Wednesday, 9th October 2024

ಚಾಮುಂಡಿ ಬೆಟ್ಟದ ಅವ್ಯವಸ್ಥೆ, ಪ್ರಾಧಿಕಾರದ ವಿರುದ್ಧ ಹಳೆ ಡಿಸಿ ಆಫೀಸ್ ಮುಂದೆ ಪ್ರತಿಭಟನೆ

ಕರ್ನಾಟಕ ಸೇನಾ ಪಡೆ ವತಿಯಿಂದ ಬುಧವಾರ ಚಾಮುಂಡಿ ಬೆಟ್ಟದ ಅವ್ಯವಸ್ಥೆ ಹಾಗು ಪ್ರಾಧಿಕಾರದ ವಿರುದ್ಧ ಹಳೆ ಡಿಸಿ ಆಫೀಸ್ ಮುಂದೆ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಸರ್ಕಾರ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನಕ್ಕೆ, ಸ್ಮಾರ್ಟ್ ಕಾರ್ಡ್ ಜಾರಿಗೊಳಿಸಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಹಾಗೂ ಚಾಮುಂಡಿ ಬೆಟ್ಟದ ಅಭಿವೃದ್ಧಿಗಾಗಿ ಹೊಸದಾಗಿ ಪ್ರಾಧಿಕಾರ ರಚಿಸುತ್ತಿರುವ ಕ್ರಮ ವನ್ನು ವಿರೋಧಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದೇವೆ.

ಮೈಸೂರು ಅರಸರ ಸಂಸ್ಥಾನದ ಆದಿದೇವತೆ, ನಾಡದೇವತೆ, ತಾಯಿ ಚಾಮುಂಡೇಶ್ವರಿ ದೇವಿ ಬೆಟ್ಟವನ್ನು ಶ್ರದ್ಧಾ ಭಕ್ತಿಯಿಂದ ಅಭಿವೃದ್ಧಿಪಡಿಸಿದ್ದು, ದೇವಿಯ ಮಹಾನ್ ಆರಾಧಕರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ರವರು, ಬೆಟ್ಟದಲ್ಲಿ, ದೇವಸ್ಥಾನಕ್ಕೆ ಪೂಜೆ ಮಾಡುವ ಅರ್ಚಕರಿಂದ ಹಿಡಿದು ಎಲಾ ವರ್ಗದವರಿಗೂ ಆಗಿನ ಕಾಲದಲ್ಲಿಯೇ ಅಲಿ. ಮನೆಗಳನ್ನು ನಿರ್ಮಿಸಿ ಕೊಟ್ಟದ್ದಾರೆ.

ಜೊತೆಗೆ ಚಾಮುಂಡಿ ಬೆಟ್ಟ ಈಗ ಒಂದು ಗ್ರಾಮ ಇಲಿ. ಗ್ರಾಮ ಪಂಚಾಯಿತಿ ಇದೆ. ಈಗ ಇದೆ. ಪ್ರಾಧಿಕಾರ ರಚನೆ ಯಾದರೆ ಸುಮಾರು 300 ಮೀಟರ್ ಸುತ್ತಳತೆ (ಅಂದರೆ 1000 ಅಡಿ ಸುತ್ತಮುತ್ತ) ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಾರೆ. ಆಗ ಇಡೀ ಗ್ರಾಮವೇ ಹೊರಟು ಹೋಗುತ್ತದೆ- ಇಲ್ಲದಂತಾಗುತ್ತದೆ. ಮಹಾರಾಜರು ಮೈಸೂರು ಅಭಿವೃದ್ಧಿಗಾಗಿ ಆಗಲೇ ಸಾವಿರಾರು ಎಕರೆಗಳನ್ನು ದಾನ ನೀಡಿದ್ದಾರೆ. ದೇವಸ್ಥಾನಗಳು ಮನಶಾಂತಿಯ ಸ್ಮಳವಾಗ ಬೇಕೇ ಹೊರತು, ವ್ಯಾಪಾರ ಸ್ಮಳಗಳಾಗಬಾರದು. ರಾಜ್ಯ ಸರ್ಕಾರ ಸ್ಮಾರ್ಟ್ ಕಾರ್ಡ್ ಹೆಸರಿನಲ್ಲಿ 10,000 25000 ಹಾಗೂ ರೂ.1,00,000 ನಿಗದಿಪಡಿಸಲು ಉದ್ದೇಶಿಸಿರುವುದು ಅತ್ಯಂತ ಖಂಡನೀಯವಾಗಿದೆ. ರಾಜ್ಯ ಸರ್ಕಾರ ಬಿಟ್ಟ ಭಾಗ್ಯಗಳಿಂದ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿ, ಈಗ ದೇವರ ಹೆಸರಿನಲ್ಲಿ ಹಗಲು ದರೋಡೆ ಮಾಡಲು ಹೊರಟಿರುವುದು ಅತ್ಯಂತ ನೋವಿನ ಸಂಗತಿ ಆಗಿದೆ.

