಗಳೂರಿನಲ್ಲಿ ಕಾವೇರಿ ನೀರು ಸರಬರಾಜು ವ್ಯತ್ಯಯವಾಗುವ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಜೂನ್ 6 ಮತ್ತು ಜೂನ್ 7ರಂದು ನಗರದ ಹಲವಾರು ಭಾಗಗಳಲ್ಲಿ 24 ಗಂಟೆಗಳ ಕಾವೇರಿ ನೀರು ಸರಬರಾಜು ಕಡಿತವನ್ನು ಘೋಷಿಸಿದೆ. ಕಾವೇರಿ ನೀರು ಸರಬರಾಜು ಘಟಕಗಳನ್ನು ಸ್ಥಗಿತಗೊಳಿಸುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಕಾವೇರಿ 5ನೇ ಹಂತದ ಯೋಜನೆಯಲ್ಲಿ ಕೆಲಸ ಆರಂಭವಾಗಿದೆ ಈ ಕಾರಣಕ್ಕಾಗಿ, ಮಂಡಳಿಯು ತನ್ನ ಎಲ್ಲಾ ಪಂಪಿಂಗ್ ಸ್ಟೇಷನ್‌ಗಳನ್ನು ಜೂನ್ 6 ರಂದು ಮುಚ್ಚಲಿದೆ. ಈ ಬಗ್ಗೆ ನೀರು ಕೊರತೆ ಅನುಭವಿಸಲಿರುವ ಪ್ರದೇಶಗಳಿಗೆ ಮಾಹಿತಿ ನೀಡಲಾಗಿದೆ.

ಕಾವೇರಿ ನೀರು ಸರಬರಾಜು 5ನೇ ಹಂತದ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ. 6ರಂದು ಕಾವೇರಿ ನೀರು ಸರಬರಾಜು ಘಟಕಗಳನ್ನು ಸ್ಥಗಿತಗೊಳಿಸುತ್ತಿರುವುದರಿಂದ, ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.