ತುಮಕೂರು: ಬಾಲಕಿಯೊಬ್ಬಳ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಅರಣ್ಯ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.
ತಾಲೂಕಿನ ಚಿಕ್ಕ ಬೆಳ್ಳಾವಿಯಲ್ಲಿ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಲೇಖನ ಎಂಬ ಏಳು ವರ್ಷದ ಬಾಲಕಿ ಮೇಲೆ(ನ.7) ದಾಳಿ ಮಾಡಿತ್ತು. ತಕ್ಷಣ ಎಚ್ಚೆತ್ತ ಬಾಲಕಿಯ ತಂದೆ ಚಿರತೆಯನ್ನು ಬೆದರಿಸಿ ಓಡಿಸುವ ಮೂಲಕ ಮಗುವನ್ನು ರಕ್ಷಿಸಿದ್ದರು. ಚಿರತೆಯ ದಾಳಿಯಿಂದಾಗಿ ಸುತ್ತಮುತ್ತಲ ಗ್ರಾಮದ ಜನರು ಆತಂಕಕ್ಕೊಳಗಾಗಿದ್ದರು.
ಚಿರತೆಯ ಚಲನವಲನದ ಬಗ್ಗೆ ಗ್ರಾಮಸ್ಥರಿಂದ ಮಾಹಿತಿಯನ್ನು ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದ ಹೊರವಲಯದ ಕೋಳಿ ಫಾರ್ಮ್ ಬಳಿ ಬೋನು ಇರಿಸಿದ್ದರು.
ಶನಿವಾರ ಬೆಳಗ್ಗಿನ ಜಾವ ಕೊನೆಗೂ ಚಿರತೆ ಈ ಬೋನಿಗೆ ಬಿದ್ದಿದೆ. ಆರ್.ಎಫ್.ಒ ಪವಿತ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.