ಮತ್ತೊಂದು ಸತ್ಯ ಸಂಗತಿ ಏನೆಂದರೆ ಜಯಲಕ್ಷ್ಮಿ ಎಂಬ ಸೆಕ್ಯೂರಿಟಿ ಗಾರ್ಡ್. ಎಂಟು ವರ್ಷಗಳ ಹಿಂದೆ ಅಲ್ಲಿ ಕೆಲಸಕ್ಕೆ ಬಂದು ಸೆಕ್ಯೂರಿಟಿ ಗಾರ್ಡ್ ಆಗಿ. ಕೆಲಸಕ್ಕೆ ಸೇರಿ. ಬೆಟ್ಟದಲ್ಲಿ ಯಾರಿಗೂ ಸಹ ಹೆದರುವ ಪ್ರಮೇಯವೇ ಇಲ್ಲದ ಹಾಗೆ ಎಲ್ಲರ ಹತ್ತಿರ ಗೂಗಲ್ ಫೋನ್ ಪೆ ಹಾಕಿಸಿಕೊಂಡು. ಪ್ರತಿದಿನ 20,000 ಕಲೆಕ್ಷನ್ ಮಾಡಿಕೊಂಡು ಹೋಗುತ್ತಾಳೆ. ಯಾರಾದರೂ ಅವಳ ಬಗ್ಗೆ ಕಂಪ್ಲೇಂಟ್ ಮಾಡಿದರೆ ರಾಜಕೀಯ ನಾಯಕರ ಹೆಸರುಗಳನ್ನು ಹೇಳಿ ಹೆದರಿಸುತ್ತಾಳೆ. ಈ ವಿದ್ಯಾಮಾನಗಳು ಗೊತ್ತಾಗಿ ಆಕೆಯನ್ನು ಕೆಲಸದಿಂದ ತೆಗೆದು. ಹಾಕಿರುತ್ತಾರೆ. ಆದರೂ ಈಗಿರುವ ಬೆಟ್ಟದ ಅಧಿಕಾರಿ. ಆಕೆಯನ್ನು ಅರಮನೆಗೆ ಕೆಲಸಕ್ಕೆ ತೆಗೆದುಕೊಂಡಿರುತ್ತಾರೆ. ಸ್ವಲ್ಪ ದಿನ ಇಲ್ಲೇ ಮಾಡುತ್ತಿರು ನಂತರ ಬೆಟ್ಟಕ್ಕೆ ಕಳುಹಿಸುತ್ತೇನೆ ಎಂದು ಹೇಳುತ್ತಾರೆ ಹೀಗಾದರೆ ಯಾರನ್ನು ನ್ಯಾಯ ಕೇಳುವುದು ಎಂದು ಭಕ್ತಾದಿ ಗಳ ಪ್ರಶ್ನೆಯಾಗಿದೆ

ಮೈಸೂರು ನಗರದಲ್ಲಿ ಚಾಮುಂಡಿ ಬೆಟ್ಟ ಇರುವುದರಿಂದ ಪ್ರಾಧಿಕಾರದ ಅವಶ್ಯಕತೆಯೇ ಇಲ್ಲ. ಈ ಪ್ರಾಧಿಕಾರ ರಚನೆಯಾದರೆ ವಾಲ್ಮೀಕಿ ಅಭಿವೃದ್ಧಿ ಪ್ರಾಧಿಕಾರದಲ್ಲಾದಂತೆ, ಇಲ್ಲೂ ಹಗರಣಗಳಿಗೆ ದಾರಿ ಮಾಡಿ ಕೊಟ್ಟಂತಾ ಗುತ್ತದೆ. ಈಗಾಗಲೇ ಚಾಮುಂಡಿ ಬೆಟ್ಟ ಮುಜರಾಯಿ ಇಲಾಖೆ, ಧಾರ್ಮಿಕ ದತ್ತಿ ಗೆ ಒಳಪಟ್ಟು ಭಕ್ತಾದಿಗಳಿಂದ ಕೋಟ್ಯಂತರ ಆದಾಯ ಬರುತ್ತಿದೆ. ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಈ ಹಣವನ್ನೇ ಸದ್ಬಳಕೆ ಮಾಡಿಕೊಳ್ಳ ಬೇಕೆಂದು ಹಾಗೂ ಸ್ಮಾರ್ಟ್ ಕಾರ್ಡ್ ನ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಈ ಕೂಡಲೇ ಕೈಬಿಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಿಗೆ ಒತ್ತಾಯವನ್ನು ಮಾಡುತ್ತಿದ್ದೇವೆ,

ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿ, ಪ್ರಭುಶಂಕರ್ ಎಂ ಬಿ, ಪ್ರಜೀಶ್, ಕೃಷ್ಣಪ್ಪ, ಸುರೇಶ್ ಗೋಲ್ಡ್, ಶಿವಲಿಂಗಯ್ಯ, ನಾರಾಯಣ ಗೌಡ, ಕುಮಾರ್ ಗೌಡ, ಸಿಂದುವಳ್ಳಿ, ಶಿವಕುಮಾರ್, ವರಕೂಡು ಕೃಷ್ಣಗೌಡ, ಮಂಜುಳ, ವಿಜಯೇಂದ್ರ, ಭಾಗ್ಯಮ್ಮ, ರಘು ಅರಸ್, ಎಳನೀರು ರಾಮಣ್ಯ, ಪ್ರದೀಪ, ಗುರು ಮಲ್ಲಪ್ಪ, ಶಂಕರ್ ಗುರು, ಚಂದ್ರಶೇಖರ್, ಶಾಂತಕುಮಾರ್, ರಾಧಾಕೃಷ್ಣ ಅಕ್ಟರ್ ತ್ಯಾಗರಾಜ್, ಮಹಾದೇವ, ಸ್ವಾಮಿ ಗೌಡ, ಕೃಷ್ಣಮೂರ್ತಿ, ವಿಷ್ಣು ಉಪಸ್ಥಿತರಿದ್ದರು.

ಇದನ್ನೂ ಓದಿ: Mysore News: ಮೈಸೂರಿನ ಉತ್ತರಾದಿ ಮಠದಲ್ಲಿ ಸಂಭ್ರಮದಿಂದ ಶ್ರೀ ಧನ್ವಂತರಿ ಜಯಂತಿ